ಕೆಪ್ಲೆರ್ ಉಪಗ್ರಹ
From Wikipedia, the free encyclopedia
ಕೆಪ್ಲರ್ ಕೃತಕ ಉಪಗ್ರಹವು, ಸೌರಮಂಡಲದ ಹೊರಗಿನ, ಬಹುದೂರದ ಇತರೆ ನಕ್ಷತ್ರಗಳನ್ನು ಹಾಗು ಅವುಗಳನ್ನು ಪರಿಭ್ರಮಿಸುವ ಭೂಮಿ ಗಾತ್ರದ ಗ್ರಹಗಳನ್ನು ಅನ್ವೇಷಿಸಲು ಅಮೇರಿಕಾದ ನಾಸಾ ಸಂಸ್ಥೆಯು ಬಾಹ್ಯಾಕಾಶಕ್ಕೆ ಉಡಾಯಿಸಿದ, ಒಂದು ಬಾಹ್ಯಾಕಾಶ ವೀಕ್ಷಣಾಲಯ ಆಗಿದೆ. ಖಗೋಳಶಾಸ್ತ್ರಜ್ಞನಾದ ಜೊಹಾನ್ಸ್ ಕೆಪ್ಲರ್ ಹೆಸರಿನ ಈ ಬಾಹ್ಯಾಕಾಶ ನೌಕೆಯನ್ನು ಮಾರ್ಚ್ ೭, ೨೦೦೯ ರಂದು ಉಡಾವಣೆ ಮಾಡಲಾಯಿತು. ಕ್ಷೀರಪಥದ ವಿಸ್ತರತೆಯ ಪ್ರದೇಶದಲ್ಲಿ ಒಂದು ಭಾಗವನ್ನು ವಾಸಯೋಗ್ಯ ವಲಯವಾಗಿ ಪರಿಗಣಿಸಿ, ಸುಮಾರು ಭೂಮಿ ಗಾತ್ರದ ಗ್ರಹಗಳನ್ನು ಅನ್ವೇಷಿಸಲು ಮತ್ತು ಕ್ಷೀರಪಥದಲ್ಲಿರುವ ಶತಕೋಟಿ ನಕ್ಷತ್ರಗಳ ಪ್ಶೆಕಿ ಎಷ್ಟು ನಕ್ಷತ್ರಗಳಿಗೆ ಈ ರೀತಿಯಾದ ಗ್ರಹಗಳು ಇವೆ ಎಂಬುದರ ಅಂದಾಜು ಪಡೆಯಲು ಹಾಗು ಸಮೀಕ್ಷೆ ನಡೆಸಲು ಈ ಉಪಗ್ರವನ್ನು ವಿನ್ಯಾಸಗೊಳಿಸಲಾಗಿದೆ. ಕೆಪ್ಲರ್ನ ಒಂದು ಭಾಗವಾದ ಫೊಟೊಮೀಟರ್, ಒಂದೆ ಸ್ಥಿರ ಕ್ಷೇತ್ರದಲ್ಲಿ ನಿರಂತರವಾಗಿ ೧೪೫೦೦೦ 'ಪ್ರಧಾನ ಸರಣಿ ನಕ್ಷತ್ರ'[1] ಗಳ ಹೊಳಪನ್ನು ವೀಕ್ಷಿಸುತ್ತದೆ. ಇದರ ಮಾಹಿತಿಗಳನ್ನು ಭೂಮಿಗೆ ರವಾನಿಸುತ್ತದೆ. ಗ್ರಹಗಳು ತಮ್ಮ ನಕ್ಷತ್ರದ ಸುತ್ತಲಿನ ಕಕ್ಷೆಯಲ್ಲಿ ಸುತ್ತುವಾಗ, ನಕ್ಷತ್ರದ ಮುಂದೆ ದಾಟಲು, ಇದರಿಂದ ಉಂಟಾಗುವ ಆವರ್ತಕ ಕಳೆಗುಂದುವಿಕೆಯನ್ನು ಪತ್ತೆಮಾಡುತ್ತದೆ.
Operator | ನಾಸಾ |
---|---|
Mission type | ಬಾಹ್ಯಾಕಾಶ ವೀಕ್ಷಣಾಲಯ |
Launch date | ೦೭ ಮಾರ್ಚ್ ೨೦೦೯ |
Launch vehicle | ಡೆಲ್ಟಾ-೨ |
Launch site | CCAFS SLC-17B Cape Canaveral, FL (ಕೇಪ್ ಕೆನೆವರಾಲ್) |
Mission duration | ಯೋಜಿತ ಕಾಲಾವಧಿ-3.5 ವರ್ಷಗಳು |
Mass | 1,052.4 kg (ಉಡಾವಣೆಯ ಸಮಯದಲ್ಲಿ) |
Dimensions | 4.7 m × 2.7 m (15.4 ft × 8.9 ft) |
Power | 1100 watts |
Orbital elements | |
Reference system | ಸೂರ್ಯ ಕೇಂದ್ರಿತ ಕಕ್ಷೆ |
Regime | Earth-trailing |
Inclination | 0.44745 degrees |