ಸದಸ್ಯ:Yeshwanth S A/ನನ್ನ ಪ್ರಯೋಗಪುಟ
From Wikipedia, the free encyclopedia
ಲಾರೆನ್ಸ್ ಪೇಜ್ (ಲ್ಯಾರಿ ಪೇಜ್), ಇವರು ೨೬ ಮಾರ್ಚ್ ೧೯೭೩ ರಂದು ಅಮೇರಿಕದಲ್ಲಿ ಜನಿಸಿದರು. ಇವರು ಕ್ಯಾಲಿಫೊರ್ನಿಯದಲ್ಲಿರುವ ಪಾಲೊ ಆಲ್ಟೊ ಎಂಬ ಊರಿನಲ್ಲಿ ವಾಸಿಸಿದರು. ಲ್ಯಾರಿ ಪೇಜ್ ಅವರ ತಂದೆಯ ಹೆಸರು ಕಾರ್ಲ್ ವಿಕ್ಟರ್ ಪೇಜ್ ಹಾಗು ತಾಯಿಯ ಹೆಸರು ಗ್ಲೋರಿಯಾ. ಪೇಜ್ ರವರು ೧೯೬೫ ರಂದು ಗಣಕಯಂತ್ರ ವಿಜ್ಞಾನದಲ್ಲಿ ಪಿ.ಎಚ್.ಡಿ ಪದವಿಯನ್ನು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ [1] ಪಡೆದರು. ಪೇಜ್ ರವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಗಣಕಯಂತ್ರ ವಿಜ್ಞಾನದ ಪ್ರೊಫೆಸರ್ ಆಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಪೇಜ್ ರವರು ಒಂದು ಸಂದರ್ಶನದಲ್ಲಿ ತಮ್ಮ ಬಾಲ್ಯದ ದಿನಗಳ ಬಗ್ಗೆ ಹೀಗೆಂದು ಹೇಳಿದ್ದಾರೆ "ನಾನು ಬಾಲ್ಯದಲ್ಲಿ ಗಣಕಯಂತ್ರ, ವಿಜ್ಞಾನ,ತಂತ್ರಜ್ಞಾನದ ಪುಸ್ತಕಗಳನ್ನು ತಮ್ಮ ಮನೆಯಲ್ಲಿ ರಶಿಯಾಗಿ ಹರಡಿದ್ದೆ" ಎಂದು ಹೇಳಿದರು. ಇವರು ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವುದರಲ್ಲಿ ಕಳೆಯುತ್ತಾರೆ. ಇವರಿಗೆ ಸಂಗೀತದಲ್ಲಿ ಬಹಳಷ್ಟು ಆಸಕ್ತಿ ಇದೆ. ಪೇಜ್ ರವರಿಗೆ ಸುಮಾರು ಆರು ವಯಸ್ಸಿನಿಂದಲೇ ಗಣಕಯಂತ್ರದ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಅವರು ತಮ್ಮ ಮನೆಯಲ್ಲಿದ್ದ ಮೊದಲನೆಯ ಪೀಳಿಗೆಯ ಗಣಕಯಂತ್ರವನ್ನು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದರು. ಪೇಜ್ ಮತ್ತು ಬ್ರಿನ್ ಇವರಿಬ್ಬರೂ ಬಹಳ ಒಳೆಯ ಸ್ನೇಹಿತರು. ಇವರಿಬ್ಬರೂ ಕೂಡಿ ಹೊಸ ಹೊಸ ಯೋಜನೆಯ ಬಗ್ಗೆ ಚರ್ಚಿಸುತ್ತಿದ್ದರು. ಪೇಜ್ ಅವರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ಕುಟುಂಬದ ಸದಸ್ಯರ ಬಳಿ ಕರೆಯುತ್ತಿದ್ದರು.
ಲ್ಯಾರಿ ಪೇಜ್ | |
---|---|
ಜನನ | ಲಾರೆನ್ಸ್ ಪೇಜ್ (1973-03-26) ಮಾರ್ಚ್ ೨೬, ೧೯೭೩ (ವಯಸ್ಸು ೫೧) ಅಮೇರಿಕ |
ರಾಷ್ಟ್ರೀಯತೆ | ಅಮೆರಿಕನ್ |
ಶಿಕ್ಷಣ ಸಂಸ್ಥೆ | ಮಿಚಿಗನ್ ವಿಶ್ವವಿದ್ಯಾಲಯ |
ವೃತ್ತಿ(ಗಳು) | ಕಂಪ್ಯೂಟರ್ ವಿಜ್ಞಾನಿ, List of Internet entrepreneurs |
Known for | ಗೂಗಲ್,ಸಹ ಸಂಸ್ಥಾಪಕ ,ಆಲ್ಫಾಬೆಟ್ ಸಿಇಒ, |
ಸಂಗಾತಿ | ಲುಸಿನ್ಡಾ ಸೌತ್ವರ್ತ್ (ವಿವಾಹ 2007) |
Signature | |