ಹೆನ್ರಿ ಫೋರ್ಡ್
ಅಮೇರಿಕದ ಕೈಗಾರಿಕೋದ್ಯಮಿ / From Wikipedia, the free encyclopedia
ಹೆನ್ರಿ ಫೋರ್ಡ್[1] (ಜುಲೈ ೩೦, ೧೮೬೩ - ಏಪ್ರಿಲ್ ೭, ೧೯೪೭) ಅಮೇರಿಕದ ಕೈಗಾರಿಕೋದ್ಯಮಿ, ಫೋರ್ಡ್ ಮೋಟಾರ್ ಕಂಪನಿಯ ಸಂಸ್ಥಾಪಕರು ಮತ್ತು ಸಾಮೂಹಿಕ ಉತ್ಪಾದನೆ ಜೋಡಣೆ ತಂತ್ರ ಅಭಿವೃದ್ಧಿಯ ಪ್ರಾಯೋಜಕರು.ಫೋರ್ಡ್ ಮೋಟಾರ್ ಕಂಪನಿ ಮಾಲೀಕರಾಗಿ, ಅವರು ವಿಶ್ವದ ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಯಾದರು . ೧೯ ನೆಯ ಶತಮಾನದ ಕೊನೆಯಲ್ಲಿ ಜಾಗತಿಕ ಕೈಗಾರಿಕಾ ಬೆಳವಣೆಗೆ ರೈಲು ರಸ್ತೆ ಮತ್ತು ಕಬ್ಬಿಣದ ಮೇಲೆ ಕೇಂದ್ರಿಕೃತವಾಗಿತ್ತು. ೧೯೨೦ ರ ಹೊತ್ತಿಗೆ ಜನರಿಗೆ ಉಪಯುಕ್ತವಾದ ಮತ್ತು ಬಳಕೆಗೆ ಬೇಕಾಗುವ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಿಂದ ಈ ಬೆಳವಣೆಗೆ ಪ್ರಭಾವಗೊಂಡಿತು. ಇವುಗಳಲ್ಲಿ ಬಹಳ ಮುಖ್ಯವಾದದ್ದು ಸ್ವಚಾಲಿತ ವಾಹನಗಳ ತಯಾರಿಕೆ. ಈ ದಿಶೆಯಲ್ಲಿ ಮುಂದಾಳುತನ ಪ್ರದರ್ಶಿಸಿ ಪ್ರಪಂಚದ ಮುಖವನ್ನೇ ಬದಲಾಯಿಸಲು ಕಾರಣನಾದವರು ಹೆನ್ರಿ ಫೋರ್ಡ್.
Quick Facts ಹೆನ್ರಿ ಫೋರ್ಡ್, ಜನನ ...
Close