ಅಕೇಶಿಯ
From Wikipedia, the free encyclopedia
ಅಕೇಶಿಯ (pronounced /əˈkeɪʃə/) ಫ್ಯಾಬಸಿಯೆ ಕುಟುಂಬಕ್ಕೆ ಸೇರಿದ ಮಿಮೋಸೋಯ್ಡಿ ಉಪಪ್ರಭೇದ ಪೊದೆಗಳು ಹಾಗು ಮರಗಳ ಕುಲಕ್ಕೆ ಸೇರಿದೆ. ಇದರ ಅಸ್ತಿತ್ವವನ್ನು ಸ್ವೀಡಿಶ್ನ ಸಸ್ಯವಿಜ್ಞಾನಿ ಕಾರ್ಲ್ ಲಿನ್ನಯಯುಸ್ 1773ರಲ್ಲಿ ಮೊದಲ ಬಾರಿಗೆ ಆಫ್ರಿಕಾದಲ್ಲಿ ಪತ್ತೆ ಮಾಡಿದರು. ಆಸ್ಟ್ರೇಲಿಯನ್ ಪ್ರಭೇಧವಲ್ಲದ ಹಲವು ಮರಗಳು ಮುಳ್ಳಿನಿಂದ ಕೂಡಿರುತ್ತವೆ, ಆದರೆ ಬಹುತೇಕ ಆಸ್ಟ್ರೇಲಿಯನ್ ಅಕೇಶಿಯಗಳಲ್ಲಿ ಮುಳ್ಳುಗಳಿರುವುದಿಲ್ಲ. ಇವುಗಳು ಬೀಜಕೋಶದಿಂದ ಹುಟ್ಟುತ್ತವೆ, ಜೊತೆಗೆ ಸಸ್ಯರಸ ಹಾಗು ಎಲೆಗಳು ವಿಶೇಷವಾಗಿ ದೊಡ್ಡ ಪ್ರಮಾಣದ ಟ್ಯಾನಿನ್ ಗಳನ್ನು (ಚರ್ಮ ಹದ ಮಾಡಲು ಹಾಗೂ ಶಾಯಿಯನ್ನು ತಯಾರಿಸಲು ಮರದ ತೊಗಟೆಗಳಿಂದ ತೆಗೆದ ಬಂಧಕ ವಸ್ತು) ಉತ್ಪಾದಿಸುತ್ತವೆ. ಮರಕ್ಕೆ ಅದರ ಕುಲದ ಹೆಸರು ακακία(ಅಕಾಕಿಯ) ನಿಂದ ವ್ಯತ್ಪತ್ತಿಯಾಗಿದೆ. ಹಿಂದಿನ ಗ್ರೀಕ್ ಸಸ್ಯವಿಜ್ಞಾನಿ-ವೈದ್ಯ ಪೆಡನಿಯಸ್ ಡಿಯೋಸ್ಕೋರೈಡೆಸ್(ಸುಮಾರು 40-90) ಔಷಧೀಯ ಮರವಾದ A. ನಿಲೋಟಿಕಾ ಗೆ ತಮ್ಮ ಪುಸ್ತಕ ಮಟೆರಿಯ ಮೆಡಿಕಾ ನಲ್ಲಿ ಈ ಹೆಸರನ್ನು ನೀಡಿದ್ದಾರೆ.[2] ಮರವು ಈ ಹೆಸರನ್ನು ಗ್ರೀಕ್ ನಿಂದ ತನ್ನ ವಿಶಿಷ್ಟವಾದ ಮುಳ್ಳುಗಳಿಂದಾಗಿ ಪಡೆದುಕೊಂಡಿದೆ, ακις (ಅಕಿಸ್, ಮುಳ್ಳು ).[3] ಮರವು ನೈಲ್ ನದಿಯ ತಟದುದ್ದಕ್ಕೂ ವ್ಯಾಪಕವಾಗಿ ಬೆಳೆದಿರುವ ಕಾರಣದಿಂದಾಗಿ ನಿಲೋಟಿಕ ಎಂಬ ಪ್ರಭೇದ ಹೆಸರನ್ನು ಲಿನ್ನಯುಸ್ ನೀಡಿದ್ದಾರೆ. ಅಕೇಶಿಯಗಳನ್ನು ಮುಳ್ಳಿನಮರಗಳು , ಸಿಳ್ಳೆಯಂತೆ ಶಬ್ದಮಾಡುವ ಮುಳ್ಳು ಗಳು ಅಥವಾ ವಾಟಲ್ಗಳು (ತಡಿಕೆಗಳು) ಎಂದೂ ಸಹ ಕರೆಯಲಾಗುತ್ತದೆ, ಇದರಲ್ಲಿ ಎಲ್ಲೊ-ಫೀವರ್ ಅಕೇಶಿಯ ಹಾಗು ಅಂಬ್ರೆಲಾ ಅಕೇಶಿಯಗಳೂ ಸೇರಿವೆ. ಕಳೆದ 2005ರವರೆಗೂ, ವಿಶ್ವವ್ಯಾಪಿಯಾಗಿ ಸರಿಸುಮಾರು ಅಕೇಶಿಯದ 1300 ಪ್ರಭೇದಗಳು ಇವೆಯೆಂದು ಭಾವಿಸಲಾಗಿದೆ. ಇದರಲ್ಲಿ ಸುಮಾರು 960 ಅಕೇಶಿಯಗಳು ಆಸ್ಟ್ರೇಲಿಯ ಮೂಲದ್ದಾಗಿದೆ, ಉಳಿದ ಅಕೇಶಿಯಗಳು ಎರಡೂ ಖಗೋಳಾರ್ಧದ ಉಷ್ಣವಲಯದಿಂದ ಸಮಶೀತೋಷ್ಣ ಪ್ರದೇಶಗಳ ಸುತ್ತಮುತ್ತ ಹರಡಿಕೊಂಡಿವೆ, ಇದರಲ್ಲಿ ಯುರೋಪ್, ಆಫ್ರಿಕಾ, ದಕ್ಷಿಣ ಏಷ್ಯ ಹಾಗು ಅಮೇರಿಕಾಗಳು ಸೇರಿವೆ. ಆದಾಗ್ಯೂ, ಈ ಕುಲವನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ, ಅಕೇಶಿಯ ಎಂಬ ಹೆಸರನ್ನು ಆಸ್ಟ್ರೇಲಿಯನ್ ಪ್ರಭೇದಗಳಿಗೆ ಉಳಿಸಿಕೊಳ್ಳಲಾಗಿದೆ, ಹಾಗು ಆಸ್ಟ್ರೇಲಿಯಾದ ಹೊರಗಿರುವ ಬಹುತೇಕ ಸಸ್ಯ ಪ್ರಭೇದಗಳನ್ನು ವಚೆಲ್ಲಿಯ ಹಾಗು ಸೆನೆಗಲಿಯ ಎಂದು ವಿಂಗಡಿಸಲಾಗಿದೆ.
ಅಕೇಶಿಯ | |
---|---|
Scientific classification | |
ಸಾಮ್ರಾಜ್ಯ: | Plantae |
Division: | |
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Acacia Mill.[1] |
Species | |
About 1,300; see List of Acacia species |