ಅಡಾಮ್ ಗಿಲ್ಕ್ರಿಸ್ಟ್
From Wikipedia, the free encyclopedia
ಅಡಾಮ್ ಕ್ರೇಗ್ ಗಿಲ್ಕ್ರಿಸ್ಟ್ (14 ನವೆಂಬರ್ 1971ರಂದು ಜನನ) -[1] ಗಿಲ್ಲಿ ಅಥವಾ ಚರ್ಚ್ ಉಪನಾಮಗಳಿರುವ ಇವರು[2] ಆಸ್ಟ್ರೇಲಿಯದ ಮಾಜಿ ಅಂತಾರಾಷ್ಟ್ರೀಯ ಆಟಗಾರ. ಇವರು ಒಬ್ಬ ಅಕ್ರಮಣಕಾರಿ ಎಡಗೈ ಬ್ಯಾಟ್ಸ್ಮನ್ ಮತ್ತು ದಾಖಲೆಗಳನ್ನು ಮುರಿದ ವಿಕೆಟ್-ಕೀಪರ್ ಸಹ ಆಗಿದ್ದಾರೆ. ತಮ್ಮ ಅಕ್ರಮಣಕಾರಿ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯ ರಾಷ್ಟ್ರೀಯ ತಂಡಕ್ಕೆ ತಮ್ಮ ಪಾತ್ರವನ್ನು ಮರುವ್ಯಾಖ್ಯಾನಿಸಿದ್ದಾರೆ. ಕ್ರಿಕೆಟ್ ಆಟದ ಇತಿಹಾಸದಲ್ಲಿ ಇವರು ಮಹಾನ್ ವಿಕೆಟ್-ಕೀಪರ್-ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ.[3][4] ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಔಟ್ ಮಾಡಿದ ವಿಕೆಟ್ಕೀಪರ್ ಎಂಬ ವಿಶ್ವದಾಖಲೆ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಔಟ್ ಮಾಡಿದ ಆಸ್ಟ್ರೇಲಿಯನ್ ವಿಕೆಟ್-ಕೀಪರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.[5][6] ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನ ಇತಿಹಾಸದಲ್ಲಿ, ಪಂದ್ಯಗಳ ಎರಡೂ ರೂಪಗಳಲ್ಲಿ ಅತ್ಯುನ್ನತ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್ಮನ್ಗಳಲ್ಲಿ ಅಡಾಮ್ ಗಿಲ್ಕ್ರಿಸ್ಟ್ ಸಹ ಸೇರಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಎರಡನೆಯ ಅತಿ ವೇಗದ ಶತಕದ ದಾಖಲೆಯು ಅಡಾಮ್ ಗಿಲ್ಕ್ರಿಸ್ಟ್ ಹೆಸರಿನಲ್ಲಿದೆ.[7] ಅಡಾಮ್ ಗಿಲ್ಕ್ರಿಸ್ಟ್ ಟೆಸ್ಟ್ ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳನ್ನು ಹೊಡೆದ ಏಕೈಕ ಆಟಗಾರರಾಗಿದ್ದಾರೆ.[8] ಅವರು ಹೊಡೆದಿರುವ 17 ಟೆಸ್ಟ್ ಮತ್ತು 16 ODI ಶತಕಗಳು, ವಿಕೆಟ್-ಕೀಪರ್ ಗಳಿಸಿರುವ ಅತಿ ಹೆಚ್ಚು ಶತಕಗಳ ದಾಖಲೆಗಳಾಗಿವೆ.[9][10] ಮೂರು ಸತತ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಗಳಲ್ಲಿ(1999, 2003 ಮತ್ತು 2007)ಕನಿಷ್ಠ 50 ರನ್ ಗಳಿಸಿದ ಅಪೂರ್ವ ದಾಖಲೆಯನ್ನು ಅಡಾಮ್ ಗಿಲ್ಕ್ರಿಸ್ಟ್ ಸಾಧಿಸಿದ್ದಾರೆ .[11] ಮೂರು ಬಾರಿ ಪ್ರಶಸ್ತಿಗಳನ್ನು ಗೆದ್ದ ಕೇವಲ ಮೂವರು ಆಟಗಾರರಲ್ಲಿ ಇವರೂ ಒಬ್ಬರು.[12] ಅಂಪೈರ್ ತೀರ್ಪಿಗೆ ವ್ಯತಿರಿಕ್ತವಾಗಿ ಕೆಲವು ವೇಳೆ ತಾವು ನಿಜಕ್ಕೂ ಔಟ್ ಎಂದು ಪರಿಗಣಿಸಿದ ಸಂದರ್ಭದಲ್ಲಿ ಕ್ರೀಸ್ನಿಂದ ನಿರ್ಗಮಿಸುವುದಕ್ಕೆಹೆಸರುವಾಸಿಯಾಗಿದ್ದರು.[13][14] ಅವರು ತಮ್ಮ ಪ್ರಥಮ ದರ್ಜೆಯ ಕ್ರಿಕೆಟ್ ಚೊಚ್ಚಲ ಪ್ರವೇಶವನ್ನು 1992ರಲ್ಲಿ, ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು 1996ರಲ್ಲಿ ಭಾರತದಲ್ಲಿ, ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವನ್ನು 1999ರಲ್ಲಿ ಆರಂಭಿಸಿದರು.[1] ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ, ಅವರು ಆಸ್ಟ್ರೇಲಿಯ ಪರ 96 ಟೆಸ್ಟ್ಪಂದ್ಯಗಳಲ್ಲಿ ಹಾಗೂ 270ಕ್ಕಿಂತಲೂ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದರು. ಕ್ರಿಕೆಟ್ ಆಟದ ಎರಡೂ ಸ್ವರೂಪಗಳಲ್ಲಿ ಅಡಾಮ್ ಗಿಲ್ಕ್ರಿಸ್ಟ್ ಅಸ್ಟ್ರೇಲಿಯಾ ತಂಡದ ಉಪನಾಯಕರಾಗಿದ್ದರು. ಎಂದಿನ ನಾಯಕರಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅನುಪಸ್ಥಿತಿಯಲ್ಲಿ ಅಡಾಮ್ ಗಿಲ್ಕ್ರಿಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.[15][16] ಅವರು ಮಾರ್ಚ್ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದರು.[17] ಆದಾಗ್ಯೂ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ, ಡೆಕನ್ ಚಾರ್ಜರ್ಸ್ ಪರ ಆಟ ಮುಂದುವರೆಸಿದರು. 2009ರಲ್ಲಿ ಅವರು ವಿವಿಎಸ್ ಲಕ್ಷ್ಮಣ್ರ ಬದಲಿಗೆ ನಾಯಕತ್ವ ವಹಿಸಿಕೊಂಡರು.[18] ಇವರ ನಾಯಕತ್ವದಲ್ಲಿ ಡೆಕನ್ ತಂಡ 2009ರ ಐಪಿಎಲ್ ಪ್ರಶಸ್ತಿಗಳಿಸಿತು.
Adam Gilchrist | |||||||||
ಆಸ್ಟ್ರೇಲಿಯಾ | |||||||||
ವೈಯಕ್ತಿಕ ಮಾಹಿತಿ | |||||||||
---|---|---|---|---|---|---|---|---|---|
ಪೂರ್ಣಹೆಸರು | Adam Craig Gilchrist | ||||||||
ಅಡ್ಡಹೆಸರು | Gilly, Churchie | ||||||||
ಹುಟ್ಟು | 11 14 1971 | ||||||||
Bellingen, New South Wales, Australia | |||||||||
ಎತ್ತರ | 1.86 m (6 ft 1 in) | ||||||||
ಪಾತ್ರ | Wicket-keeper | ||||||||
ಬ್ಯಾಟಿಂಗ್ ಶೈಲಿ | Left Hand | ||||||||
ಬೌಲಿಂಗ್ ಶೈಲಿ | Right-arm off break | ||||||||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | |||||||||
ಟೆಸ್ಟ್ ಪಾದಾರ್ಪಣೆ (cap 381) | 5 November 1999: v Pakistan | ||||||||
ಕೊನೆಯ ಟೆಸ್ಟ್ ಪಂದ್ಯ | 24 January 2008: v India | ||||||||
ODI ಪಾದಾರ್ಪಣೆ (cap 129) | 25 October 1996: v South Africa | ||||||||
ಕೊನೆಯ ODI ಪಂದ್ಯ | 4 March 2008: v India | ||||||||
ODI ಅಂಗಿಯ ಸಂಖ್ಯೆ | 18 | ||||||||
ಪ್ರಾದೇಶಿಕ ತಂಡದ ಮಾಹಿತಿ | |||||||||
ವರ್ಷಗಳು | ತಂಡ | ||||||||
1994–2008 | Western Australia | ||||||||
2008–present | Deccan Chargers | ||||||||
1992–1994 | New South Wales | ||||||||
ವೃತ್ತಿಜೀವನದ ಅಂಕಿಅಂಶಗಳು | |||||||||
ಟೆಸ್ಟ್ | ODI | FC | List A | ||||||
ಪಂದ್ಯಗಳು | 96 | 287 | 190 | 355 | |||||
ಒಟ್ಟು ರನ್ನುಗಳು | 5,570 | 9,619 | 10,334 | 11,288 | |||||
ಬ್ಯಾಟಿಂಗ್ ಸರಾಸರಿ | 47.60 | 35.89 | 44.16 | 34.94 | |||||
೧೦೦/೫೦ | 17/26 | 16/55 | 30/43 | 18/63 | |||||
ಅತೀ ಹೆಚ್ಚು ರನ್ನುಗಳು | 204* | 172 | 204* | 172 | |||||
ಬೌಲ್ ಮಾಡಿದ ಚೆಂಡುಗಳು | – | – | – | 12 | |||||
ವಿಕೆಟ್ಗಳು | – | – | – | 0 | |||||
ಬೌಲಿಂಗ್ ಸರಾಸರಿ | – | – | – | – | |||||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | – | – | – | 0 | |||||
೧೦ ವಿಕೆಟುಗಳು ಪಂದ್ಯದಲ್ಲಿ | – | – | – | n/a | |||||
ಶ್ರೇಷ್ಠ ಬೌಲಿಂಗ್ | – | – | – | 0/10 | |||||
ಕ್ಯಾಚುಗಳು /ಸ್ಟಂಪಿಂಗ್ಗಳು | 379/37 | 417/55 | 756/55 | 526/65 | |||||
ದಿನಾಂಕ 4 March, 2008 ವರೆಗೆ. |