ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಸ್ಥಳೀಯ (ಮೂಲನಿವಾಸಿ) ಅಮೆರಿಕನ್ನರು
From Wikipedia, the free encyclopedia
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಸ್ಥಳೀಯ ಅಮೆರಿಕನ್ನರು , ಇಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಭೂಖಂಡದಲ್ಲಿರುವ ಅಲಾಸ್ಕಾದ ಕೆಲ ಭಾಗಗಳು, ಹಾಗು ಹವಾಯಿ ದ್ವೀಪದ, ಉತ್ತರ ಅಮೆರಿಕಾದಲ್ಲಿರುವ ಸ್ಥಳೀಯ ನಿವಾಸಿಗಳಾಗಿದ್ದಾರೆ. ಅವರು ಅನೇಕ ವಿಭಿನ್ನ ಬುಡಕಟ್ಟು ಜನಾಂಗಗಳು, ರಾಜ್ಯಗಳು ಮತ್ತು ಜನಾಂಗೀಯ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಇವುಗಳಲ್ಲಿ ಹಲವು ಸಂಪೂರ್ಣವಾಗಿ ರಾಜಕೀಯ ಸಮುದಾಯಗಳಾಗಿ ಅಸ್ತಿತ್ವದಲ್ಲಿವೆ. ಸ್ಥಳೀಯ ಅಮೆರಿಕನ್ನರನ್ನು ಸೂಚಿಸಲು ಬಳಸುವ ಪದಗಳು ವಿವಾದಾಸ್ಪದವಾಗಿವೆ;ಈ 1995ರ US ಜನಗಣತಿ ವಿಭಾಗದ ಮನೆ ಮನೆಗಳ ಸಂದರ್ಶನಗಳಲ್ಲಿ , ಪ್ರತಿಕ್ರಿಯಿಸಿದ ಬಹುಪಾಲು ಜನರು ತಮ್ಮನ್ನು ಅಮೆರಿಕನ್ ಇಂಡಿಯನ್ ಅಥವಾ ಇಂಡಿಯನ್ನ ರೆಂದು ಗುರುತಿಸಿಕೊಳ್ಳಲು ಬಯಸುತ್ತಾರೆ. ಕೊನೆಯ 500 ವರ್ಷಗಳಲ್ಲಿ, ಅಮೆರಿಕಕ್ಕೆ ವಲಸೆ ಬಂದ ಆಫ್ರೊ-ಯುರೇಷಿಯನ್ನರು, ಹಳೆಯ ಮತ್ತು ಹೊಸ ಜಗತ್ತಿನ ಸಮುದಾಯಗಳ ನಡುವೆ ಶತಮಾನಗಳ ಹೋರಾಟ ಮತ್ತು ಹೊಂದಾಣಿಕೆಯನ್ನು ಮಾಡಿಕೊಂಡರು. ಸ್ಥಳೀಯ ಅಮೆರಿಕನ್ನರ ಬಗ್ಗೆ ಇರುವ ಬಹುಪಾಲು ಐತಿಹಾಸಿಕ ದಾಖಲೆಗಳು, ಅಮೆರಿಕಕ್ಕೆ ಯುರೋಪಿಯನ್ನರು ವಲಸೆ ಬಂದ ನಂತರ ರೂಪಿಸಿರುವ ದಾಖಲೆಗಳಾಗಿವೆ.[3] ಅನೇಕ ಸ್ಥಳೀಯ ಅಮೆರಿಕನ್ನರು ಬೇಟೆಗಾರ-ಸಂಗ್ರಹಗಾರ ಸಮುದಾಯಗಳಂತೆ ಬದುಕಿದ್ದರು. ಆದರೂ ಕೂಡ ಅನೇಕ ಗುಂಪುಗಳಲ್ಲಿ ಮಹಿಳೆ ವಿಭಿನ್ನ ಉತ್ಪನ್ನಗಳ ಮೇಲೆ ಸುಸಂಸ್ಕೃತ ಕೃಷಿ ಮಾಡಿದ್ದಾಳೆ: ಮುಸುಕಿನ ಜೋಳ, ಬೀನ್ಸ್ ಮತ್ತು ಕುಂಬಳಕಾಯಿ ಜಾತಿಯ ತರಕಾರಿ ಇತ್ಯಾದಿ ಇದರಲ್ಲಿ ಸೇರಿವೆ. ಇವರ ಸಂಸ್ಕೃತಿಗಳು ಪಶ್ಚಿಮ ಯುರೇಷಿಯದ ಮೂಲ-ಕೈಗಾರಿಕಾ ವಲಸಿಗರು ಮತ್ತು ಕೃಷಿಕರಿಗಿಂತ ಭಿನ್ನವಾಗಿವೆ. ದೀರ್ಘಸ್ಥಾಪಿತ ಸ್ಥಳೀಯ ಅಮೆರಿಕನ್ನರು ಮತ್ತು ವಲಸೆ ಬಂದ ಯುರೋಪಿಯನ್ನರ ನಡುವಿನ ಸಾಂಸ್ಕೃತಿಕ ಭಿನ್ನತೆಗಳು, ಹಾಗು ಪ್ರತಿ ಸಂಸ್ಕೃತಿಯ ವಿಭಿನ್ನ ರಾಷ್ಟ್ರಗಳಲ್ಲಿ ಉಂಟಾಗುವ ಬದಲಾವಣೆಗಳು, ರಾಜಕೀಯ ಬಿಕ್ಕಟ್ಟು ಮತ್ತು ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾದವು. ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ನಿಯೋಜಿಸುವ ಪೂರ್ವ-ಕೊಲಂಬಿಯನ್ ಜನಸಂಖ್ಯೆ ಗಮನಾರ್ಹವಾಗಿ 1 ಮಿಲಿಯನ್ ನಿಂದ 18 ಮಿಲಿಯನ್ ವರೆಗಿತ್ತೆಂದು ಅಂದಾಜು ಮಾಡಲಾಗಿದೆ.[4][5] ವಸಾಹತುಗಳು ಗ್ರೇಟ್ ಬ್ರಿಟನ್ ನ ಮೇಲೆ ದಂಗೆಯೆದ್ದ ನಂತರ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ಸ್ಥಾಪಿಸಿದ ನಂತರ, ರಾಷ್ಟ್ರಾಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಮತ್ತು ಹೆನ್ರಿ ನಾಕ್ಸ್, ಅಮೆರಿಕಾ ಸಂಯುಕ್ತ ಸಂಸ್ಥಾನದ ಪೌರತ್ವ ಪಡೆಯಲು ಸಿದ್ಧರಾಗಲೆಂದು, ಸ್ಥಳೀಯ ಅಮೆರಿಕನ್ನರನ್ನು "ನಾಗರಿಕಗೊಳಿಸುವ" ಆಲೋಚನೆಯನ್ನು ಪ್ರಕಟಪಡಿಸಿದರು.[6][7][8][9][10] ಹೊಂದಾಣಿಕೆಯು (ಚಾಕ್ಟವ್ ನೊಂದಿಗೆ ಸ್ವಇಚ್ಛೆಯಿಂದ,[11][12] ಅಥವಾ ಬಲವಂತವಾಗಿ) ಅಮೆರಿಕದ ಆಡಳಿತಗಳ ಮೂಲಕ ಹೊಂದಿಕೊಳ್ಳುವ ನೀತಿಯಾಯಿತು. ಆಗಿನ 19ನೇ ಶತಮಾನದ ಸಂದರ್ಭದಲ್ಲಿ, ಮ್ಯಾನಿಫೆಸ್ಟ್ ಡೆಸ್ಟಿನಿ ನಂಬಿಕೆಯು ಅಮೆರಿಕನ್ ರಾಷ್ಟ್ರೀಯತವಾದಿ ಚಳವಳಿಗೆ ಮುಖ್ಯವಾಯಿತು. ಅಮೆರಿಕನ್ ಕ್ರಾಂತಿಯ ನಂತರ ಯುರೋಪಿಯನ್-ಅಮೆರಿಕನ್ ಜನಸಂಖ್ಯೆಯ ವಿಸ್ತರಣೆಯಿಂದಾಗಿ, ಸ್ಥಳೀಯ ಅಮೆರಿಕನ್ ಭೂಮಿಯ ಮೇಲೆ ಒತ್ತಡ, ಗುಂಪುಗಳ ನಡುವೆ ಸಮರ ಮತ್ತು ಬಿಕ್ಕಟ್ಟುಗಳು ಹೆಚ್ಚಿದವು. ಆಗ 1830ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನ ಕಾಂಗ್ರೆಸ್ ಇಂಡಿಯನ್ ರಿಮೂವಲ್ ಆಕ್ಟ್ (ಇಂಡಿಯನ್ ಸ್ಥಳಾಂತರ ಕಾಯ್ದೆ)ಅನ್ನು ಹೊರಡಿಸಿತು. ಈ ಕಾನೂನು ಸರ್ಕಾರಕ್ಕೆ, ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ ಯುರೋಪಿಯನ್-ಅಮೆರಿಕನ್ ವಿಸ್ತರಣೆಯನ್ನು ಮಾಡಲು, ಮಿಸಿಸಿಪ್ಪಿ ನದಿಯ ಪೂರ್ವದ ಡೀಪ್ ಸೌತ್ ನ ಸ್ಥಳೀಯ ಅಮೆರಿಕನ್ನರನ್ನು ಅವರ ತಾಯ್ನಾಡಿನಿಂದ ಬೇರೆಡೆಗೆ ಸಾಗಿಸುವ ಹಕ್ಕನ್ನು ನೀಡಿತ್ತು. ಸರ್ಕಾರಿ ಅಧಿಕಾರಿಗಳು, ಗುಂಪುಗಳ ನಡುವಿನ ಕದನ ಕಡಿಮೆ ಮಾಡುವ ಮೂಲಕ ಉಳಿದಿರುವ ಇಂಡಿಯನ್ನರಿಗೂ ಸಹಾಯ ಮಾಡಬಹುದೆಂದು ಭಾವಿಸಿದರು. ಉಳಿದ ಗುಂಪುಗಳು ದಕ್ಷಿಣದುದ್ದಕ್ಕೂ ಬದುಕುತ್ತಿರುವ ಸಂತತಿಗಳನ್ನು ಹೊಂದಿವೆ. ಅಲ್ಲದೇ 20 ನೇ ಶತಮಾನದ ಉತ್ತರಾರ್ಧದಿಂದ ಅನೇಕ ರಾಜ್ಯಗಳು, ಮತ್ತು ಕೆಲವೊಂದು ಸಂದರ್ಭಗಳಲ್ಲಿ ಫೆಡರಲ್ ಸರ್ಕಾರ, ಇವರನ್ನು ಬುಡಕಟ್ಟು ಜನಾಂಗದವರೆಂದು ಗುರುತಿಸಿತು. ಮೊದಲ ಯುರೋಪಿಯನ್ ಅಮೆರಿಕನ್ನರು, ತುಪ್ಪಳದ ವ್ಯಾಪಾರಿಗಳ ರೂಪದಲ್ಲಿ ಪಶ್ಚಿಮದ ಬುಡಕಟ್ಟು ಜನಾಂಗದವರನ್ನು ಸಂಧಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ವಿಸ್ತರಣೆಯು ಪಾಶ್ಚಾತ್ಯ ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ತಲುಪಿದಂತೆ, ವಸಾಹತುಗಾರರು ಮತ್ತು ಗಣಿಕೆಲಸದ ವಲಸೆಗಾರರು, ಗ್ರೇಟ್ ಪ್ಲೇನ್ ನ ಬುಡಕಟ್ಟು ಜನಾಂಗದವರೊಂದಿಗಿನ ಕದನದ ಪ್ರಮಾಣವನ್ನು ಹೆಚ್ಚಿಸಿಕೊಂಡರು. ಇವು ಸಂಕೀರ್ಣವಾದ ಅಲೆಮಾರಿ ಸಂಸ್ಕೃತಿಗಳಾಗಿದ್ದು, ಕುದುರೆಗಳನ್ನು ಬಳಸಿಕೊಂಡು, ಕಾಡೆಮ್ಮೆಯನ್ನು ಬೇಟೆಯಾಡಲು ಕಾಲೋಚಿತವಾಗಿ ಪ್ರಯಾಣ ಬೆಳೆಸುವುದರ ಮೇಲೆ ಇವರ ವಹಿವಾಟು ಆಧರಿಸಿತ್ತು. ಇವರು ಅಮೆರಿಕನ್ ಆಂತರಿಕ ಕದನದ ನಂತರ ದಶಕಗಳ ವರೆಗೆ ನಡೆದ "ಇಂಡಿಯನ್ ಕದನ" ದಲ್ಲಿ ಅಮೆರಿಕದ ಆಕ್ರಮಣಕ್ಕೆ ಪ್ರಬಲವಾದ ವಿರೋಧ ವ್ಯಕ್ತಪಡಿಸಿದರು. ಈ ಕದನವು 1890 ರ ವರೆಗೆ ನಿರಂತರವಾಗಿ ನಡೆಯುತ್ತಲೇ ಇತ್ತು. ಖಂಡಾಂತರ ರೈಲು ಮಾರ್ಗದ ನಿರ್ಮಿತಿಯು ಪಶ್ಚಿಮದ ಬುಡಕಟ್ಟು ಜನಾಂಗದವರ ಮೇಲೆ ಒತ್ತಡ ಹೆಚ್ಚಿಸಿತು. ಸಮಯ ಕಳೆದಂತೆ ಅಮೆರಿಕಾ ಸಂಯುಕ್ತ ಸಂಸ್ಥಾನ, ಬುಡಕಟ್ಟು ಜನಾಂಗದವರು ಸರಣಿ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ಮತ್ತು ಜಮೀನನ್ನು ಕಾನೂನು ರೀತ್ಯ ಒಪ್ಪಿಸುವಂತೆ ಒತ್ತಾಯಪಡಿಸಿತು. ಅಲ್ಲದೇ ಅನೇಕ ಪಶ್ಚಿಮ ರಾಜ್ಯಗಳಲ್ಲಿ ಅವರಿಗೆ ಮೀಸಲು ಪ್ರದೇಶ ಒದಗಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರತಿನಿಧಿಗಳು ಸ್ಥಳೀಯ ಅಮೆರಿಕನ್ನರಿಗೆ ಯುರೋಪಿಯನ್ ಶೈಲಿಯ ಕೃಷಿಯನ್ನು ಮತ್ತು ಇದಕ್ಕೆ ಸದೃಶವಾಗಿರುವ ಕಸುಬನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದರು. ಆದರೆ ಜಮೀನುಗಳು ಅಂತಹ ಬಳಕೆಗಳಿಗೆ ಬೆಂಬಲ ನೀಡುವಷ್ಟು ಫಲವತ್ತಾಗಿರಲಿಲ್ಲ. ಸಮಕಾಲೀನ ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದೊಡನೆ ಇಂದು ವಿಶೇಷ ಸಂಬಂಧ ಹೊಂದಿದ್ದಾರೆ. ಏಕೆಂದರೆ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದಿಂದ ಪರಮಾಧಿಕಾರ ಅಥವಾ ಸ್ವತಂತ್ರವನ್ನು ಪಡೆದ ರಾಷ್ಟ್ರ, ಇಲ್ಲವೇ ಬುಡಕಟ್ಟು, ಅಥವಾ ಸ್ಥಳೀಯ ಅಮೆರಿಕನ್ನರ ತಂಡದ ಸದಸ್ಯರಾಗಿರಬಹುದು. ಅವರ ಸಮುದಾಯಗಳು ಮತ್ತು ಸಂಸ್ಕೃತಿಗಳು ವಲಸೆಗಾರರ (ಸ್ವ ಇಚ್ಛೆಯಿಂದ ಮತ್ತು ಗುಲಾಮ) ಸಂತತಿಯ ಬೃಹತ್ ಜನಸಂಖ್ಯೆಯೊಳಗೆ ಬೆಳೆದಿವೆ: ಆಫ್ರಿಕನ್, ಏಷ್ಯನ್, ಮಧ್ಯಪ್ರಾಚ್ಯ ಮತ್ತು ಯುರೋಪಿಯನ್ ಜನರು. ಮೊದಲೇ ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಲ್ಲದ ಸ್ಥಳೀಯ ಅಮೆರಿಕನ್ನರಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ 1924 ರಲ್ಲಿ ಪೌರತ್ವ ನೀಡಿತು.
ಒಟ್ಟು ಜನಸಂಖ್ಯೆ | |
---|---|
American Indian and Alaska Native One race: 2.5 million are registered [1] In combination with one or more other races: 1.6 million are registered [2] 1.37% of the U.S. population | |
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
Predominantly in the Western United States | |
ಭಾಷೆಗಳು | |
American English, Native American languages | |
ಧರ್ಮ | |
Native American Church Protestant Roman Catholic Russian Orthodox Traditional Ceremonial Ways (Unique to Specific Tribe or Band) | |
ಸಂಬಂಧಿತ ಜನಾಂಗೀಯ ಗುಂಪುಗಳು | |
Indigenous peoples of the Americas |