ಅರ್ಮಾನಿ
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಸಂಸ್ಥೆಯ ಪ್ರಕಾರ | Private |
---|---|
ಸ್ಥಾಪನೆ | 1975 |
ಸಂಸ್ಥಾಪಕ(ರು) | Giorgio Armani and Sergio Galeotti |
ಮುಖ್ಯ ಕಾರ್ಯಾಲಯ | Milan, Italy |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Giorgio Armani |
ಉದ್ಯಮ | Fashion and Leisure |
ಆದಾಯ | $1.69bn (2005) |
ಉದ್ಯೋಗಿಗಳು | 4,700 |
ಜಾಲತಾಣ | www.giorgioarmani.com |
This article contains content that is written like an advertisement. |
ಜಾರ್ಜಿಯೊ ಅರ್ಮಾನಿ S.P.A. ಅಂತಾರಾಷ್ಟ್ರೀಯ ಇಟಾಲಿಯನ್ ಫ್ಯಾಷನ್ ಸಂಸ್ಥೆಯಾಗಿದ್ದು, ಇದು ಉತ್ತಮ ಫ್ಯಾಷನ್ನಿನ ಉಡುಪು, ಸಿದ್ಧ ಉಡುಪುಗಳು, ಚರ್ಮದ ಸರಕುಗಳು, ಶೂಗಳು, ಕೈಗಡಿಯಾರಗಳು, ಆಭರಣಗಳು, ಉಪಸಾಮಾಗ್ರಿಗಳು, ಕಣ್ಣಿಗೆ ಬಳಸುವ ಪ್ರಸಾಧನಗಳು, ಸೌಂದರ್ಯವರ್ಧಕಗಳು ಮತ್ತು ಗೃಹ ಬಳಕೆಯ ವಸ್ತುಗಳು ಇತ್ಯಾದಿಗಳನ್ನು ವಿನ್ಯಾಸಗೊಳಿಸುತ್ತದೆ, ತಯಾರಿಸುತ್ತದೆ, ವಿತರಣೆ ಮಾಡುತ್ತದೆ ಮತ್ತು ಮಾರಾಟ ಮಾಡುತ್ತದೆ. ಇದು ಈ ಉತ್ಪನ್ನಗಳನ್ನು ಅನೇಕ ವಿಶೇಷ ಉಪ-ಹೆಸರುಗಳಡಿಯಲ್ಲಿ ಮಾರಾಟ ಮಾಡುತ್ತದೆ, ಅವುಗಳೆಂದರೆ - ಜಾರ್ಜಿಯೊ ಅರ್ಮಾನಿ , ಅರ್ಮಾನಿ ಕೊಲೆಜಿಯಾನಿ , ಎಂಪೋರಿಯೊ ಅರ್ಮಾನಿ , AJ | ಅರ್ಮಾನಿ ಜೀನ್ಸ್ , AX | ಅರ್ಮಾನಿ ಎಕ್ಸ್ಚೇಂಜ್ , ಅರ್ಮಾನಿ ಜೂನಿಯರ್ ಮತ್ತು ಅರ್ಮಾನಿ/ಕಾಸ . ಅರ್ಮಾನಿ ಹೆಸರು ಪ್ರಪಂಚದಾದ್ಯಂತ ಅತ್ಯಂತ ಫ್ಯಾಷನ್ ಮತ್ತು ನಯನಾಜೂಕಿನ ಉಡುಪುಗಳ ವಿನ್ಯಾಸ ಮತ್ತು ತಯಾರಿಕೆಗೆ ಪರ್ಯಾಯ ಪದವಾಗಿದೆ ಹಾಗೂ ಇದನ್ನು ಫ್ಯಾಷನ್ ಉದ್ಯಮದಲ್ಲಿ ಅಧಿಕ ಪ್ರಸಿದ್ಧಿಯುಳ್ಳ ಹೆಸರುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 2005ರ ಕೊನೆಯಲ್ಲಿ ಇದರ ಮಾರಾಟವು $1.69 ಶತಕೋಟಿಯಷ್ಟಿತ್ತು.[1] ಅರ್ಮಾನಿಯು ಮಿಲನ್, ಪ್ಯಾರಿಸ್, ನ್ಯೂಯಾರ್ಕ್, ಲಂಡನ್, ಟೋಕಿಯೊ, ಶಾಂಘೈ ಮತ್ತು ದುಬೈ ಮೊದಲಾದವುಗಳನ್ನೂ ಒಳಗೊಂಡಂತೆ ಅನೇಕ ದೊಡ್ಡ ನಗರಗಳಲ್ಲಿರುವ ಅತ್ಯಂತ ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್ಗಳ ಸರಣಿ ಎಮಾರ್ ಪ್ರೋಪರ್ಟೀಸ್ ಒಂದಿಗೆ ಸಹೋದ್ಯಮ ನಡೆಸಲು ಯೋಜಿಸುತ್ತಿದೆ. ಈ ಕಂಪೆನಿಯು ಈಗಾಗಲೇ ಬಾರ್, ರೆಸ್ಟಾರೆಂಟ್ ಮತ್ತು ರಾತ್ರಿಯ ಕ್ಲಬ್ಗಳನ್ನೂ ಒಳಗೊಂಡಂತೆ ಪ್ರಪಂಚದಾದ್ಯಂತ ಅನೇಕ ಕೆಫೆಗಳನ್ನು ನಡೆಸುತ್ತಿದೆ.