ಅವಯಾ
From Wikipedia, the free encyclopedia
ಅವಯಾ ಇಂಕಾ. ಒಂದು ಖಾಸಗಿ ದೂರಸಂಪರ್ಕವ್ಯವಸ್ಥೆಗಳ ಒದಗಿಸುವ ಕಂಪನಿಯಾಗಿದೆ,ಇದು ಉದ್ಯಮ ವಲಯಕ್ಕೆ ಬೇಕಾಗುವ ನೆಟ್ವರ್ಕ್ ಜಾಲವ್ಯವಸ್ಥೆ,ದೂರವಾಣಿ ಮತ್ತು ಕಾಲ್ ಸೆಂಟರ್ ಗಳಿಗೆ ಅಗತ್ಯ ತಂತ್ರಜ್ಞಾನವನ್ನು ಒದಗಿಸುವಲ್ಲಿ ನಿರತವಾಗಿದೆ. ಈ ಮೊದಲು ಲುಸೆಂಟ್ ಟೆಕ್ನಾಲಜೀಸ್ ನ ಬಿಜೆನೆಸ್ ಕಮ್ಯುನಿಕೇಶನ್ಸ್ ಘಟಕವಾಗಿದ್ದ ಇದರಲ್ಲಿ ೩೪,೦೦೦ ಕೆಲಸಗಾರರಿದ್ದರು.ಇದು ಅಕ್ಟೋಬರ್ ೧,೨೦೦೦ ರಲ್ಲಿ ತನ್ನ ಬೃಹದಾಕಾರಕ್ಕೆ ಮತ್ತೊಂದು ಹೊಸ ರೂಪ ನೀಡಲು ಮುಂದಾಯಿತು. ಈ ಹೊಸ ರೂಪದ ನಂತರ ಅವಯಾ ತನ್ನ ಉತ್ಪಾದನಾ ಘಟಕಗಳನ್ನು ಮತ್ತು ಸಂಪರ್ಕದ ವಹಿವಾಟುಗಳನ್ನು ಮಾರಾಟ ಮಾಡಿತು.ತನ್ನ ಸದ್ಯದ ಕಂಪನಿಗಳ ಉತ್ಪಾದನೆಗಳಿಗೆ ಅದು ಉತ್ತೇಜನ ನೀಡಿತು.ಅದರ ಉತ್ಪಾದನಾ ಗುಂಪಿಗೆ ಸೇರಿದ್ದವೆಂದರೆ-ವಿಸ್ತಾ,ವಿಪಿನೆಟ್,ಕ್ವಿಂಟಸ್ ರೂಟ್ ಸೈನ್ಸ್,ನಿಮ್ ಕ್ಯಾಟ್ ನೆಟ್ವರ್ಕ್ಸ್,ಸ್ಪೆಕ್ಟೆಲ್,ಯುಬಿಕ್ವಿಟಿ ಸಾಫ್ಟ್ ವೇರ್ ಮತ್ತು ಟ್ರ್ಯಾವರ್ಸ್ ನೆಟ್ವರ್ಕ್ಸ್. ವಾಹಿನಿ ಮಾಧ್ಯಮ ಗಳ ಮೂಲಕದ ಮಾರಾಟವು ೯೮% ರಷ್ಟಾದರೆ ನೇರ ಮಾರಾಟ ಪ್ರಮಾಣವು ೫೦% ರಷ್ಟಾಗಿತ್ತು. ಟೆನೊವಿಸ್ ನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅವಯಾ ತನ್ನ ವಹಿವಾಟನ್ನು ಯುರೊಪಿನಾದ್ಯಂತ ವಿಸ್ತರಿಸಿತು.ಅದಲ್ಲದೇ ಟಾಟಾ ಟೆಲೆಕಾಮ್ ನಲ್ಲಿ ಅಧಿಕ ಪಾಲುದಾರಿಕೆ ಮೂಲಕ ಏಶಿಯಾದಲ್ಲಿ ತನ್ನ ವ್ಯಾಪಾರ ಪ್ರಾರಂಭಿಸಿತು.(ಈಗ ಟಾಟಾ ಟೆಲೆಕಾಮ್ ಅವಯಾ ಗ್ಲೊಬಲ್ ಕನೆಕ್ಟ್ ಎಂಬ ಹೆಸರನ್ನು ಪಡೆದಿದೆ.) ಆಗ ೨೦೦೮ ರಲ್ಲಿ ಒಟ್ಟು ೧೭,೫೦೦ ನೌಕರರಿದ್ದರೆ ಅದರಲ್ಲಿನ ೪೦% ರಷ್ಟು US.ನ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದರು.ಅವಯಾದ ಜಾಗತಿಕ ಪ್ರಧಾನ ಕಚೇರಿಗಳು,ಬಾಸ್ಕಿಂಗ್ ರಿಜೆ,ನಿವ್ ಜರ್ಸಿಯಲ್ಲಿವೆ. ಇಲ್ಲಿ ಕೆವಿನ್ ಜೆ.ಕೆನ್ನಡಿ ಎಂಬುವವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್ನಾಗಿ ನೇಮಕ ಮಾಡಲಾಗಿದೆ. ಅವಯಾದ ಹಾರ್ಡ್ ವೇರ್ ಬಳಸಿಕೊಂಡ ಬೆಲ್ ಕೆನಡಾ (BCE),೧೦ ಗಿಗಾಬಿಟ್ ಎತರ್ ನೆಟ್ನೊಂದಿಗೆ ಸೇರಿ ೨೦೧೦ ವಿಂಟರ್ ಒಲಿಂಪಿಕ್ಸ್ ಗೆ ಸಂಪರ್ಕ ಜಾಲದ ನೆಟ್ವರ್ಕ್ ನ್ನು ಒದಗಿಸಿತು.[1] ಅಷ್ಟೇ ಅಲ್ಲದೇ ಅವಯಾ ೨೦೦೬ FIFA (ಫೀಫಾ)ವರ್ಲ್ಡ್ ಕಪ್ ಗೆ ಅಧಿಕೃತ ಕನ್ವರ್ಜೆಡ್ ಕಮ್ಯುನಿಕೇಶನ್ಸ್ ಅಂದರೆ ಧ್ವನಿ ನೆರವಿನ ತಂತ್ರಜ್ಞಾನದ ಕಾರ್ಯ ನಿರ್ವಹಿಸಿತು. ಈಗಾಗಲೇ ಈ ಹಿಂದೆ ತನ್ನ ಸಂಪರ್ಕ ಜಾಲದ ಕಮ್ಯುನಿಕೇಶನ್ಸ್ ಸೇವೆಯನ್ನು ೨೦೦೨ FIFA (ಫೀಫಾ) ವರ್ಲ್ಡ್ ಕಪ್ ಮತ್ತು ೨೦೦೩ ರಲ್ಲಿನ ದಿ FIFA ಫೀಫಾ ಉಮೆನ್ಸ್ ವರ್ಲ್ಡ್ ಕಪ್ ಗೂ ಸಂಪರ್ಕ ಸೇವೆ ಒದಗಿಸಿತ್ತು.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |