ಆಂಡೆಸ್ ಪರ್ವತಗಳು
From Wikipedia, the free encyclopedia
ಆಂಡೆಸ್ ಪರ್ವತಗಳು ಭೂಮಿಯ ನೆಲದ ಮೇಲಿನ ಅತಿ ಉದ್ದದ ಪರ್ವತಶ್ರೇಣಿ.ಭೂಮಿಯ ಅತಿ ಉದ್ದನೆಯ ಪರ್ವತಶ್ರೇಣಿಗಳು ಸಾಗರದಾಳದಲ್ಲಿವೆ. ಆಂಡೆಸ್ ಪರ್ವತಗಳು ದಕ್ಷಿಣ ಅಮೇರಿಕಾ ಖಂಡದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು ೭೦೦೦ ಕಿ.ಮೀ. ವರೆಗೆ ಹಬ್ಬಿವೆ. ಈ ಶ್ರೇಣಿಯ ಅಗಲ ೨೦೦ ರಿಂದ ೭೦೦ ಕಿ.ಮೀ. ಮತ್ತು ಸರಾಸರಿ ಎತ್ತರ ೪೦೦೦ ಮೀ. (೧೩೦೦೦ ಅಡಿ). ಆಂಡೆಸ್ ಪರ್ವತಶ್ರೇಣಿಯು ಮುಖ್ಯವಾಗಿ ಎರಡೂ ಮಹಾ ಪರ್ವತಶ್ರೇಣಿಗಳನ್ನೊಳಗೊಂಡಿದೆ. ಕಾರ್ಡಿಲ್ಲೇರಾ ಓರಿಯೆಂಟಲ್ ಮತ್ತು ಕಾರ್ಡಿಲ್ಲೇರಾ ಆಸ್ಸಿಡೆಂಟಲ್ ಎಂದು ಈ ಎರಡು ಶ್ರೇಣಿಗಳ ಹೆಸರು. ಆಂಡೆಸ್ ಪರ್ವತಗಳು ದಕ್ಷಿಣ ಅಮೇರಿಕಾದ ಏಳು ರಾಷ್ಟ್ರಗಳನ್ನು ಹಾದು ಹೋಗಿವೆ. ಅರ್ಜೆಂಟೀನಾ, ಚಿಲಿ, ಪೆರು, ಬೊಲಿವಿಯ, ಕೊಲೊಂಬಿಯ, ಇಕ್ವೆಡೋರ್ ಮತ್ತು ಟ್ರಿನಿಡಾಡ್ ಈ ಏಳು ದೇಶಗಳು. ಆಂಡೆಸ್ ಪರ್ವತಗಳು ಏಷ್ಯಾದ ಹೊರಗೆ ಜಗತ್ತಿನ ಅತಿ ಎತ್ತರದ ಪರ್ವತಗಳಾಗಿವೆ. ಈ ಶ್ರೇಣಿಯ ಅತ್ಯುನ್ನತ ಶಿಖರವಾದ ಅಕೊನ್ಕಾಗುವಾ ೬೯೬೨ ಮೀ. ( ೨೨,೮೪೧ ಅಡಿ) ಎತ್ತರವಾಗಿದೆ. ಎಕ್ವೆಡಾರ್ನ ಚಿಂಬೊರಾಜೋ ಜ್ವಾಲಾಮುಖಿಯ ಶಿಖರವು ಭೂಮಿಯ ಕೇಂದ್ರದಿಂದ ಅತಿ ಹೆಚ್ಚು ದೂರದಲ್ಲಿರುವ ನೆಲದ ಮೇಲಿನ ಸ್ಥಾನವಾಗಿದೆ.
ಆಂಡೆಸ್ ಪರ್ವತಗಳು (ಕ್ವೆಚುವಾ) | |
ಪರ್ವತಶ್ರೇಣಿ | |
[[Image:| 256px|none||]] | |
Ceeties | ಬೊಗೊಟಾ, ಲಾ ಪಾಜ್, ಸ್ಯಾಂಟಿಯಾಗೋ, ಕ್ವಿಟೋ |
---|---|
Heichest pynt | ಅಕೊನ್ಕಾಗುವಾ |
- location | ಅರ್ಜೆಂಟೀನಾ |
- elevation | ೬,೯೬೨ m (೨೨,೮೪೧ ft) |
Lenth | ೭,೦೦೦ km (೪,೩೫೦ mi) |
Width | ೫೦೦ km (೩೧೧ mi) |