ಆಮ್ಲಜನಕ
ಪರಮಾಣು ಸಂಖ್ಯೆ 8 ರ ರಾಸಾಯನಿಕ ಅಂಶ / From Wikipedia, the free encyclopedia
ಆಮ್ಲಜನಕ (Oxygen) ಪ್ರಕೃತಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರೆಯುವ ಅನಿಲ ರೂಪದ ಒಂದು ಮೂಲಧಾತು[1]. ಇದರ ರಾಸಾಯನಿಕ ಸಂಕೇತ ೦, ಪರಮಾಣು ಸಂಖ್ಯೆ ೮, ಪರಮಾಣು ತೂಕ ೧೫.೯೯೯೪, ಎಲೆಕ್ಟ್ರಾನ್ ಜೋಡಣೆ ೨,೬ ಅಥವಾ [He] 2s2 2p4. ಆವರ್ತಕೋಷ್ಟಕದಲ್ಲಿ ೬ನೆಯ ಗುಂಪಿಗೆ ಸೇರಿರುವ ಮೂಲವಸ್ತು. ಒಂದು ಅಲೋಹ. ಇದು ಪ್ರಪಂಚದಲ್ಲಿ ಎಲ್ಲಾ ಜೀವಿಗಳ ಪ್ರಾಣವಾಯು. ಇದು ಭೂಮಿಯಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತುಗಳಲ್ಲಿ ಒಂದು. ವಾತಾವರಣದ ೧/೫ ರಷ್ಟು,ಭೂಪದರ(Earth's crust)ದ ತೂಕದಲ್ಲಿ ಶೇಕಡಾ ೪೯ ರಷ್ಟು,[2] ಖನಿಜ ಹಾಗೂ ಶಿಲೆಗಳ ತೂಕದ ಅರ್ದದಷ್ಟು, ಭೂಮಿಯಲ್ಲಿರುವ ನೀರಿನ ತೂಕದ ಶೇಕಡಾ ೮೯ ರಷ್ಟು ಆಮ್ಲಜನಕವಿದೆ. ಇದು ಸಾಮಾನ್ಯ ರೂಪದಲ್ಲಿ ಬಣ್ಣವಿಲ್ಲದ, ರುಚಿ ಇಲ್ಲದ,ವಾಸನೆ ಇಲ್ಲದ ಅನಿಲ. ದ್ರವ ಆಮ್ಲಜನಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ. ಸಾಮಾನ್ಯವಾಗಿ ೨ ಪರಮಾಣು ಸೇರಿಕೊಂಡು ಇರುತ್ತವೆ. ಮೂರು ಪರಮಾಣುಗಳು ಸೇರಿ ಇದ್ದಾಗ ಓಜೋನ್ ಎಂದು ಕರೆಯಲ್ಪಡುತ್ತದೆ. ಇದು ಸೂರ್ಯನ ನೇರಳಾತೀತ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುವುದು. ಈ ಅನಿಲವು ದಹನ ಕ್ರಿಯೆಯನ್ನು ಬೆಂಬಲಿಸುವುದು. ಇದನ್ನು ಕಂಡು ಹಿಡಿದ ವ್ಯಕ್ತಿ ಜೋಸೆಫ್ ಪ್ರೀಸ್ಟ್ಲಿ[3].
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಆಮ್ಲಜನಕ, O, 8 | ||||||||||||||
ರಾಸಾಯನಿಕ ಸರಣಿ | ಅಲೋಹ, chalcogens | ||||||||||||||
ಗುಂಪು, ಆವರ್ತ, ಖಂಡ | 16, 2, p | ||||||||||||||
ಸ್ವರೂಪ | ದ್ರವರೂಪದ ಆಮ್ಲಜನಕ | ||||||||||||||
ಅಣುವಿನ ತೂಕ | 15.9994(3) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | 1s2 2s2 2p4 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 6 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಅನಿಲ | ||||||||||||||
ಸಾಂದ್ರತೆ | (0 °C, 101.325 kPa) 1.429 g/L | ||||||||||||||
ಕರಗುವ ತಾಪಮಾನ | 54.36 K (-218.79 °C, -361.82 °ಎಫ್) | ||||||||||||||
ಕುದಿಯುವ ತಾಪಮಾನ | 90.20 K (-182.95 °C, -297.31 °F) | ||||||||||||||
ಕ್ರಾಂತಿಬಿಂದು | 154.59 K, 5.043 MPa | ||||||||||||||
ಸಮ್ಮಿಲನದ ಉಷ್ಣಾಂಶ | (O2) 0.444 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | (O2) 6.82 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) (O2) 29.378 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | ಘನಾಕೃತಿ | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 2, 1, −1, −2 (neutral oxide) | ||||||||||||||
ವಿದ್ಯುದೃಣತ್ವ | 3.44 (Pauling scale) | ||||||||||||||
ಅಣುವಿನ ತ್ರಿಜ್ಯ | 60 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 48 pm | ||||||||||||||
ತ್ರಿಜ್ಯ ಸಹಾಂಕ | 73 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 152 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | paramagnetic | ||||||||||||||
ಉಷ್ಣ ವಾಹಕತೆ | (300 K) 26.58x10-3 W·m−1·K−1 | ||||||||||||||
ಶಬ್ದದ ವೇಗ | (gas, 27 °C) 330 m/s | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7782-44-7 | ||||||||||||||
ಉಲ್ಲೇಖನೆಗಳು | |||||||||||||||
ಹೈಡ್ರೊಜನ್ ಮತ್ತು ಆಕ್ಸಿಜನ್ಗಳ ಸಂಯುಕ್ತ ನೀರು. ಗಾಳಿ, ನೀರುಗಳೆರಡೂ ಭೂಮಿಯ ಎಲ್ಲ ಜೀವಿಗಳಿಗೂ ಅತ್ಯಾವಶ್ಯಕ. ಜೊತೆಗೆ ನಿರವಯವ ರಸಾಯನವಿಜ್ಞಾನದಲ್ಲಿ (ಇನ್ಆರ್ಗ್ಯಾನಿಕ್ ಕೆಮಿಸ್ಟ್ರಿ) ಆಕ್ಸಿಜನ್ ಸಂಯುಕ್ತಗಳ ಪಾತ್ರ ಬಹು ಹಿರಿದು. ಬಹುತೇಕ ರಾಸಾಯನಿಕ ಕ್ರಿಯೆಗಳು ನಡೆಯುವುದು ನೀರಿನ ಮಾಧ್ಯಮದಲ್ಲಿಯೇ. ಜೀವಿಗಳ ಉಸಿರಾಟ, ದಹನಕ್ರಿಯೆ ಇವೆಲ್ಲವಕ್ಕೂ ಅಗಾಧ ಪ್ರಮಾಣದಲ್ಲಿ ಆಕ್ಸಿಜನ್ ವಿನಿಯೋಗವಾಗುತ್ತಿದ್ದರೂ ಗಾಳಿಯಲ್ಲಿನ ಇದರ ಅಂಶ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ಇರುತ್ತದೆ. ಕಾರಣ, ಗಿಡ ಮರಗಳ ಎಲೆಗಳ ದ್ಯುತಿಸಂಶ್ಲೇಷಣೆಯಲ್ಲಿ ಆಕ್ಸಿಜನ್ ಹೊರಬೀಳುತ್ತಿರುತ್ತದೆ. ವಾತಾವರಣದಲ್ಲಿ ನೀರಿನ ಆವಿ ಕೂಡ ಸೂರ್ಯನ ಕಿರಣಗಳಲ್ಲಿರುವ ಅತಿನೀಲ ರಶ್ಮಿಗಳಿಂದ ವಿಭಜನೆ ಹೊಂದಿ ಭಾರವಾದ ಆಕ್ಸಿಜನ್ ಗುರುತ್ವಾಕರ್ಷಣೆಯಿಂದ ಗಾಳಿಯಲ್ಲಿಯೇ ಉಳಿದು ಹಗುರವಾದ ಹೈಡ್ರೊಜನ್ ವಾತಾವರಣದ ಮೇಲ್ಪದರದೊಡನೆ ಮಿಲನವಾಗುತ್ತದೆ. ಪ್ರಕೃತಿಯಲ್ಲಿ ದೊರಕುವ ಅನೇಕ ಲೋಹಗಳ ಅಥವಾ ಅಲೋಹಗಳ ಅದುರುಗಳು ಅಥವಾ ಖನಿಜಗಳು ಆಕ್ಸಿಜನ್ನ್ನು ಹೊಂದಿವೆ. ಉದಾಹರಣೆಗೆ ಕಬ್ಬಿಣದ ಅದುರಾದ ಹೆಮಟೈಟ್ (Fe2O3), ಅಲ್ಯೂಮಿನಿಯಂ ಅದುರಾದ ಬಾಕ್ಸೈಟ್ (Al2O3), ಸುಣ್ಣಕಲ್ಲು (CaCO3), ಮರಳು ಮತ್ತು ಬೆಣಚು ಕಲ್ಲು (SiO2), ಇತರ ಸಿಲಿಕೇಟುಗಳು ಇತ್ಯಾದಿ. ಅಲ್ಲದೆ ಎಲ್ಲ ಪ್ರಾಣಿ ವರ್ಗ, ಸಸ್ಯವರ್ಗಗಳಲ್ಲೂ ಆಕ್ಸಿಜನ್ ಅಂಶವಿದೆ. ಕೊಬ್ಬು, ಪಿಷ್ಟ, ಸಕ್ಕರೆ ಪದಾರ್ಥಗಳು, ಪ್ರೋಟಿನ್ ಎಲ್ಲದರಲ್ಲೂ ಆಕ್ಸಿಜನ್ ಇದೆ.
ಆಕ್ಸಿಜನ್ ಕುರಿತು ಪ್ರಥಮ ಪ್ರಯೋಗ ನಡೆಸಿದವ ಶೀಲೆ. ಆತ ಕೆಲವು ಲೋಹಗಳ ಆಕ್ಸೈಡ್ಗಳನ್ನು ಕಾಯಿಸಿ ಉಷ್ಣ ವಿಭಜನೆಯಿಂದ ಒಂದು ಅನಿಲವನ್ನು ತಯಾರಿಸಿದ (೧೭೭೨). ಮುಂದೆ ೧೭೭೪ರಲ್ಲಿ ಅದೇ ವಿಧಾನದಿಂದ ಆದರೆ ಸ್ವತಂತ್ರವಾಗಿ ಜೋಸೆಫ್ ಪ್ರೀಸ್ಟ್ಲಿ ತಯಾರಿಸಿದ.[4] ಆದರೆ ಆ ಅನಿಲ ಒಂದು ಮೂಲ ವಸ್ತು ಎಂದು ನಿರ್ಣಯಿಸಿದಾತ (೧೭೭೫-೧೭೭೭) ಲೆವಾಸಿಯೆ. ಪ್ರಮುಖ ಆಮ್ಲಗಳ (Oxy) ಮೂಲವೆಂದು (gene) ಭಾವಿಸಿದ ಅನಿಲಕ್ಕೆ ಆಕ್ಸಿಜನ್ (ಆಮ್ಲಜನಕ) ಎಂದು ಹೆಸರಿತ್ತ.[5] ಆದರೆ ಈ ಕಲ್ಪನೆ ಎಲ್ಲ ಆಮ್ಲಗಳಿಗೂ ಸಮರ್ಥನೀಯವಲ್ಲ ಎಂಬುದು ಈಗ ಅರಿವಾಗಿದೆ. ಪ್ರಕೃತಿಯಲ್ಲಿ ದೊರಕುವ ಆಕ್ಸಿಜನ್ O16, O17 ಮತ್ತು O18 ಈ ಮೂರು ಸಮಸ್ಥಾನಿಗಳ ಮಿಶ್ರಣ. ಅವುಗಳ ಪರಸ್ಪರ ಪ್ರಮಾಣಾಂಶ, ೯೯.೭೫೯:೦.೦೩೭:೨೦೪. ರಸಾಯನವಿಜ್ಞಾನಿಗಳು ಬಹುಕಾಲದವರೆಗೂ ಪ್ರಕೃತಿಮೂಲ ಶುದ್ಧ ಆಕ್ಸಿಜನ್ನಿನ ಪರಮಾಣು ತೂಕ ೧೬.೦೦೦೦ ಎಂದು ನಿರ್ಣಯಿಸಿ ಅದರ ಆಧಾರದ ಮೇಲೆ ತಮ್ಮದೇ ಆದ ಮತ್ತೊಂದು ಮೂಲವಸ್ತುಗಳ ಪರಮಾಣು ಭಾರಪಟ್ಟಿಯನ್ನು ಸಿದ್ಧಪಡಿಸಿ ಉಪಯೋಗಿಸಲಾರಂಭಿಸಿದರು. ಆದರೆ ಈ ವಿರೋಧಾಭಾಸ ಈಗ ಕೊನೆಗೊಂಡು C12 ಸಮಸ್ಥಾನಿಯ ಆಧಾರದ ಮೇಲೆ ಉಳಿದೆಲ್ಲ ಮೂಲವಸ್ತುಗಳ ಪರಮಾಣು ಭಾರವನ್ನು ನಿರ್ಣಯಿಸುವ ಪದ್ದತಿ ಅಂತರ್ರಾಷ್ಟ್ರೀಯ ಒಪ್ಪಿಗೆ ಪಡೆದು ಸರ್ವಮಾನ್ಯತೆ ಹೊಂದಿದೆ. ಬಹು ಅಲ್ಪಾಯುಗಳಾದ ಮೂರು ವಿಕಿರಣಶೀಲ ಸಮಸ್ಥಾನೀಯಗಳಿರುವುದೂ ತಿಳಿದು ಬಂದಿದೆ: O14, O15 ಮತ್ತು O19.