ಎಲ್. ಕೆ. ಅಡ್ವಾಣಿ
ಭಾರತದ ಉಪ ಪ್ರಧಾನ ಮಂತ್ರಿ, ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು / From Wikipedia, the free encyclopedia
ಲಾಲ್ ಕಿಶನ್ಛಂದ್ ಅಡ್ವಾಣಿ, ಭಾರತ ದೇಶದ ಒಬ್ಬ ಅನುಭವಿ ರಾಜಕಾರಣಿ. ಲಾಲ್ ಕೃಷ್ಣ ಅಡ್ವಾಣಿ ಎಂದು ಜನಪ್ರಿಯರಾಗಿರುವ ಇವರು, ೮ ನವೆಂಬರ್ ೧೯೨೭ರಂದು ಅವಿಭಜಿತ, ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯದ ಗೊರೆಗಾಂವ್ ನಲ್ಲಿ ಜನಿಸಿದರು. ಇವರು ಸ್ವತಂತ್ರ್ಯ ಭಾರತದ ೭ನೇ ಉಪ ಪ್ರಧಾನ ಮಂತ್ರಿಗಳಾಗಿ ೨೦೦೨ರಿಂದ ೨೦೦೪ರವರೆಗೆ ಸೇವೆ ಸಲ್ಲಿಸಿದ್ದಾರೆ. ಅಡ್ವಾಣಿರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಭಾರತ ರಾಜಕೀಯಕ್ಕೆ ಧುಮುಕಿದರು.