ಜಾತೀಕರಣ
From Wikipedia, the free encyclopedia
ಜಾತೀಕರಣ ಅಂದರೆ ಹೊಸ ಜೀವ ಜಾತಿಯ ಹುಟ್ಟುವಿಕೆಯ ಪ್ರಕ್ರಿಯೆ. ಜೀವಜಾತಿಯೊಂದರ ಸಂದಣಿಗಳು ಕಾರಣಾಂತರಗಳಿಂದ ಸಂಕರಗೊಳ್ಳದೆ ಸಂತಾನ ಪ್ರತ್ಯೆಕತೆಯನ್ನು ತೋರುತ್ತದೆ. ಭೌಗೊಳಿಕ ತಡೆಗಳಿಂದ ಬಂದ ಪ್ರತ್ಯೇಕತೆಯ ಆಧಾರದ ಮೆಲೆ ಸ್ವಾಭಾವಿಕ ಜಾತೀಕರಣವನ್ನು ನಾಲ್ಕುವಿಧವಾಗಿ ವಿಂಗಡಿಸಲಾಗಿದೆ.
ಪ್ರಭೇದೀಕರಣವು[ಟಿಪ್ಪಣಿ 1] ಸಂತಾನೋತ್ಪತ್ತಿ ಮಾಡುವ ಸಮುದಾಯಗಳು ವಿಕಾಸವಾಗಿ ಭಿನ್ನ ಪ್ರಭೇದಗಳಾಗುವ ವಿಕಸನೀಯ ಪ್ರಕ್ರಿಯೆ. ಪ್ರಭೇದೀಕರಣದಲ್ಲಿ ನೈಸರ್ಗಿಕ ಆಯ್ಕೆಯ ಪಾತ್ರದ ಬಗೆಗೆ ಮೊದಲು ವಿವರಿಸಿದುದು ಚಾರ್ಲ್ಸ್ ಡಾರ್ವಿನ್.[1] ಪ್ರಭೇದೀಕರಣದಲ್ಲಿ ನಾಲ್ಕು ವಿಧಗಳಿದ್ದು ಅವು: ಅಲ್ಲೊಪಾಟ್ರಿಕ್, ಪೆರಿಪಾಟ್ರಿಕ್, ಪಾರಪಾಟ್ರಿಕ್ ಮತ್ತು ಸಿಂಪಾಟ್ರಿಕ್ ಪ್ರಭೇದೀಕರಣಗಳು. ಪಶು ಸಂಗೋಪನೆ, ಕೃಷಿ ಮತ್ತು ಲ್ಯಾಬರೊಟರಿ ಪ್ರಯೋಗಗಳಲ್ಲಿ ಕೃತಿಮವಾಗಿ ಪ್ರಭೇದೀಕರಣವನ್ನು ಪ್ರೇರೇಪಿಸ ಬಹುದು. ಜೆನೆಟಿಕ್ ಚಲನೆ ಪ್ರಭೇದೀಕರಣ ಪ್ರಕ್ರಿಯೆಗೆ ಕೊಡುವ ಕಾಣಿಕೆಯ ಮಹತ್ವದ ಬಗೆಗೆ ಚರ್ಚೆ ಚಾಲ್ತಿಯಲ್ಲಿದೆ.