ಜಾರ್ಜ್ ಆರ್ವೆಲ್
From Wikipedia, the free encyclopedia
ಎರಿಕ್ ಆರ್ಥರ್ ಬ್ಲೇರ್ (ಜನನ: ೨೫ ಜೂನ್ ೧೯೦೩; ನಿಧನ: ೨೧ ಜನವರಿ ೧೯೫೦),[3] (ಜಾರ್ಜ್ ಆರ್ವೆಲ್ ಎಂಬ ಸಾಹಿತ್ಯದ ಕಾವ್ಯನಾಮದೊಂದಿಗೆ ಚಿರಪರಿಚಿತ) ಒಬ್ಬ ಇಂಗ್ಲಿಷ್ ಬರಹಗಾರ ಹಾಗೂ ಪತ್ರಕರ್ತರಾಗಿದ್ದರು. ಇವರ ಕೃತಿಗಳಲ್ಲಿ ಚಾತುರ್ಯ ಮತ್ತು ಜಾಣತನ, ಸಾಮಾಜಿಕ ಅನ್ಯಾಯದ ಗಹನ ತಿಳಿವಳಿಕೆ, ಸರ್ವಾಧಿಕಾರ ಪ್ರಭುತ್ವದ ವಿರುದ್ಧ ಗಾಢ, ಕ್ರಾಂತಿಕಾರಿ ವಿರೋಧ, ಭಾಷೆಯಲ್ಲಿ ಸ್ಫಟಿಕದಷ್ಟು ಸ್ಪಷ್ಟನೆಗಾಗಿ ಹಂಬಲ, ಹಾಗೂ, ಪ್ರಜಾಪ್ರಭುತ್ವದ ಸಮಾಜವಾದದಲ್ಲಿ ದೃಢ ನಂಬಿಕೆ - ಇವೆಲ್ಲವೂ ಎದ್ದುಕಾಣುತ್ತವೆ.[4][5]
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
George Orwell | |
---|---|
ಜನನ | Eric Arthur Blair (೧೯೦೩-೦೬-೨೫)೨೫ ಜೂನ್ ೧೯೦೩ Motihari, Bihar, British India |
ಮರಣ | 21 January 1950(1950-01-21) (aged 46) Camden, ಲಂಡನ್, England |
ಅಂತ್ಯ ಸಂಸ್ಕಾರ ಸ್ಥಳ | Sutton Courtenay, Oxfordshire |
ಕಾವ್ಯನಾಮ | George Orwell, John Freeman[1][2] |
ವೃತ್ತಿ | Novelist, political writer and journalist |
ರಾಷ್ಟ್ರೀಯತೆ | British |
ಪ್ರಮುಖ ಕೆಲಸ(ಗಳು) | Homage to Catalonia (೧೯೩೮) Animal Farm (೧೯೪೫) Nineteen Eighty-Four (೧೯೪೯) essays |
ಬಾಳ ಸಂಗಾತಿ | Eileen O'Shaughnessy (೧೯೩೫–೧೯೪೫, her death) Sonia Brownell (೧೯೪೯–೧೯೫೦, his death) |
ಪ್ರಭಾವಗಳು
| |
ಪ್ರಭಾವಿತರು
| |
ಸಹಿ |
ಇಪ್ಪತ್ತನೆಯ ಶತಮಾನದಲ್ಲಿ ಬಹುಶಃ ಇಂಗ್ಲಿಷ್ ಸಂಸ್ಕೃತಿಯ ಅತ್ಯುತ್ತಮ ಚರಿತ್ರೆ ಲೇಖಕರೆನಿಸಿದ[6] ಜಾರ್ಜ್ ಆರ್ವೆಲ್, ಕಾಲ್ಪನಿಕ ಕಥೆ, ವಿಮರ್ಶಾತ್ಮಕ ಪತ್ರಿಕೋದ್ಯಕ್ಕಾಗಿ, ಸಾಹಿತ್ಯ ಸಂವಾದ-ವಿಮರ್ಶೆ ಮತ್ತು ಕವಿತೆ ಬರೆದರು. ನರಕಸದೃಶ ಕಾದಂಬರಿ ಎನ್ನಲಾದ ನೈನ್ಟೀನ್ ಎಯ್ಟಿ-ಫೋರ್ (ಪ್ರಕಾಶನ: ೧೯೪೯) ಹಾಗೂ ಹಾಸ್ಯ-ವಿಡಂಬನಾತ್ಮಕ ಕಿರು-ಕಾದಂಬರಿ ಅನಿಮಲ್ ಫಾರ್ಮ್ (೧೯೪೫) ಕೃತಿಗಳಿಗಾಗಿ ಜಾರ್ಜ್ ಆರ್ವೆಲ್ ಅತಿಹೆಚ್ಚು ಪರಿಚಿತರು. ಜಾರ್ಜ್ ಆರ್ವೆಲ್ರ ಇವೆರಡೂ ಪುಸ್ತಕಗಳ ಪ್ರತಿಗಳು, ಇಪ್ಪತ್ತನೆಯ ಶತಮಾನದ ಬೇರೆ ಯಾವುದೇ ಲೇಖಕರ ಎರಡು ಪುಸ್ತಕಗಳಿಗಿಂತಲೂ ಹೆಚ್ಚು ಮಾರಾಟವಾಗಿವೆ.[7] ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ರಿಪಬ್ಲಿಕನ್ ಪಡೆಯ ಪರ ಸ್ವಯಂಸೇವಕನಾಗಿ ತಮ್ಮ ಅನುಭವಗಳನ್ನು ಪ್ರಕಟಿಸಿರುವ ಹೊಮೇಜ್ ಟು ಕ್ಯಾಟಲೊನಿಯಾ (೧೯೩೮), ಜೊತೆಗೆ ರಾಜಕೀಯ, ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿ ಕುರಿತು ಹಲವು ಪ್ರಬಂಧಗಳು ವ್ಯಾಪಕ ಪ್ರಶಂಸೆ ಗಳಿಸಿವೆ.
ಇಂದಿಗೂ ಸಹ, ಜನಪ್ರಿಯ ಮತ್ತು ರಾಜಕೀಯ ಸಮಕಾಲೀನ ಸಂಸ್ಕೃತಿಗಳ ಮೇಲೆ ಜಾರ್ಜ್ ಆರ್ವೆಲ್ರ ಪ್ರಭಾವವಿದೆ. ಆರ್ವೆಲಿಯನ್ (Orwellian) ಎಂಬ ಉಕ್ತಿ ಸೇರಿದಂತೆ ಇವರ ಹಲವು ನವಪದ ಪ್ರಯೋಗಗಳನ್ನು ಇಂದು ದೇಶೀಯ ಪರಿಭಾಷೆಯಲ್ಲಿ ಬಳಸಲಾಗುತ್ತಿದೆ. 'ಆರ್ವೆಲೀಯ' ಎಂದರೆ, ಮುಕ್ತ ಸಮಾಜಕ್ಕೆ ಹಾನಿಕರವಾದ ಯಾವುದೇ ನಿರ್ದಯೆಯ ಅಥವಾ ಸ್ವಾರ್ಥಕ್ಕಾಗಿ ಬಳಸುವ ಸಾಮಾಜಿಕ ವಿದ್ಯಮಾನ ಅಥವಾ ಪರಿಕಲ್ಪನೆ; ಇದು ಸರ್ಕಾರದ ಸರ್ವಾಧಿಕಾರ ಪ್ರವೃತ್ತಿಯ ಸಂಕೇತದ ಸಮಾನಾರ್ಥವೆಂದೂ ದೇಶೀಯ ಭಾಷೆಯಲ್ಲಿ ಬಳಸಲಾಗುತ್ತದೆ.