ಜೆಂಘಿಸ್ ಖಾನ್
ಮಂಗೋಳ್ ಸಾಮ್ರಾಜ್ಯದ ಸ್ಥಾಪಕ ಮತ್ತು ಖಾನ್ / From Wikipedia, the free encyclopedia
ಗೆಂಘಿಸ್ ಖಾನ್ (pronounced /ˈdʒɛŋɡɪs ˈkɑːn/ ಅಥವಾ/ˈɡɛŋɡɪs ˈkɑːn/[1]; ಮಂಗೋಲಿಯನ್:Чингис Хаан ಅಥವಾ ಟೆಂಗಿಸ್ (ಸಾಗರ, ಸಮುದ್ರ), Chinggis Khaan , ಅಥವಾ Činggis Qaγan ), ಟೆಂಪ್ಲೇಟು:IPA2;c. ೧೧೬೨[2]–೧೨೨೭), ಹುಟ್ಟು ದ್ವನಿ ಕಡತ "Temujin.ogg" ಕಂಡುಬಂದಿಲ್ಲ (ಅರ್ಥ "ironworker"[3]), ಖಾನ್ (ಆಡಳಿತಗಾರ) ಮತ್ತು ಖಗನ್ (ಚಕ್ರವರ್ತಿ) ಇತಿಹಾಸದ ಅತಿ ದೊಡ್ಡ ನಿರಂತರ ಸಾಮ್ರಾಜ್ಯ ಮಂಗೋಲ್ ಚಕ್ರಾಧಿಪತ್ಯದ ಸ್ಥಾಪಕ ಚಕ್ರವರ್ತಿ , .
ಈಶಾನ್ಯ ಏಷಿಯಾದ ಅನೇಕ ಅಲೆಮಾರಿ ಬುಡಕಟ್ಟು ಜನಾಂಗಗಳನ್ನು ಒಂದುಗೂಡಿಸಿ ಅವನು ಅಧಿಕಾರದ ಗದ್ದುಗೆ ಏರಿದನು . ಮಂಗೋಲ್ ಚಕ್ರಾಧಿಪತ್ಯದ ಸ್ಥಾಪನೆಯ ನಂತರ "ಗೆಂಘಿಸ್ ಖಾನ್" ಎಂಬುದಾಗಿ ಘೋಷಿಸಿಕೊಂಡ ನಂತರ ಆತ ಕರಾ-ಖೇತಾನ್ ಖನಾಟೆ, ಕಾಕಾಸಸ್, ಖ್ವಾರೆಝ್ಮಿದ್ ಚಕ್ರಾಧಿಪತ್ಯ, ಪಶ್ಚಿಮ ಕ್ಸಿಯಾ ಮತ್ತು ಜಿನ್ ರಾಜವಂಶಸ್ಥರು ಮುಂತಾದ ಮಂಗೋಲ್ ಪ್ರದೇಶಗಳ ಮೇಲೆ ದಂಡೆತ್ತಿ ಬಂದು ದಾಳಿಗಳಾನ್ನು ನಡೆಸಿದೆ. ಆತನ ಜೀವನದ ಕೊನೆಯ ವೇಳೆಗೆ ಮಂಂಗೋಲ್ ಚದ್ರಾಧಿಪತ್ಯ ಮಧ್ಯ ಏಷಿಯಾದ ಬಹಳಷ್ಟು ಭಾಗಗಳು ಮತ್ತು ಚೀನಾ ದೇಶವನ್ನು ಆಕ್ರಮಿಸಿಕೊಂಡಿತ್ತು.
ಗೆಂಘಿಸ್ ಖಾನ್ ಸಾಯುವುದಕ್ಕೆ ಮೊದಲು ಒಗೆದೇಯ್ ಖಾನ್ನನ್ನು ಉತ್ತರಾಧಿಕಾರಿಯಾಗಿ ನೇಮಿಸಿ ಚಕ್ರಾಧಿಪತ್ಯದ ಖಾನ್ ರಾಜ್ಯಗಳನ್ನು ತನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಭಾಗ ಮಾಡಿದ. ತಾಂಗೂಟರನ್ನು ಸೋಲಿಸಿದ ನಂತರ ೧೨೨೭ರಲ್ಲಿ ಆತ ಮರಣ ಹೊಂದಿದ. ಮಂಗೋಲಿಯಾದ ಗೊತ್ತಿಲ್ಲದ ಸ್ಥಳದಲ್ಲಿ ಆತನನ್ನು ಗುರುತು ಇಲ್ಲದೆ ಸಮಾಧಿಮಾಡಲಾಯಿತು. ಆತನ ವಂಶಸ್ಥರು ಯೂರೇಷಿಯಾದ ಬಹಳಷ್ಟು ಭೂಪ್ರದೇಶಗಳು ಆಧುನಿ ಚೀನಾ, ಕೊರಿಯಾ, ಕಾಕಸಸ್, ಮಧ್ಯ ಏಷಿಯಾದ ದೇಶಗಳು , ಪೂರ್ವ ಯೂರೋಪಿನ ಬಹಳಷ್ಟು ಪ್ರದೇಶಗಳು ಮತ್ತು ಮಧ್ಯ ಪ್ರಾಚ್ಯದ ಪ್ರದೇಶಗಳಾನ್ನು ಆಕ್ರಮಿಸಿಕೊಳ್ಳುತ್ತಾ ಅಥವಾ ಹಿಡುವಳಿ ರಾಜ್ಯಗಳನ್ನು ಸೃಷ್ಟಿಸುತ್ತಾ ಮಂಗೋಲ್ ಚಕ್ರಾಧಿಪತ್ಯದ ವಿಸ್ತರಣೆಯನ್ನು ಮುಂದುವರೆಸಿಕೊಂಡು ಹೋದರು.
ತನ್ನ ಸೇನಾಪಡೆಗಳ ಸಾಧನೆಗೂ ಮಿಗಿಲಾಗಿ ಗೆಂಘಿಸ್ ಖಾನ್ ಮಂಗೋಲ್ ಚಕ್ರಾಧಿಪತ್ಯವನ್ನು ಬೇರೊಂದು ಬಗೆಯಲ್ಲಿ ಮುನ್ನಡೆಸಿದ. ಉಯ್ಘರ್ ಲಿಪಿಯನ್ನು ಮಂಗೋಲ್ ಚಕ್ರಾಧಿಪತ್ಯದ ಬರವಣಿಗೆ ಪದ್ಧತಿಯಾಗಿ ಸಾರಿದ. ಮಂಗೋಲ್ ಚಕ್ರಾಧಿಪತ್ಯದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಉತ್ತೇಜಿಸಿದ ಮತ್ತು ಈಶಾನ್ಯ ಏಷಿಯಾದ ಅಲೆಮಾರಿ ಬುಡಕಟ್ಟು ಜನಾಂಗಗಳನ್ನು ಒಂದುಗೂಡಿಸಿ ಅಖಂಡ ಚಕ್ರಾಧಿಪತ್ಯವನ್ನು ರೂಪಿಸಿದ. ಇಂದಿನ ಮಂಗೋಲಿಯಾ ಆತನನ್ನು ಮಂಗೋಲ್ ಚಕ್ರಾಧಿಪತ್ಯದ ಪಿತಾಮಹನೆಂದು ಗೌರವಿಸುತ್ತದೆ.[4]