ಟವರ್ ಬ್ರಿಡ್ಜ್
From Wikipedia, the free encyclopedia
ಟವರ್ ಬ್ರಿಡ್ಜ್ | |
---|---|
ಸಾಗಾಣೆ | A100 Tower Bridge Road – motor vehicles, cyclists, pedestrians |
ದಾಟು | Thames |
ಪ್ರಾದೇಶಿಕ | ಲಂಡನ್ Boroughs: – north side: Tower Hamlets – south side: Southwark |
ಉಸ್ತುವಾರಿ | Bridge House Estates |
ವಿನ್ಯಾಸ | Bascule bridge, suspension bridge |
ಒಟ್ಟು ಉದ್ದ | 244 metres (801 ft) |
Longest span | 61 metres (200 ft) |
ಕೆಳಗಿನ ತೆರವು | 8.6 metres (28 ft) (closed) 42.5 metres (139 ft) (open) (Mean High Water Spring Tide) |
ತೆರವು | ೩೦ June ೧೮೯೪ |
ಪಾರಂಪರಿಕ ಸ್ಥಿತಿ | Grade I listed structure |
ಗೋಪುರ ಸೇತುವೆ (ಟಾವರ್ ಬ್ರಿಡ್ಜ್) ಯುನೈಟೆಡ್ ಕಿಂಗ್ಡಮ್ನ ಇಂಗ್ಲೆಂಡ್, ದೇಶದ ರಾಜಧಾನಿ ಲಂಡನ್ನಲ್ಲಿದೆ. ಇದು ಥೇಮ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸಮತೋಲನದ ತೂಗು ಸೇತುವೆ, ಸಮಸನ್ನೆ ಮತ್ತು ತೂಗುಸೇತುವೆಗಳ ಜಂಟಿ-ವಿನ್ಯಾಸದ ಸೇತುವೆಯಾಗಿದೆ. ಇದು ಲಂಡನ್ ಗೋಪುರಕ್ಕೆ ಬಹಳ ಸನಿಹದಲ್ಲಿರುವ ಕಾರಣ, ಈ ಸೇತುವೆಗೆ ಗೋಪುರ ಸೇತುವೆ ಎನ್ನಲಾಗಿದೆ.ಹೆಸರು[›] ಇಂದು ಈ ಸೇತುವೆಯು ಲಂಡನ್ ಮಹಾನಗರದ ಮೂರ್ತಿವೆತ್ತ ಪ್ರಮುಖ ಲಾಂಛನವಾಗಿದೆ.
ಈ ಸೇತುವೆಯ ಎರಡೂ ತುದಿಗಳಲ್ಲಿ ಎರಡು ಗೋಪುರಗಳಿವೆ. ಈ ಗೋಪುರಗಳ ಮೇಲ್ತುದಿಗಳ ನಡುವೆ ಅಡ್ಡಲಾದ ಕಾಲ್ನಡಿಗೆಗಾಗಿ ಸಾಲು ದಾರಿಗೆ ಜೋಡಿಸಲಾಗಿದೆ. ಈ ಗೋಪುರಗಳ ನೆಲದೆಡೆಗೆ ಬಾಗಿದ ದಿಕ್ಕಿನಲ್ಲಿ ತೂಗುಸೇತುವೆಗಳಿಂದ ಉಂಟಾಗುವ ಅಡ್ಡಲಾದ ಭಾರ ತಡೆದುಕೊಳ್ಳಲು ಈ ಕಾಲ್ನಡಿಗೆ ಪಂಕ್ತಿಯ ದಾರಿಯನ್ನು ನಿರ್ಮಿಸಲಾಗಿದೆ. ಸೇತುವೆಯ ತೂಗು-ಭಾಗಗಳ ಭಾರವಾದ ಉದ್ದದ ಭಾಗ, ಹಾಗೂ, ಎರಡು ಕಾಲ್ನಡಿಗೆ ಪಂಕ್ತಿಗಳ ಉದ್ದದ ಪ್ರತಿ-ಭಾರಗಳನ್ನು ಈ ಎರಡೂ ದೃಢ ಗೋಪುರಗಳು ಹೊಂದಿಸಿಕೊಳ್ಳುತ್ತವೆ. ಪ್ರತಿ ಗೋಪುರದ ತಳದಲ್ಲಿ, ಸಮಸನ್ನೆಯ ಕೇಂದ್ರಬಿಂದುಗಳು ಮತ್ತು ಕಾರ್ಯನಿರ್ವಹಣಾ ಯಂತ್ರಗಳಿವೆ. ಸೇತುವೆಯ ಈಗಿರುವ ಕೆಂಪು, ಬಿಳಿ ಮತ್ತು ನೀಲಿ ಬಣ್ಣವನ್ನು ೧೯೭೭ರಲ್ಲಿ, ಅಂದರೆ, ಮಹಾರಾಣಿಯ ಸಿಂಹಾಸನಾರೋಹಣದ ರಜತ ಮಹೋತ್ಸವದ ದ್ಯೋತಕ ಬಳಿಯಲಾಯಿತು. ಮೂಲತಃ ಇದಕ್ಕೆ ಚಾಕೊಲೆಟ್ ನ ಕಂದು ಬಣ್ಣ ಬಳಿಯಲಾಗಿತ್ತು.[1]
ಗೋಪುರ ಸೇತುವೆಯನ್ನು ಕೆಲವೊಮ್ಮೆ ಲಂಡನ್ ಸೇತುವೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಧೇಮ್ಸ್ ನದಿಯ ಹರಿವಿನ ವಿರುದ್ಧ ದಿಕ್ಕಿನಲ್ಲಿ ಮುಂದೆ ಸಾಗಿದರೆ ಇಲ್ಲಿಂದ ಅದು ಲಂಡನ್ ಸೇತುವೆ ತಲಪುವುದು.[2] ಒಂದು ಜನಪ್ರಿಯವಾದ, ಬಹಳಷ್ಟು ಚರ್ಚಿತ ನಗರ ಕಟ್ಟುಕಥೆಯ ಪ್ರಕಾರ, ೧೯೬೮ರಲ್ಲಿ ಹಳೆಯ ಲಂಡನ್ ಸೇತುವೆಯನ್ನು ಕೊಂಡ ರಾಬರ್ಟ್ ಮೆಕಲಾಕ್, ಅದನ್ನು ಅರಿಝೊನಾದ ಲೇಕ್ ಹವಸು ಸಿಟಿಗೆ ರವಾನಿಸಿದರು. ತಾವು ಗೋಪುರ ಸೇತುವೆಯನ್ನೇ ಕೊಂಡುಕೊಳ್ಳುತ್ತಿರುವರೆಂದು ಅವರು ಭಾವಿಸಿದ್ದರು. ಮೆಕಲಾಕ್ ಈ ಕಥೆಯೆಲ್ಲಾ ಸುಳ್ಳು ಎಂದು, ಸ್ವತಃ ಮೆಕಲಾಕ್ ಹಾಗೂ ಸೇತುವೆ ಮಾರಾಟಗಾರ ಇವಾನ್ ಲಕಿನ್ ಹೇಳಿದರು.[3]
ಗೋಪುರ ಸೇತುವೆಗೆ, ಸರ್ಕಲ್ ಮತ್ತು ಡಿಸ್ಟ್ರಿಕ್ಟ್ ಲೈನ್ಸ್ನಲ್ಲಿರುವ ಟಾವರ್ ಹಿಲ್ ಅತಿಸನಿಹದ ಲಂಡನ್ ನೆಲದಡಿ ರೈಲು ನಿಲ್ದಾಣ ಹಾಗೂ ಟಾವರ್ ಗೇಟ್ವೇ ಅತಿಸನಿಹದ ಡಾಕ್ಲೆಂಡ್ಸ್ ಲೈಟ್ ರೈಲು ನಿಲ್ದಾಣವಿದೆ.[4]