ಡರ್ಬನ್
From Wikipedia, the free encyclopedia
ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್ ಪ್ರಾಂತ್ಯದ ಎಥೆಕ್ವಿನಿ ಮಹಾನಗರವಲಯದ ಪೌರಸಂಸ್ಥೆಯ ಭಾಗವಾಗಿರುವ ಬೃಹತ್ ಮಹಾನಗರ ಡರ್ಬನ್ (ಜುಲು:eThekwini), ರಾಷ್ಟ್ರದಲ್ಲೇ ಮೂರನೇ ಬೃಹತ್ ಮಹಾನಗರವಾಗಿದೆ. ದಕ್ಷಿಣ ಆಫ್ರಿಕಾದಲ್ಲಿಯೇ ಅತ್ಯಂತ ಅವಿಶ್ರಾಂತ ಬಂದರೆಂದು ಡರ್ಬನ್ ನಗರವು ಹೆಸರುವಾಸಿಯಾಗಿರುವುದಲ್ಲದೇ ಮಹಾನಗರ'ದ ಬೆಚ್ಚನೆಯ ಉಪೋಷ್ಣವಲಯ ಹವಾಮಾನ ಮತ್ತು ಸವಿಸ್ತಾರ ಸಮುದ್ರ ತೀರಗಳಿಂದಾಗಿ ಪ್ರವಾಸೋದ್ಯಮದ ಪ್ರಮುಖ ಕೇಂದ್ರವೂ ಆಗಿದೆ. ಈ ಮಹಾನಗರವು 2007ರ ಸಾಲಿನ ಸಮುದಾಯ ಸಮೀಕ್ಷೆಯ ಪ್ರಕಾರ, ಬಹುತೇಕ 3.5 ದಶಲಕ್ಷದಷ್ಟು,[2] ಜನಸಂಖ್ಯೆ ಹೊಂದಿದ್ದು, ಆಫ್ರಿಕಾ ಖಂಡದ ಪೂರ್ವ ಕರಾವಳಿಯಲ್ಲಿಯೇ ಡರ್ಬನ್ ಅತಿದೊಡ್ಡ ಮಹಾನಗರವಾಗಿದೆ. ವಿಸ್ತೀರ್ಣದಲ್ಲಿ ಟೆಂಪ್ಲೇಟು:Km2 to sq miರಷ್ಟಿರುವ ಇಲ್ಲಿನ ಭೂಪ್ರದೇಶವು ತುಲನಾತ್ಮಕವಾಗಿ ದಕ್ಷಿಣ ಆಫ್ರಿಕಾದ ಇತರ ಮಹಾನಗರಗಳಿಗಿಂತ ದೊಡ್ಡದಾಗಿರುವುದರಿಂದ, ಸ್ವಲ್ಪಮಟ್ಟಿಗೆ ಕಡಿಮೆಯೆನಿಸುವ ಟೆಂಪ್ಲೇಟು:PD km2 to sq miರಷ್ಟು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ.[1]
Durban | |
---|---|
City | |
Country | ದಕ್ಷಿಣ ಆಫ್ರಿಕಾ |
Province | KwaZulu-Natal |
Metropolitan municipality | eThekwini |
Established | 1835 |
Government | |
• Mayor | Obed Mlaba (ANC) |
Area | |
• Total | ೨,೨೯೧.೮೯ km೨ (೮೮೪.೯೦ sq mi) |
Population (2007)[2] | |
• Total | ೩೪,೬೮,೦೮೬ |
• Density | ೧,೫೧೩/km೨ (೩,೯೨೦/sq mi) |
Time zone | UTC+2 (South Africa Standard Time) |
Postal Code | 4001 |
Area code | 031 |
Website | www.durban.gov.za |