ತವಾಂಗ್ ಮೊನ್ಯಾಸ್ಟರಿ
ಭಾರತದ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ತವಾಂಗ್ ನಗರದಲ್ಲಿರುವ ತವಾಂಗ್ ಮಠ / From Wikipedia, the free encyclopedia
ತವಾಂಗ್ ಮೊನ್ಯಾಸ್ಟರಿ ಭಾರತದ ಅರುಣಾಚಲ ಪ್ರದೇಶ ರಾಜ್ಯದ ತವಾಂಗ್ ಜಿಲ್ಲೆಯ ತವಾಂಗ್ ನಗರದಲ್ಲಿ ಸ್ಥಿತವಾಗಿದೆ. ಇದು ಭಾರತದ ಅತಿದೊಡ್ಡ ಮೊನ್ಯಾಸ್ಟರಿ ಆಗಿದೆ ಮತ್ತು ಟಿಬೆಟ್ನ ಲಾಸಾದಲ್ಲಿರುವ ಪೊಟಾಲಾ ಅರಮನೆಯ ನಂತರ ವಿಶ್ವದ ಎರಡನೇ ಅತಿದೊಡ್ಡ ಮೊನ್ಯಾಸ್ಟರಿ ಆಗಿದೆ.
ಟಿಬೇಟಿಯನ್ ಭಾಷೆಯಲ್ಲಿ ತವಾಂಗ್ ಮೊನ್ಯಾಸ್ಟರಿಯ ಹೆಸರು ಗಾಡೆನ್ ನಾಮ್ಗ್ಯಾಲ್ ಲಾಟ್ಸೆ ಎಂದಾಗಿದೆ. ಇದರರ್ಥ "ಸಂಪೂರ್ಣ ವಿಜಯದ ದೈವಿಕ ಸ್ವರ್ಗ". ಇದನ್ನು 1680-1681ರಲ್ಲಿ ಮೆರಾಕ್ ಲಾಮಾ ಲೋಡ್ರೆ ಗ್ಯಾಟ್ಸೊ 5 ನೇ ದಲೈ ಲಾಮಾ ನ್ಗವಾಂಗ್ ಲೋಬ್ಸಾಂಗ್ ಗ್ಯಾಟ್ಸೊ ಅವರ ಆಶಯಗಳಿಗೆ ಅನುಗುಣವಾಗಿ ಸ್ಥಾಪಿಸಿದರು. ಇದು ವಜ್ರಯಾನ ಬೌದ್ಧಧರ್ಮದ ಗೆಲುಗ್ ಪಂಥಕ್ಕೆ ಸೇರಿದೆ.
ಈ ಮೊನ್ಯಾಸ್ಟರಿ ಮೂರು ಮಹಡಿಯಷ್ಟು ಎತ್ತರವಿದೆ. ಇದರ ಸುತ್ತ 925 feet (282 m) ಉದ್ದನೆಯ ಕಾಂಪೌಂಡ್ ಗೋಡೆ ಇದೆ. ಇದರ ಸಂಕೀರ್ಣದೊಳಗೆ 65 ವಸತಿ ಕಟ್ಟಡಗಳಿವೆ. ಮೊನ್ಯಾಸ್ಟರಿಯ ಗ್ರಂಥಾಲಯವು ಅಮೂಲ್ಯವಾದ ಹಳೆಯ ಗ್ರಂಥಗಳನ್ನು ಹೊಂದಿದೆ, ಮುಖ್ಯವಾಗಿ ಕಾಂಗ್ಯೂರ್ ಮತ್ತು ತೆಂಗ್ಯೂರ್ .
ಈ ಬೌದ್ಧಮಠವು 10,000 feet (3,000 m) ಎತ್ತರದ ಪರ್ವತದ ತುದಿಯ ಹತ್ತಿರ ನೆಲೆಗೊಂಡಿದೆ. ಇಲ್ಲಿಂದ ತವಾಂಗ್ ಚು ಕಣಿವೆಯ ದೂರದೃಶ್ಯದ ನೋಟ ಕಾಣಿಸುತ್ತದೆ. ಈ ಕಣಿವೆಯು ಹಿಮಾಚ್ಛಾದಿತ ಪರ್ವತಗಳು ಮತ್ತು ಕೋನಿಫೆರಸ್ ಕಾಡುಗಳನ್ನು ಒಳಗೊಂಡಿದೆ. ಈ ಬೌದ್ಧಮಠವನ್ನು ಉತ್ತರ ದಿಕ್ಕಿನಿಂದ ಆಲ್ಪೈನ್ ಸಸ್ಯಗಳಿರುವ ಇಳಿಜಾರಾದ ಚಾಚಿನ ಮೂಲಕ ಪ್ರವೇಶಿಸಲಾಗುತ್ತದೆ.[1][2][3][4][5]
ಇಲ್ಲಿ ೪೫೦ ಬೌದ್ಧ ಭಿಕ್ಕುಗಳಿದ್ದಾರೆ ಎಂದು ೨೦೧೦ರಲ್ಲಿ ವರದಿಯಾಗಿತ್ತು.[3]