ದ ಪ್ರಾಡಿಜಿ
From Wikipedia, the free encyclopedia
ದ ಪ್ರಾಡಿಜಿ ಎಂಬುದು ಎಸ್ಸೆಕ್ಸ್ನ ಬ್ರೈನ್ಟ್ರೀಯಲ್ಲಿ 1990ರಲ್ಲಿ ಲಿಯಾಮ್ ಹೌಲೆಟ್ ಸ್ಥಾಪಿಸಿದ ಒಂದು ಆಂಗ್ಲ ವಿದ್ಯುನ್ಮಾನ ನೃತ್ಯ ಸಂಗೀತ ವೃಂದವಾಗಿದೆ. ಫ್ಯಾಟ್ಬಾಯ್ ಸ್ಲಿಮ್, ದ ಕೆಮಿಕಲ್ ಬ್ರದರ್ಸ್ ಹಾಗೂ ದ ಕ್ರಿಸ್ಟಲ್ ಮೆಥಡ್, ಹಾಗೂ ಇನ್ನಿತರ ಪ್ರದರ್ಶನಗಳೊಂದಿಗೆ, ದ ಪ್ರಾಡಿಜಿಯ ಸದಸ್ಯರು 1990ರ ಹಾಗೂ 2000ರ ದಶಕಗಳಲ್ಲಿ ಮುಖ್ಯ ವಾಹಿನಿಯ ಜನಪ್ರಿಯತೆಯನ್ನು ಗಳಿಸಿದ ಬಿಗ್ ಬೀಟ್ ಪ್ರಭೇದದ ಪ್ರವರ್ತಕರಾಗಿದ್ದಾರೆ, ಅಷ್ಟೇ ಅಲ್ಲದೇ ಉತ್ತಮ ಗುಣಮಟ್ಟದ ಲೈವ್ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ನೃತ್ಯ ಸಂಗೀತ ಇತಿಹಾಸದಲ್ಲೇ ಯಾರೂ ಸರಿಗಟ್ಟದ 20 ದಶಲಕ್ಷಕ್ಕೂ ಮೀರಿದ ಪ್ರತಿಗಳನ್ನು ವಿಶ್ವದಾದ್ಯಂತ ಮಾರಿದ್ದಾರೆ.[1]
The Prodigy | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Braintree, Essex, ಇಂಗ್ಲೆಂಡ್ |
ಸಂಗೀತ ಶೈಲಿ | Big beat, Alternative Rock, Breakbeat Rave Synthpunk Hardcore techno |
ಸಕ್ರಿಯ ವರ್ಷಗಳು | 1990–present |
Labels | Take Me to the Hospital, Ragged Flag, Cooking Vinyl, XL, Beggars Banquet, Mute, Maverick, Warner Bros., Elektra, Shock |
ಅಧೀಕೃತ ಜಾಲತಾಣ | www.theprodigy.com |
ಸಧ್ಯದ ಸದಸ್ಯರು | Liam Howlett Keith Flint Maxim |
ಮಾಜಿ ಸದಸ್ಯರು | Leeroy Thornhill Sharky |
ಈ ವೃಂದದ ಬಿಗ್ ಬೀಟ್ ಸಂಗೀತದ ವ್ಯಾಪಾರೀ ಮುದ್ರೆಯು 1990ರ ದಶಕದ ಆದಿಯಲ್ಲಿನ ರೇವ್, ಹಾರ್ಡ್ಕೋರ್ ಟೆಕ್ನೋ, ಇಂಡಸ್ಟ್ರಿಯಲ್ ಹಾಗೂ ಬ್ರೇಕ್ಬೀಟ್ಗಳಿಂದ ಹಿಡಿದು ನಂತರದ ಅವಧಿಯ ಒರಟು ರಾಕ್/ಪಂಕ್ ಹಾಡುಗಾರಿಕೆಯೊಂದಿಗಿನ ವಿದ್ಯುನ್ಮಾನ ರಾಕ್ ಸಂಗೀತದವರೆಗೆ ಅನೇಕ ಶೈಲಿಗಳನ್ನು ಬಳಸುತ್ತದೆ. ಪ್ರಸ್ತುತದ ಸಂಗೀತ ಬ್ಯಾಂಡ್ನ ಸದಸ್ಯರೆಂದರೆ ಲಿಯಾಮ್ ಹೌಲೆಟ್ (ಸಂಯೋಜಕರು/ಕೀಬೋರ್ಡ್/ಕೀಲಿಮಣೆ ಸಂಗೀತಸಾಧನಗಳು), ಕೀತ್ ಫ್ಲಿಂಟ್ (ನೃತ್ಯಪಟು/ಹಾಡುಗಾರ)ಹಾಗೂ ಮ್ಯಾಕ್ಸಿಮ್ (MC/ಹಾಡುಗಾರ). ಲೀರಾಯ್ ಥಾರ್ನ್ಹಿಲ್ (ನರ್ತಕಿ/ನೃತ್ಯಪಟು/ಅಪರೂಪಕ್ಕೊಮ್ಮೆ ಲೈವ್ ಕೀಬೋರ್ಡ್/ಕೀಲಿಮಣೆ ಸಂಗೀತಸಾಧನಗಳ ನುಡಿಸುವಿಕೆ) 1990ರಿಂದ 2000ದವರೆಗೆ ಸಂಗೀತ ಬ್ಯಾಂಡ್ನ ಸದಸ್ಯರಾಗಿದ್ದರಲ್ಲದೇ, ಅದೇ ರೀತಿ ಅವರ ಆರಂಭದ ಅವಧಿಯಲ್ಲಿ ಸಂಗೀತ ಬ್ಯಾಂಡ್ಅನ್ನು ತೊರೆದ ಷಾರ್ಕಿ ಎಂಬ ಹೆಸರಿನ ಓರ್ವ ನರ್ತಕಿ/ಹಾಡುಗಾರ್ತಿ ಕೂಡಾ ಆಗಿದ್ದರು. ದ ಪ್ರಾಡಿಜಿಯು ಮೊದಲಿಗೆ ರಹಸ್ಯವಾದ/ಅಸಾಂಪ್ರದಾಯಿಕ ರೇವ್ ಪ್ರಸಂಗವಾಗಿ 1990ರ ದಶಕದ ಆದಿಯಲ್ಲಿ, ಹೊರಹೊಮ್ಮಿತಲ್ಲದೇ ಆಗಿನಿಂದ ಅಪಾರ ಜನಪ್ರಿಯತೆಯನ್ನು ಹಾಗೂ ವಿಶ್ವವ್ಯಾಪಿ ಪ್ರಖ್ಯಾತಿಯನ್ನು ಪಡೆಯಿತು. ಅವರ ಬಹು ಜನಪ್ರಿಯ ಗೀತೆ/ಹಾಡುಗಳಲ್ಲಿ "ಚಾರ್ಲಿ", "ಔಟ್ ಆಫ್ ಸ್ಪೇಸ್", "ನೋ ಗುಡ್ (ಸ್ಟಾರ್ಟ್ ದ ಡ್ಯಾನ್ಸ್)", "ವೂಡೂ ಪೀಪಲ್", "ಪಾಯ್ಸನ್", "ಫೈರ್ಸ್ಟಾರ್ಟರ್", "ಬ್ರೆತ್", "ಸ್ಮ್ಯಾಕ್ ಮೈ ಬಿಚ್ ಅಪ್", "ಆಮೆನ್", ಹಾಗೂ "ವಾರಿಯರ್ಸ್ ಡಾನ್ಸ್" ಸೇರಿವೆ.
ಆಲ್ಬಂಗಳ ಮುಖಪುಟದ ಮೇಲೆ ಕಾಣಿಸಿಕೊಳ್ಳುತ್ತಿದ್ದ "ದ ಪ್ರಾಡಿಜಿ" ಎಂಬ ಹೆಸರನ್ನು "ಪ್ರಾಡಿಜಿ"ಗೆ 1997ರಲ್ಲಿ ಮ್ಯೂಸಿಕ್ ಫಾರ್ ದ ಜಿಲ್ಟೆಡ್ ಜನರೇಷನ್ ಹಾಗೂ ದ ಫ್ಯಾಟ್ ಆಫ್ ದ ಲ್ಯಾಂಡ್ ಆಲ್ಬಂಗಳ ನಡುವಿನ ಸಮಯದಲ್ಲಿ ಬದಲಿಸಲಾಯಿತಲ್ಲದೇ ಆಲ್ವೇಸ್ ಔಟ್ನಂಬರ್ಡ್, ನೆವರ್ ಔಟ್ಗನ್ನ್ಡ್ ಗಳ ಬಿಡುಗಡೆಯೊಂದಿಗೆ 2004ರಲ್ಲಿ ಮರಳಿ ಅದೇ ಹೆಸರನ್ನಿಡಲಾಯಿತು. ಆದಾಗ್ಯೂ, ಹೌಲೆಟ್ ಶೀರ್ಷಿಕೆಯು ಯಾವಾಗಲೂ "ದ ಪ್ರಾಡಿಜಿ"ಯೇ ಆಗಿತ್ತೆಂದು ಹೇಳಿಕೆ ನೀಡಿದ್ದರು. ಹೌಲೆಟ್ರ ಪ್ರಕಾರ ಬದಲಾವಣೆಯನ್ನು ಮಾಡಲಾಗಿದ್ದುದು ಕೇವಲ ಪ್ರದರ್ಶಿಸಲಾಗುವ ಲೋಗೋನಲ್ಲಿ ಹೊಂದಿಕೊಳ್ಳಲಾಗುವಂತೆ ಮಾಡಲು ಮಾತ್ರವಾಗಿತ್ತು.[2][3]