ನೈಲಾನ್
From Wikipedia, the free encyclopedia
ನೈಲಾನ್, (Nylon) ಎಂಬುದು ಜಗತ್ತಿನಲ್ಲೆಡೆ ಉಪಯೋಗಿಸಲ್ಪಡುವ ಕೃತಕ ಪಾಲಿಮರ್ ಸಂತತಿಗೆ ಸೇರಿದ ಪಾಲಿಮರ್ ವಸ್ತುವಾಗಿದೆ. ವಲ್ಲಾಸ್ ಕಾರೊಥರ್ಸ್ ಮತ್ತು ಡ್ಯೂಪಾಂಟ್ ಎಂಬ ಸಂಶೋಧಕರಿಬ್ಬರು ೧೯೩೫ ಫೆಬ್ರುವರಿ ೨೮ರಂದು ಮೊಟ್ಟ ಮೊದಲಿಗೆ ಇದನ್ನು ಜಗತ್ತಿಗೆ ಪರಿಚಯಿಸಿದರು. 'ಡೈಮೈನ್,' ಹಾಗು 'ಡೈರ್ಬೊಝೈಲಿಕ್ ಆಸಿಡ್', ಎಂಬ ರಾಸಾಯನಿಕಗಳ ಮಿಶ್ರಣ ಇದಾಗಿದೆ. ದಿನ ನಿತ್ಯ ಬಳಸುವ ಬಟ್ಟೆ, ಕಾಲುಚೀಲಗಳು, ಆಸ್ಪತ್ರೆಯಲ್ಲಿ ಬಳಕೆಯಲ್ಲಿರುವ ಹಲವು ವಸ್ತುಗಳು,ಏರೋಪ್ಲೇನ್, ಪ್ಯಾರಾಚೂಟ್ ನಲ್ಲಿ ಉಪಯೋಗಿಸುವ, ಬಟ್ಟೆಗಳು, ಘನ ಪದಾರ್ಥಗಳು, ಮತ್ತು ಹಗ್ಗದ ಬಳಕೆಯಲ್ಲಿ 'ನೈಲಾನ್' ಅತ್ಯಂತ ಜನಪ್ರಿಯವಾಗಿದೆ. 'ಆಟೋಮೊಬೈಲ್ ಟೈರ್' ಗಳು ನೈಲಾನ್ ಬಳಕೆಗೆ ಒಂದು ಉತ್ತಮ ಉದಾಹರಣೆ. ರೇಷ್ಮೆಗಿಂತ ಅಧಿಕ ಬಾಳಕೆಗೆ ಬರುವ, ಮತ್ತು ಅತ್ಯಂತ ಆಕರ್ಶಕ ಬಣ್ಣಗಳಲ್ಲಿ ಲಭ್ಯವಿರುವ ಈ ಫೈಬರ್, ಮನುಕುಲಕ್ಕೆ ಒಂದು ಪ್ರಮುಖ ಕೊಡುಗೆಯಾಗಿದೆ.
More information ನೈಲಾನ್ 6,6 ...
ನೈಲಾನ್ 6,6 | |
---|---|
ಸಾಂದ್ರತೆ | 1.15 g/cm3 |
`ವಿದ್ಯುತ್ ವಾಹಕತೆ (σ) | 10−12 S/m |
ಉಷ್ಣ ವಾಹಕತೆ | 0.25 W/(m·K) |
ಕರಗುವ ಬಿಂದು | 463–624 K 190–350 °C 374–663 °F |
Close