ಪ್ಲೇಗ್
ಸಾಂಕ್ರಾಮಿಕ ರೋಗ / From Wikipedia, the free encyclopedia
ಪ್ಲೇಗ್ ಒಂದು ಸಾಂಕ್ರಾಮಿಕ ರೋಗ. ಈ ರೋಗವು ಯೆರ್ಸಿನಿಯ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ೨೦೦೭ರ ವರೆಗೂ ಪ್ಲೇಗ್ ರೋಗವು ವಿಶ್ವದ ಮೂರು ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರದಿ ನೀಡಿತ್ತು. ಹಿಂದಿನ ದಿನಗಳಲ್ಲಿ ಪ್ಲೇಗ್,ಕಾಲಾರ ಮತ್ತು ಹಳದಿ ಜ್ವರ ಈ ಮೂರು ರೋಗಗಳು ವಿಶ್ವದಾದ್ಯಂತ ಹರಡುತ್ತಿದ್ದ ಸಾಂಕ್ರಾಮಿಕ ರೋಗಗಳು. ಹಿಂದಿನ ದಿನಗಳಲ್ಲಿ ಪ್ಲೇಗ್ ರೋಗವು ಬಹಳ ಸಾವುಗಳಿಗೆ ಕಾರಣವಾಗಿತ್ತು ಮತ್ತು ಇದರಿಂದ ಪ್ರಮುಖ ಸಾಂಸ್ಕೃತಿಕ ಬದಲಾವಣೆಗಳಿಗೆ ಕಾರಣವಾಗಿತ್ತು. ಪ್ಲೇಗ್ನಿಂದ ಆದ ಪರಿಣಾಮಗಳಲ್ಲಿ ಜಸ್ಟಿನಿಯನ್ನ ಪ್ಲೇಗ್ (೫೪೧-೫೪೨) ದೊಡ್ಡದು. ಅನಂತರ ೧೩೪೦ರಲ್ಲಿ ಬ್ಲ್ಯಾಕ್ ಡೆತ್ ಮುಖಾಂತರ ಎರಡನೇ ಸಾಂಕ್ರಾಮಿಕ ಪ್ಲೇಗ್ ಮುಂದುವರೆಯಿತ್ತು. ೧೮೫೫ರಲ್ಲಿ ಮುರನೇ ಸಾಂಕ್ರಾಮಿಕ ಪ್ಲೇಗ್ ಶುರುವಾಯಿತ್ತು ಆನಂತರ ೧೯೫೯ರಲ್ಲಿ ಪ್ಲೇಗ್ ರೋಗ ಕೊನೆಗಾಣ ತೊಡಗಿತ್ತು. ಸಾಮಾನ್ಯವಾಗಿ ಪ್ಲೇಗ್ ರೋಗವು ಗಾಳಿಯ ಮೂಲಕ ಮತ್ತು ನೇರ ಸಂಪರ್ಕದಿಂದ ಹರಡುತ್ತದೆ. ವಿರಳವಾಗಿ ಕಲುಷಿತಗೊಂಡ ಮತ್ತು ಸರಿಯಾಗಿ ತಯಾರಿಸದ ಆಹಾರದಿಂದ ಹರಡುವ ಸಾಧ್ಯತೆಗಳು ಇದೆ.ಪ್ಲೇಗ್ ರೋಗದ ಲಕ್ಷಣಗಳು ವ್ಯಕ್ತಿಯ ಸೋಂಕಿನ ಕೇಂದ್ರೀಕೃತ ಪ್ರದೇಶಗಳನ್ನು ಅವಲಂಬಿಸಿರುತ್ತದೆ. ಈ ರೋಗವು ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ದುಗ್ಧರಸ ಗ್ರಂಥಿಗಳಲ್ಲಿ, ರಕ್ತ ಕಣಗಳಲ್ಲಿ ಮತ್ತು ಶ್ವಾಸಕೋಶಗಳಲ್ಲಿ ಕಾಣಿಸಿಕೊಳ್ಳುತ್ತದೆ.[1][2]