ಫ್ರಾಂಕ್ಫರ್ಟ್
From Wikipedia, the free encyclopedia
ಫ್ರಾಂಕ್ಫರ್ಟ್ ಆಮ್ ಮೇನ್ German pronunciation: [ˈfʁaŋkfʊɐt am ˈmaɪn] ( listen)English: /ˈfræŋkfərt/ ಸಾಮಾನ್ಯವಾಗಿ ಫ್ರಾಂಕ್ಫರ್ಟ್ ಎಂದು ಸರಳವಾಗಿ ಹೆಸರಾಗಿದೆ. ಜರ್ಮನಿಯ ರಾಜ್ಯ ಹೆಸ್ನ ಅತೀ ದೊಡ್ಡ ನಗರವಾಗಿದ್ದು, ಜರ್ಮನಿಯ ಐದನೇ ಅತೀ ದೊಡ್ಡ ನಗರವಾಗಿದ್ದು, 2009ರಲ್ಲಿ 667 ,330 ಜನಸಂಖ್ಯೆ ಹೊಂದಿತ್ತು. ನಗರ ಪ್ರದೇಶವು 2010ರಲ್ಲಿ 2,295,000ಅಂದಾಜು ಜನಸಂಖ್ಯೆಯನ್ನು ಹೊಂದಿದೆ.[2] ನಗರವು ದೊಡ್ಡ ಫ್ರಾಂಕ್ಫರ್ಟ್/ರೈನ್-ಮೇನ್ ಮೆಟ್ರೋಪಾಲಿಟನ್ ರೀಜನ್ ಮಧ್ಯದಲ್ಲಿದ್ದು,5,600,000 ಜನಸಂಖ್ಯೆಯನ್ನು ಹೊಂದಿದೆ[3] ಹಾಗೂ ಜರ್ಮನಿಯ ಎರಡನೇ ಅತೀ ದೊಡ್ಡ ಮಹಾನಗರ ಪ್ರದೇಶವಾಗಿದೆ.
Frankfurt am Main | ||
The skyline of Frankfurt am Main | ||
ನಿರ್ದೇಶಾಂಕಗಳು | 50°6′37″N 8°40′56″E | |
Administration | ||
Country | ಜರ್ಮನಿ | |
ರಾಜ್ಯ | Hesse | |
Admin. region | Darmstadt | |
District | Urban district | |
City subdivisions | 16 districts (Ortsbezirke) 46 boroughs (Stadtteile) | |
Lord Mayor | Petra Roth (CDU) | |
Governing parties | CDU / Greens | |
Basic statistics | ||
Area | 248.31 km2 (95.87 sq mi) | |
Elevation | ೧೧೨ m (367 ft) | |
Population | ೬,೮೭,೭೭೫ (೩೧ ಡಿಸೆಂಬರ್ ೨೦೧೨)[1] | |
- Density | ೨,೭೭೦ /km2 (೭,೧೭೪ /sq mi) | |
- Urban | ೨೨,೯೫,೦೦೦ | |
- Metro | ೫೬,೦೦,೦೦೦ <div >Please give "pop_metro_date" in YYYY-MM-DD format , e. g. 2005-12-31 | |
Founded | 1st century | |
Other information | ||
Time zone | CET/CEST (UTC+1/+2) | |
Licence plate | F | |
Postal codes | 60001-60599, 65901-65936 | |
Area codes | 069, 06109, 06101 | |
Website | www.frankfurt.de |
ಇಂಗ್ಲೀಷ್ನಲ್ಲಿ ಈ ನಗರದ ಹೆಸರು "ಫ್ರಾಂಕ್ಫರ್ಟ್ ಆನ್ ದಿ ಮೇನ್" ಎಂದು ಅನುವಾದಿಸಲಾಗುತ್ತದೆ(ಇಂಗ್ಲೀಷ್ ಮೈನ್ ಅಥವಾ ಜರ್ಮನ್ ಮೇನ್ ಎಂದು ಉಚ್ಚಾರ). ನಗರವು ಮೇನ್ ನದಿಯಲ್ಲಿನ ಪ್ರಾಚೀನ ಹಾಯ್ಗಡದಲ್ಲಿದ್ದು,ಅದಕ್ಕೆ ಜರ್ಮನಿ ಪದದಲ್ಲಿ "ಫರ್ಟ್" ಎನ್ನಲಾಗುತ್ತದೆ. ಪೂರ್ವದ ಫ್ರಾಂಕೊನಿಕಾದ ಭಾಗವಾಗಿದ್ದು,ಅದರ ನಿವಾಸಿಗಳು ಪೂರ್ವದ ಫ್ರಾಂಕ್ಸ್ಗಳು. ಹೀಗೆ ನಗರವು ಪರಂಪರಾಗತವಾಗಿ ಫೋರ್ಡ್ ಆಫ್ ದಿ ಫ್ರಾಂಕ್ಸ್ ಎಂಬ ಹೆಸರು ಪಡೆದಿದೆ.[4]
ಮೇನ್ ನದಿಯ ದಡದಲ್ಲಿ ಸ್ಥಾಪಿತವಾಗಿರುವ ಫ್ರಾಂಕ್ಫರ್ಟ್ ಜರ್ಮನಿಯ ಆರ್ಥಿಕ ಮತ್ತು ಸಾರಿಗೆ ಕೇಂದ್ರವಾಗಿದ್ದು, ಯುರೋಪ್ ಖಂಡದಲ್ಲಿ ದೊಡ್ಡ ಆರ್ಥಿಕ ಕೇಂದ್ರವಾಗಿದೆ. ಇದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್, ಜರ್ಮನ್ ಫೆಡರಲ್ ಬ್ಯಾಂಕ್, ಫ್ರಾಂಕ್ಫರ್ಟ್ ಷೇರುಪೇಟೆ ಮತ್ತು ಫ್ರಾಂಕ್ಫರ್ಟ್ ವ್ಯಾಪಾರ ಮೇಳದ ಜತೆಗೆ ಅನೇಕ ದೊಡ್ಡ ವಾಣಿಜ್ಯ ಬ್ಯಾಂಕುಗಳಿಗೆ ಸ್ಥಳವಾಗಿದೆ. ಫ್ರಾಂಕ್ಫರ್ಟ್ ವಿಮಾನನಿಲ್ದಾಣವು ಅತ್ಯಂತ ಚಟುವಟಿಕೆಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ ಒಂದಾಗಿದೆ. ಫ್ರಾಂಕ್ಫರ್ಟ್ ಸೆಂಟ್ರಲ್ ಸ್ಟೇಷನ್ ಯುರೋಪ್ನ ಅತೀ ದೊಡ್ಡ ಟರ್ಮಿನಲ್(ಕೊನೆಯ) ನಿಲ್ದಾಣಗಳಲ್ಲಿ ಒಂದಾಗಿದೆ. ಫ್ರಾಂಕ್ಫರ್ಟ್ ಕ್ರ್ಯೂಜ್ ಆಟೊಬಾನ್ ಇಂಟರ್ಚೇಂಜ್ (ಎರಡು ಅಥವಾ ಹೆಚ್ಚು ಹೆದ್ದಾರಿಗಳು ಕೂಡುವ ಸ್ಥಳ)ಕಾಂಟಿನೆಂಟಲ್ ಯುರೋಪ್ನಲ್ಲಿ ಅತೀ ಹೆಚ್ಚಾಗಿ ಬಳಸುವ ಇಂಟರ್ಚೇಂಜ್ ಎನಿಸಿದೆ. ಫ್ರಾಂಕ್ಫರ್ಟ್ ಹತ್ತು ಆಲ್ಫಾ ವಿಶ್ವ ನಗರಗಳ ಪೈಕಿ ಪಟ್ಟಿ ಮಾಡಲಾದ ಮೊದಲ ಜರ್ಮನ್ ನಗರವಾಗಿದೆ.[5] ಫ್ರಾಂಕ್ಫರ್ಟ್ ಜರ್ಮನಿಯ ಮುಂಚಿನ ಅಮೆರಿಕ ಸ್ವಾಧೀನದ ವಲಯದಲ್ಲಿದ್ದು, ಮುಂಚೆ ಜರ್ಮನಿಯಲ್ಲಿ U.S.ಸೇನೆಗೆ ಮುಖ್ಯಕಾರ್ಯಾಲಯಗಳ ನಗರವಾಗಿತ್ತು.
ಫ್ರಾಂಕ್ಫರ್ಟ್ನ್ನು ಲುಫ್ಬರಾ ವಿಶ್ವವಿದ್ಯಾಲಯ ಸಮೂಹದ 2008ನೇ ದಾಖಲೆಯಲ್ಲಿ ಪಟ್ಟಿಮಾಡಿರುವಂತೆ ಆಲ್ಫಾ ವರ್ಲ್ಡ್ ಸಿಟಿ ಎಂದು ಪರಿಗಣಿಸಲಾಗಿದೆ. ಫಾರಿನ್ ಪಾಲಿಸಿ ಯ 2008ನೇ ಗ್ಲೋಬಲ್ ಸಿಟೀಸ್ ಇಂಡೆಕ್ಸ್[6](ಜಾಗತಿಕ ನಗರಗಳ ಸೂಚ್ಯಂಕ)ದಲ್ಲಿ ಜಾಗತಿಕ ನಗರಗಳ ಪೈಕಿ 21ನೇ ಶ್ರೇಯಾಂಕ ಗಳಿಸಿದೆ ಹಾಗೂ ವಾಣಿಜ್ಯ, ಆರ್ಥಿಕ, ಸಾಂಸ್ಕೃತಿಕ, ಮನರಂಜನೆ, ಶಿಕ್ಷಣ ಮತ್ತು ಪ್ರವಾಸೋದ್ಯಮದ ಅಂತಾರಾಷ್ಟ್ರೀಯ ಕೇಂದ್ರವಾಗಿದೆ. ಮರ್ಸರ್ ಜೀವನ ವೆಚ್ಚ ಸಮೀಕ್ಷೆ ಪ್ರಕಾರ,ಫ್ರಾಂಕ್ಫರ್ಟ್ ಜರ್ಮನಿಯ ಎರಡನೇ ಅತೀ ದೊಡ್ಡ ದುಬಾರಿ ನಗರವಾಗಿದ್ದು, ವಿಶ್ವದಲ್ಲೇ 48ನೇ ಅತೀ ಹೆಚ್ಚು ದುಬಾರಿ ನಗರವಾಗಿದೆ.[7] ಮರ್ಸರ್ ಹ್ಯೂಮನ್ ರಿಸೋರ್ಸ್ ಕನ್ಸಲ್ಟಿಂಗ್ ಪ್ರಕಾರ, ಫ್ರಾಂಕ್ಫರ್ಟ್ ಅಗ್ರ 10 ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳ ಪೈಕಿ ಸ್ಥಾನ ಪಡೆದಿದೆ.[8]
ಇಂಗ್ಲೀಷ್ ಭಾಷಿಕರಲ್ಲಿ ನಗರವು ಸರಳವಾಗಿ "ಫ್ರಾಂಕ್ಫರ್ಟ್"ಎಂದು ಸಾಮಾನ್ಯವಾಗಿ ಹೆಸರು ಪಡೆದಿದೆ. ಆದರೂ ಜರ್ಮನರು ಬ್ರಾಂಡನ್ಬರ್ಗ್ ನಗರದ ಇನ್ನೊಂದು(ಗಮನಾರ್ಹವಾಗಿ ಚಿಕ್ಕದಾದ)ಫ್ರಾಂಕ್ಫರ್ಟ್(ಓಡರ್)ನಡುವೆ ಭೇದ ಗುರುತಿಸುವ ಅಗತ್ಯಕಂಡುಬಂದಾಗ ಆಗಾಗ್ಗೆ ಪೂರ್ಣ ಹೆಸರಿನಿಂದ ಕರೆಯುತ್ತಾರೆ.