ಬೀಗಲ್
From Wikipedia, the free encyclopedia
ಬೀಗಲ್ ಎನ್ನುವುದು ಸಣ್ಣ ಮತ್ತು ಮಧ್ಯಮ ಗಾತ್ರದ ನಾಯಿಯ ಒಂದು ತಳಿ. ಇದು ಹೌಂಡ್ ಗುಂಪಿನ ಪ್ರಾಣಿಯಾದರೂ ಫಾಕ್ಸ್ ಹೌಂಡ್(ನರಿಬೇಟೆನಾಯಿ)ಗೆ ಸಮೀಪದ ಸಾದೃಶ್ಯ ಹೊಂದಿದೆ. ಆದರೆ ಇದಕ್ಕೆ ಸಣ್ಣ, ಕೊಂಚ ಉದ್ದ ಕಾಲುಗಳು ಮತ್ತು ಮೃದುವಾದ, ಸಣ್ಣ ಆಕಾರದ ಕಿವಿಗಳಿರುತ್ತವೆ (ಹೌಂಡ್ ವಾಸನೆ ಹಿಡಿದು ಬೇಟೆಯಾಡುವ ನಾಯಿ ಜಾತಿ). ಬೀಗಲ್ಸ್ಗಳು ವಾಸನೆ ಹಿಡಿದು ಬೇಟೆಯಾಡುವ ನಾಯಿಗಳು. ಪ್ರಾಥಮಿಕವಾಗಿ ಇವುಗಳನ್ನು ಕುಂದಿಲಿ, ಮೊಲ ಮತ್ತಿತರ ಪ್ರಾಣಿಗಳನ್ನು ಹಿಡಿಯಲು ಮತ್ತು ಕ್ರೀಡೆಗಾಗಿ ಬಳಸಲಾಗುತ್ತದೆ. ಅತ್ಯದ್ಭುತ ವಾಸನಾ ಸಾಮರ್ಥ್ಯ ಇರುವುದರಿಂದ ಇವುಗಳನ್ನು ನಿಷೇಧಿತ ಕೃಷಿ ಉತ್ಪನ್ನಗಳ ಆಮದುಗಳನ್ನು ಮತ್ತು ಆಹಾರ ಸಾಮಾಗ್ರಿಗಳಲ್ಲಿಸೋಂಕು ಹರಡುವುದನ್ನು ಪತ್ತೆಹಚ್ಚುವ ಪತ್ತೆದಾರಿ ನಾಯಿಗಳಾಗಿ ವಿಶ್ವಾದ್ಯಾಂತ ಬಳಸಲಾಗುತ್ತದೆ. ಅವು ಜನಪ್ರಿಯ ಸಾಕುಪ್ರಾಣಿಗಳಾಗಿವೆ ಏಕೆಂದರೆ ಅವುಗಳ ಆಕರ್ಷಕ ಆಕಾರ, ಸುಲಭವಾಗಿ ಪಳಗಿಸಬಲ್ಲ ಮತ್ತು ಅನುವಂಶೀಯವಾಗಿ ಯಾವುದೇ ಆರೋಗ್ಯದ ಸಮಸ್ಯೆಗಳಿಗೆ ಅವು ಈಡಾಗುವುದಿಲ್ಲ. ಈ ಗುಣಲಕ್ಷಣಗಳಿಂದಾಗಿ ಇದನ್ನು ಇತರ ಪ್ರಾಣಿಗಳ ಪ್ರಯೋಗಕ್ಕಾಗಿಯೂ ಬಳಸಲಾಗುತ್ತದೆ.
Other names | ಇಂಗ್ಲೀಷ್ ಬೀಗಲ್ | ||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
| |||||||||||||||||||||||||
| |||||||||||||||||||||||||
Dog (Canis lupus familiaris) |
ಬೀಗಲ್ ಮಾದರಿಯ ನಾಯಿಗಳು 2,000 ವರ್ಷಗಳ ಹಿಂದೆಯೇ ಪ್ರಚಲಿತವಿದ್ದವು; ಇದರ ಆಧುನಿಕ ತಳಿಯನ್ನು 1830 ರಲ್ಲಿ ಗ್ರೇಟ್ ಬ್ರಿಟನ್ ನಲ್ಲಿ ಅಭಿವೃದ್ಧಿಪಡಿಸಲಾಯಿತು. ಇದರ ಅಭಿವೃದ್ಧಿಗೆ ವಿಭಿನ್ನ ಜಾತಿಗಳನ್ನು ಸಂಕರಿಸಲಾಯಿತು, ಉದಾಹರಣೆಗಾಗಿ, ಟ್ಯಾಲ್ಬೊಟ್ ಹೌಂಡ್, ದಿ ನಾರ್ಥ್ ಕಂಟ್ರಿ ಬೀಗಲ್, ದಿ ಸದರ್ನ್ ಹೌಂಡ್ ಮತ್ತು ಸಂಭವನೀಯವಾಗಿ ಹ್ಯಾರಿಯರ್ ಜಾತಿಯನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಲಾಗಿದೆ.
ಬೀಗಲ್ಗಳನ್ನು ಜನಪ್ರಿಯ ಸಂಸ್ಕೃತಿಗಳಲ್ಲಿ ಅದೂ ಎಲೆಜೆಬೆತ್ ಕಾಲದಲ್ಲಿ ಸಾಹಿತ್ಯ ಮತ್ತು ವರ್ಣ ಕಲೆಗಾರಿಕೆಯಲ್ಲಿ ಬಳಸಿಕೊಳ್ಳಲಾಯಿತು. ಇತ್ತೀಚಿಗೆಯಂತೂ ಚಲನಚಿತ್ರ, ಟೆಲಿವಿಸನ್ ಮತ್ತು ಕಾಮಿಕ್ ಪುಸ್ತಕಗಳಲ್ಲಿ ಬಳಸಲಾಗುತ್ತದೆ. ಪೀನಟ್ಸ್ ಕಾಮಿಕ್ ಪಟ್ಟಿಯ ಸ್ನೂಪಿ ಪಾತ್ರವು "ವಿಶ್ವದ ಅತ್ಯಂತ ಪ್ರಸಿದ್ದ" ಬೀಗಲ್ ಆಗಿ ಮಾರ್ಪಟ್ಟಿದೆ.[1]