ಬೆಬಿಂಕಾ
From Wikipedia, the free encyclopedia
ಬೆಬಿಂಕಾ ಒಂದು ಬಗೆಯ ಪುಡಿಂಗ್ ಆಗಿದೆ ಮತ್ತು ಒಂದು ಸಾಂಪ್ರದಾಯಿಕ ಇಂಡೊ-ಪೋರ್ಚುಗೀಸ್ ಡಿಜ಼ರ್ಟ್ ಆಗಿದೆ. ಸಾಂಪ್ರದಾಯಿಕ ಬೆಬಿಂಕಾ ಆರು ಪದರಗಳನ್ನು ಹೊಂದಿರುತ್ತದೆ. ಘಟಕಾಂಶಗಳಲ್ಲಿ ಮೈದಾ ಹಿಟ್ಟು, ಸಕ್ಕರೆ, ತುಪ್ಪ, ಮೊಟ್ಟೆಯ ಹಳದಿ ಭಾಗ ಮತ್ತು ತೆಂಗಿನ ಹಾಲು ಸೇರಿವೆ.[1][2]
ಇದು ಗೋವಾದಲ್ಲಿ ಒಂದು ಸಾಂಪ್ರದಾಯಿಕ ಸಿಹಿ ತಿನಿಸಾಗಿದೆ, ಮತ್ತು ವಿಶಿಷ್ಟವಾಗಿ ಕ್ರಿಸ್ಮಸ್ ಹಬ್ಬದಲ್ಲಿ ಜನಪ್ರಿಯವಾಗಿದೆ.[3] ಇದು ಸುಲಭವಾಗಿ ಲಭ್ಯವಿದ್ದು ಒಯ್ಯಲು ಮತ್ತು ದೀರ್ಘ ಸಮಯದವರೆಗೆ ಸಂರಕ್ಷಿಸಿಡಲು ಸುಲಭವಾಗಿದೆ ಅಥವಾ ತಾಜಾ ಆಗಿ ತಿನ್ನಲ್ಪಡಬಹುದು.
ಬೆಬಿಂಕಾವನ್ನು ವಾಯವ್ಯ ಪೆಸಿಫಿಕ್ ಮಹಾಸಾಗರದಲ್ಲಿನ ಒಂದು ಚಂಡಮಾರುತದ ಹೆಸರಾಗಿ ಕೂಡ ಅಳವಡಿಸಿಕೊಳ್ಳಲಾಯಿತು.[4] ಇದನ್ನು ಪೋರ್ಚುಗಲ್ ಮತ್ತು ಮೊಜಾಂಬಿಕ್ನಲ್ಲಿ ಕೂಡ ತಯಾರಿಸಲಾಗುತ್ತದೆ. ಆದರೆ ಸಾಂಪ್ರದಾಯಿಕವಾಗಿ ಇದು ಗೋವಾದ ಪದರಗಳಿರುವ ಕೇಕ ಆಗಿದೆ.