ಬೈರುತ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Beirut
بيروت Bayrūt Beyrouth (French) | |
---|---|
Country | ಲೆಬನನ್ |
Governorate | Beirut, Capital City |
Government | |
• Mayor | Abdel Mounim Ariss |
Area | |
• City | ೮೫ km೨ (೩೨.೮೨ sq mi) |
Population (2009) | |
• City | ೨ ೧೦೦ ೨೩೪ |
• Metro | ~ ೩ ೦೦೦ ೦೦೦ |
Time zone | +2 |
• Summer (DST) | +3 |
Website | City of Beirut |
ಬೈರುತ್ ಅರೇಬಿಕ್: بيروت, 2007 ರ ಪ್ರಕಾರ ಸುಮಾರು 1 ಮಿಲಿಯನ್ ದಿಂದ 2 ಮಿಲಿಯನ್ ಗೂ ಮಿಗಿಲಾಗಿ ಜನಸಾಂದ್ರತೆಯ ವ್ಯಾಪ್ತಿಯುಳ್ಳ ಬೈರುತ್ ಲೆಬನಾನ್ ನ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರವಾಗಿದೆ. ಮೆಡಿಟರೇನಿಯನ್ ಸಮುದ್ರದ ಜೊತೆ ಬೈರುತ್ ನ ಕರಾವಳಿ ಪ್ರದೇಶವು ಕೇಂದ್ರ ಬಿಂದುವಾಗಿ ಒಂದು ಪರ್ಯಾಯ ದ್ವೀಪದಲ್ಲಿ ನೆಲೆಸಿರುವ, ಅದು ರಾಷ್ಟ್ರದ ಅತ್ಯಂತ ದೊಡ್ಡ ಮತ್ತು ಪ್ರಮುಖ ಬಂದರಾಗಿ ಸೇವೆ ಸಲ್ಲಿಸುತ್ತಿದೆ ಹಾಗೂ ನಗರ ಮತ್ತು ಅದರ ಉಪ ನಗರಗಳನ್ನು ಒಳಗೊಂಡಿರುವ ಬೈರುತ್ ಮೆಟ್ರೋಪಾಲಿಟನ್ ಪ್ರದೇಶವನ್ನೂ ಸಹ ಉಂಟುಮಾಡುತ್ತದೆ. ಕ್ರಿ.ಪೂ. 15 ನೇ ಶತಮಾನದಷ್ಟು ಹಳೆಯದಾದ ಪುರಾತನ ಈಜಿಪ್ಟ್ ನ ಟೆಲ್ ಎಲ್ ಅಮರ್ನ ಸಾಹಿತ್ಯದಲ್ಲಿ ಕಂಡು ಬರುವ ಈ ರಾಜಧಾನಿಯ ಮೊದಲ ಪ್ರಸ್ತಾವನೆಯುನ್ನು ಮಾಡಲಾಗಿದೆ ಹಾಗೂ ಈ ನಗರವು ಆಗಿನಿಂದಲೂ ನಿರಂತರವಾಗಿ ಜನವಸತಿಯನ್ನು ಹೊಂದುತ್ತಲೇ ಇದೆ.
ಬೈರುತ್ ಲೆಬನಾನಿನ ಸರ್ಕಾರದ ಕೇಂದ್ರಸ್ಥಾನವನ್ನು ಹೊಂದಿದೆ, ಹಾಗೂ ಸಾಮುದಾಯಿಕ ವ್ಯವಹಾರ ನಿರ್ವಹಣಾ ಮಂಡಳಿ ಮತ್ತು ಬ್ಯಾಂಕುಗಳ ನೆಲೆಯಾದ ಹಮ್ರ, ವೆರ್ಡುನ್, ಮತ್ತು ಅಶ್ರಫಿಯ ಗಳಿಂದ ನಗರದ ಕೇಂದ್ರವಾಗಿ ಲೆಬನಾನಿನ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ. ತನ್ನ ವರ್ತಮಾನ ಪತ್ರಿಕೆಗಳು, ರಂಗಭೂಮಿಗಳು, ಸಾಂಸ್ಕೃತಿಕ ಚಟುವಟಿಕೆಗಳು, ಮತ್ತು ರಾತ್ರಿ ಜೀವನಕ್ಕೆ ಪ್ರಸಿದ್ಧವಾದ ಈ ನಗರವು ಆ ಪ್ರದೇಶದ ಸಾಂಸ್ಕೃತಿಕ ಜೀವನದ ಒಂದು ಕೇಂದ್ರ ಬಿಂದುವಾಗಿದೆ. ಲೆಬನಾನಿನ ವಿಧ್ವಂಸಕ ಅಂತರಿಕ ಯುದ್ಧದ ನಂತರ, ಬೈರುತ್ ಪ್ರಮುಖ ಪುನರ್ರವಿನ್ಯಾಸಕ್ಕೆ ಒಳಗಾಯಿತು,[1][2][3] ಹಾಗೂ ಪುನರ್ರಚನೆಯ ಐತಿಹಾಸಿಕ ನಗರ ಕೇಂದ್ರ, ಕಡಲ ತೀರ, ಹೋಟೆಲುಗಳು, ಮತ್ತು ರಾತ್ರಿ ಜೀವನದ ಜಿಲ್ಲೆಗಳು ಅದು ಮತ್ತೊಮ್ಮೆ ಒಂದು ಪ್ರವಾಸಿಗರ ಆಕರ್ಶಣೆಯಾಗುವಂತೆ ಸಹಾಯ ಮಾಡಿವೆ. ದಿ ನ್ಯೂಯಾರ್ಕ್ ಟೈಮ್ಸ್ ನಿಂದ ಬೈರುತ್ 2009 ರಲ್ಲಿ ಪ್ರವಾಸ ಹೋಗುವವರಲ್ಲಿ ಅಗ್ರ ಸ್ಥಾನಗಳಿಸಿದೆ.[4] 2009 ರಲ್ಲಿ ಲೋನ್ಲಿ ಪ್ಲಾನೆಟ್ ನಿಂದ ವಿಶ್ವದಲ್ಲೇ ಅತ್ಯಂತ ಚೈತನ್ಯಪೂರ್ಣ ಹತ್ತು ನಗರಗಳಲ್ಲಿ ಇದೂ ಒಂದೆಂದು ಸಹ ಪಟ್ಟಿಮಾಡಲ್ಪಟ್ಟಿದೆ.[5]