ಬೋಹೀಮಿಯನಿಸಂ (ಸ್ವೇಚ್ಛಾಚಾರ ವರ್ತನೆ)
From Wikipedia, the free encyclopedia
ಟೆಂಪ್ಲೇಟು:Expert-subject-multiple
ಬೋಹೀಮಿಯನಿಸಂ ಎಂಬುದು ಸ್ವತಂತ್ರವಾದ (ಸಂಪ್ರದಾಯಬದ್ಧವಲ್ಲದ)ಜೀವನಶೈಲಿ ಪದ್ಧತಿಯಾಗಿದೆ. ಇದು ಕೆಲವು ಶಾಶ್ವತ ಸಂಬಂಧಗಳೊಂದಿಗೆ ಸಂಗೀತಮಯ,ಕಲಾತ್ಮಕ ಅಥವಾ ಸಾಹಿತ್ಯಿಕ್ಕೆ ಮನರಂಜನೆಗಳಲ್ಲಿ ತೊಡಗಿರುವ ಸಮಾನ ಮನೋಧರ್ಮದ ಜನರ ಸಮಾರಂಭ ಕೂಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಪ್ರಕರಣದಲ್ಲಿ ಬೋಹೀಮಿಯನ್ ಗಳು ಅಲೆಮಾರಿಗಳಾಗಿರಬಹುದು, ಸಾಹಸಿಗರಾಗಿರಬಹುದು ಅಥವಾ ಪೋಲಿಗಳಾಗಿರಬಹುದು.
ಬೋಹೀಮಿಯನ್ ಪದದ ಈ ಬಳಕೆಯು, ಯುರೋಪಿನ ಅನೇಕ ಪ್ರಧಾನ ನಗರಗಳಲ್ಲಿರುವ ಅಪ್ರಧಾನವಾದ ಮತ್ತು ಬಡ ಕಲಾವಿದರು, ಬರಹಗಾರರು, ಪತ್ರಿಕೋದ್ಯಮಿಗಳು, ಸಂಗೀತಗಾರರು ಮತ್ತು ನಟರ ಸಂಪ್ರದಾಯಬದ್ಧವಲ್ಲದ ಜೀವನ ಶೈಲಿಯನ್ನು ವಿವರಿಸಲು ಮೊಟ್ಟ ಮೊದಲನೆಯ ಬಾರಿಗೆ ಆಂಗ್ಲ ಭಾಷೆಯಲ್ಲಿ 19 ನೇ ಶತಮಾನದಲ್ಲಿ[1] ಕಾಣಿಸಿಕೊಂಡಿತು. ಬೋಹೀಮಿಯಯನ್ ಗಳು, ಸಂಪ್ರದಾಯಬದ್ಧವಲ್ಲದ ಅಥವಾ ಕಾನೂನುಬಾಹಿರವಾದ, ರೂಢ ವ್ಯವಸ್ಥೆಯಲ್ಲದ ರಾಜಕೀಯ ಅಥವಾ ಸಾಮಾಜಿಕ ದೃಷ್ಟಿಕೋನದೊಂದಿಗೆ ಸಂಬಂಧಿಸಿರುತ್ತಾರೆ. ಇದನ್ನು ಅವರು ಹೆಚ್ಚಾಗಿ ಮುಕ್ತ ಪ್ರೇಮ, ಮಿತವ್ಯಯ, ಮತ್ತು/ಅಥವಾ ಸರಳ ಜೀವನದ ಮೂಲಕ ವ್ಯಕ್ತಪಡಿಸುತ್ತಾರೆ.
ಬೋಹೀಮಿಯನಿಸಂ ಎಂಬ ಪದವು ಫ್ರಾನ್ಸ್ ನಲ್ಲಿ 19 ನೇ ಶತಮಾನದ ಪೂರ್ವಾರ್ಧದಲ್ಲಿ ಬೆಳಕಿಗೆ ಬಂದಿತು. ಇಲ್ಲಿನ ಕಲಾವಿದರು ಮತ್ತು ಸೃಷ್ಟಿಕರ್ತರು ಕಡಿಮೆ ಬಾಡಿಗೆಯ, ಕೆಳವರ್ಗದ, ರೋಮನಿ ಜನರ ಪಕ್ಕದಲ್ಲಿ ಬದುಕುವುದರ ಬಗ್ಗೆ ಗಮನಹರಿಸಲು ಪ್ರಾರಂಭಿಸಿದಾಗಿನಿಂದ ಈ ಪದ ಹುಟ್ಟಿಕೊಂಡಿತು. ಬೋಹೀಮಿಯನ್ ಎಂಬುದು ಫ್ರಾನ್ಸ್ ನ ರೋಮನಿ ಜನರಿಗೆ ಬಳಸುವಂತಹ ಸಾಮಾನ್ಯ ಪದವಾಗಿದೆ. ಇವರು ಬೋಹೆಮಿಯಾದ (ಮಾರ್ಗದ) ಮೂಲಕ ಪಶ್ಚಿಮ ಯುರೋಪ್ ಅನ್ನು ತಲುಪಿದವರು.[2] xdw