ಬ್ರೂಸ್ ಲೀ
ಅಮೆರಿಕದ ಚಲನಚಿತ್ರ ನಟ (1940–1973) / From Wikipedia, the free encyclopedia
ಬ್ರೂಸ್ ಲೀಯವರು (ಜುನ್ ಫಾನ್, 李振藩, 李小龍; ಪಿನ್ಯಿನ್: ಲಿ ಝೆನ್ಫಾನ್, ಲಿ ಕ್ಸಿಯೊಲಾಂಗ್; 27 ನವೆಂಬರ್ 1940 – 20 ಜುಲೈ 1973) ಅಮೆರಿಕಾದಲ್ಲಿ ಜನಿಸಿದ ಚೀನಾದ ಹಾಂಗ್ ಕಾಂಗ್ನಲ್ಲಿರುವ ನಟ, ಸಮರ ಕಲಾ ನಿಪುಣ, ತತ್ವಜ್ಞಾನಿ, ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ವಿಂಗ್ ಚುನ್ ವೃತ್ತಿಗಾರ ಮತ್ತು ಜೀತ್ ಕುನೆ ಡೊ ಎಂಬ ಕಲ್ಪನೆಯ ಸ್ಥಾಪಕರಾಗಿದ್ದಾರೆ. ಹಲವರು ಅವರನ್ನು 20ನೇ ಶತಮಾನದ ಹೆಚ್ಚು ವರ್ಚಸ್ಸುಳ್ಳ ಸಮರ ಕಲಾ ನಿಪುಣ ಮತ್ತು ಸಾಂಸ್ಕೃತಿಕ ಮುತ್ಸದ್ಧಿ ಎಂದೇ ಪರಿಗಣಿಸಿದ್ದಾರೆ.[2] ನಟ ಬ್ರ್ಯಾಂಡನ್ ಲೀ ಮತ್ತು ನಟಿ ಶಾನನ್ ಲೀ ಇವರ ಮಕ್ಕಳು. ಸಂಗೀತಗಾರರು ಮತ್ತು ಹಾಂಗ್ ಕಾಂಗ್ನ ಥಂಡರ್ಬರ್ಡ್ಸ್ ಎನ್ನುವ ಜನಪ್ರಿಯ ಸಂಗೀತ ತಂಡದ ಸದಸ್ಯರಾದ ರಾಬರ್ಟ್ ಇವರ ತಮ್ಮ.[3]
Bruce Lee | ||||||||||
---|---|---|---|---|---|---|---|---|---|---|
Bruce Lee | ||||||||||
Chinese name | 李小龍 (Traditional) | |||||||||
Chinese name | 李小龙 (Simplified) | |||||||||
Pinyin | Lǐ Xiǎolóng (Mandarin) | |||||||||
Jyutping | lei5 siu2 lung4 (Cantonese) | |||||||||
Birth name | Lee Jun-fan 李振藩 (Traditional) 李振藩 (Simplified) Lǐ Zhènfān (Mandarin) lei5 zan3 faan4 (Cantonese) | |||||||||
Ancestry | Shunde, Guangdong, China | |||||||||
Origin | Hong Kong | |||||||||
Born | (೧೯೪೦-೧೧-೨೭)೨೭ ನವೆಂಬರ್ ೧೯೪೦ San Francisco, California, USA | |||||||||
Died | 20 July 1973(1973-07-20) (aged 32) Hong Kong | |||||||||
Years active | 1941–1973 | |||||||||
Spouse(s) | Linda Emery (born 1945) (1964-1973) | |||||||||
Children | Brandon Lee (1965–1993) Shannon Lee (born 1969) | |||||||||
Official Website | Bruce Lee Foundation The Official Website of Bruce Lee | |||||||||
|
ಲೀಯವರು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರ್ಯಾನ್ಸಿಸ್ಕೊದಲ್ಲಿ ಹುಟ್ಟಿ, ಹದಿಹರೆಯದವರೆಗೆ ಹಾಂಗ್ ಕಾಂಗ್ನಲ್ಲಿ ಬೆಳೆದರು. ಅವರ ನಿರ್ಮಾಣದ ಹಾಂಗ್ ಕಾಂಗ್ ಮತ್ತು ಹಾಲಿವುಡ್ ಚಿತ್ರಗಳು ಸಾಂಪ್ರದಾಯಿಕ ಹಾಂಗ್ ಕಾಂಗ್ ಸಮರ ಕಲೆಗಳ ಚಿತ್ರವನ್ನು ಜನಪ್ರಿಯತೆ ಮತ್ತು ಪ್ರಶಂಸೆಗಳ ಹೊಸ ಮಟ್ಟಕ್ಕೇರಿಸಿದವು ಮತ್ತು ಈ ಚಿತ್ರಗಳಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಚೀನಾದ ಸಮರ ಕಲೆಗಳ ಕುರಿತಾಗಿರುವ ಆಸಕ್ತಿಯಲ್ಲಿ ಎರಡನೇ ಭಾರಿ ಏರಿಕೆ ಕಂಡಿತು. ಅವರ ಚಿತ್ರಗಳ ನಿರ್ದೇಶನ ಮತ್ತು ಸ್ವರೂಪವು ಹಾಂಗ್ ಕಾಂಗ್ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಅವರ ಪ್ರಭಾವಕ್ಕೆ ಸಮರ ಕಲೆಗಳು ಮತ್ತು ಸಮರ ಕಲೆಗಳ ಚಿತ್ರಗಳ ನಿರ್ದೇಶನ ಮತ್ತು ಸ್ವರೂಪವು ಬದಲಾಯಿತು. ಲೊ ವೇರವರ ದ ಬಿಗ್ ಬಾಸ್ (1971), ಫಿಸ್ಟ್ ಆಫ್ ಫ್ಯೂರಿ (1972); ಬ್ರೂಸ್ ಲೀಯವರೇ ಬರೆದು ನಿರ್ದೇಶಿಸಿದ ವೇ ಆಫ್ ದ ಡ್ರ್ಯಾಗನ್ (1972); ರಾಬರ್ಟ್ ಕ್ಲೌಸ್ರವರು ನಿರ್ದೇಶಿಸಿದ ವಾರ್ನರ್ ಬ್ರದರ್'ಸ್ ಎಂಟರ್ ದ ಡ್ರ್ಯಾಗನ್ (1973) ಮತ್ತು ದ ಗೇಮ್ ಆಫ್ ಡೆತ್ (1978) ಈ ಐದು ಚಿತ್ರಗಳಲ್ಲಿ ಬ್ರೂಸ್ ಲೀಯವರ ಪಾತ್ರಗಳು ಪ್ರಮುಖವಾಗಿ ಗುರುತಿಸಲ್ಪಟ್ಟಿದೆ.
ಲೀಯವರು ತನ್ನ ಚಿತ್ರಗಳಲ್ಲಿ ಚೀನಾದ ಹಿರಿಮೆ ಮತ್ತು ಚೀನಾದ ರಾಷ್ಟ್ರೀಯತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದರಿಂದ ಅವರು ಜಗತ್ತಿನಾದ್ಯಂತ, ವಿಶೇಷವಾಗಿ ಚೀನಾದಲ್ಲಿ ಅಪ್ರತಿಮ ವ್ಯಕ್ತಿಯಾದರು.[4] ಲೀಯವರು ಮೊದಲು ಚೀನಾದ ಸಮರ ಕಲೆಗಳನ್ನು, (ಜನಪ್ರಿಯ ಪಾಶ್ಚಿಮಾತ್ಯ ಪ್ರಕಾರದಲ್ಲಿ "ಕುಂಗ್ ಫೂ " ) [5] ಅದರಲ್ಲೂ ವಿಶೇಷವಾಗಿ ವಿಂಗ್ ಚುನ್ನ್ನು ಅಭ್ಯಾಸ ನಡೆಸಿದರು.