ಮುಖಮಲ್ ಹೆಗ್ಗಣ
From Wikipedia, the free encyclopedia
ಮುಖಮಲ್ ಹೆಗ್ಗಣ ಎನ್ಸೆಕ್ಟಿವೊರ ಗಣದ ಟಾಲ್ಪಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಕೀಟಾಹಾರಿ ಸ್ತನಿಗಳಿಗೆ ಅನ್ವಯವಾಗುವ ಹೆಸರು (ಮೋಲ್). ಸುಮಾರು 12 ವಿವಿಧ ಜಾತಿಗಳಿದ್ದು ಇವು ಯೂರೋಪ್, ಏಷ್ಯ ಹಾಗೂ ಉತ್ತರ ಅಮೆರಿಕಗಳಲ್ಲಿ ಕಾಣದೊರೆಯುತ್ತವೆ.[1]
ಅನೇಕ ಬಗೆಯ ಮುಖಮಲ್ ಹೆಗ್ಗಣಗಳಿಗೆ ಒಂದು ತೆರನ ಕಟುವಾಸನೆ ಇರುವುದರಿಂದ ಇವಕ್ಕೆ ಶತ್ರಗಳ ಕಾಟ ಕಡಿಮೆ.