ವೆನಿಸ್
From Wikipedia, the free encyclopedia
ವೆನಿಸ್ (ಇಟಾಲಿಯನ್:Venezia, IPA: [veˈnεttsia], ವೆನೆಷಿಯನ್: ವೆನೆಷಿಯ ) ಉತ್ತರ ಇಟಲಿಯ ಒಂದು ನಗರವಾಗಿದ್ದು 271,367 ಜನಸಂಖ್ಯೆಯ (1 ಜನವರಿ 2004 ಜನಗಣನೆಯ ಪ್ರಕಾರ) ವೆನೆಟೊ ಪ್ರದೇಶದ ರಾಜಧಾನಿ. ಪಡುವಾ ಜೊತೆ ಸೇರಿ, ಈ ನಗರ ಪಡುವಾ-ವೆನಿಸ್ ಮಹಾನಗರ ಪ್ರದೇಶದ ಭಾಗವಾಗಿದೆ (ಜನಸಂಖ್ಯೆ 1,600,000). ಐತಿಹಾಸಿಕವಾಗಿ ಈ ನಗರ ಒಂದು ಸ್ವತಂತ್ರ ರಾಷ್ಟ್ರವಾಗಿತ್ತು. ವೆನಿಸ್ಗೆ "ಲಾ ಡೊಮಿನೆಂಟಿ", "ಸೆರ್ನಿಸಿಮಾ", "ಕ್ವೀನ್ ಆಫ್ ದ ಎಡ್ರಿಯಾಟಿಕ್", "ಸಿಟಿ ಆಫ್ ವಾಟರ್", "ಸಿಟಿ ಆಫ್ ಬ್ರಿಜ್ಜಸ್", ಮತ್ತು "ದ ಸಿಟಿ ಆಫ್ ಲೈಟ್" ಎಂದು ಕರೆಯಲಾಗುತ್ತದೆ. ಲುಯಿಜಿ ಬಾರ್ಜಿನಿ, ದ ನ್ಯೂಯಾರ್ಕ್ ಟೈಮ್ಸ್ ನಲ್ಲಿ, "ನಿಸ್ಸಂದೇಹವಾಗಿ ಮಾನವ ನಿರ್ಮಿತವಾದ ಅತ್ಯಂತ ಸುಂದರ ನಗರ" ಎಂದು ವರ್ಣಿಸಿದ್ದಾರೆ.[1] ಟೈಮ್ಸ್ ಆನ್ಲೈನ್ ಕೂಡ ವೆನಿಸ್ನ್ನು ಯುರೊಪ್ನ ಅತಿ ರೋಮಾಂಚಕ ನಗರ ಎಂದು ವರ್ಣಿಸಿದೆ.[2]
Venice
Venezia | |
---|---|
Comune | |
Comune di Venezia | |
Country | Italy |
Region | Veneto |
Province | Venice (VE) |
Frazioni | Chirignago, Favaro Veneto, Mestre, Marghera, Murano, Burano, Giudecca, Lido, Zelarino |
Government | |
• Mayor | Luigi Brugnaro |
Area | |
• Total | ೪೧೪.೫೭ km೨ (೧೬೦.೦೭ sq mi) |
Elevation | ೦ m (೦ ft) |
Population (2009-04-30) | |
• Total | ೨,೭೦,೬೬೦ |
• Density | ೬೫೦/km೨ (೧,೭೦೦/sq mi) |
Demonym | Veneziani |
Time zone | UTC+1 (CET) |
• Summer (DST) | UTC+2 (CEST) |
Postal code | 30100 |
Dialing code | 041 |
Patron saint | St. Mark the Evangelist |
Saint day | 25 April |
Website | Official website |
Venice and its Lagoon | |
---|---|
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | Cultural |
ಮಾನದಂಡಗಳು | i, ii, iii, iv, v, vi |
ಉಲ್ಲೇಖ | 394 |
ಯುನೆಸ್ಕೊ ಪ್ರದೇಶ | Europe and North America |
ದಾಖಲೆಯ ಇತಿಹಾಸ | |
Inscription | 1987 (11th ಸಮಾವೇಶ) |
ಉತ್ತರಪೂರ್ವ ಇಟಲಿಯ ಎಡ್ರಿಯಾಟಿಕ್ ಸಮುದ್ರದ ವೆನೆಷಿಯನ್ ಖಾರಿಯ ಜವುಗು ಭೂಮಿ ಉದ್ದಕ್ಕೂ 118 ಚಿಕ್ಕ ದ್ವಿಪಗಳಲ್ಲಿ ಈ ನಗರ ಹರಡಿದೆ. ಈ ಉಪ್ಪು ನೀರಿನ ಖಾರಿ ಪೊ (ದಕ್ಷಿಣ) ಮತ್ತು ಪಿಯವೆ (ಉತ್ತರ) ನದಿ ಮುಖಗಳ ನಡುವೆ ದಡತೀರದ ಉದ್ದಕ್ಕೂ ಹರಡಿದೆ. ವೆನೆಷಿಯಾದ ಎಲ್ಲಾ ಸಮುದಾಯದ ಒಟ್ಟು ಜನಸಂಖ್ಯೆ 272,000 ವಾಸಿಗರನ್ನು ಒಳಗೊಂಡಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಸುಮಾರು 60,000[3] ರಷ್ಟು ಜನಸಂಖ್ಯೆ ಐತಿಹಾಸಿಕ ನಗರ ವೆನಿಸ್ನಲ್ಲಿ (ಸೆಂಟ್ರೊ ಸ್ಟೊರಿಕೊ ); 176,000ರಷ್ಟು ಟೆರಿಫರ್ಮಾ (ಮುಖ್ಯ ಪ್ರದೇಶ ), ಹೆಚ್ಚಾಗಿ ಮೆಸ್ಟ್ರೆಯ ದೊಡ್ಡ ಫ್ರಾಜಿಯೊನ್ನಲ್ಲಿ ಮತ್ತು ಮಾರ್ಘೇರಾದಲ್ಲಿ; ಮತ್ತು 31,000ರಷ್ಟು ಜನರು ಖಾರಿಯ ಇತರ ದ್ವೀಪಗಳಲ್ಲಿ ವಾಸಿಸುತ್ತಾರೆ.
ವೆನಿಸ್ ಗಣತಂತ್ರ ಮಧ್ಯ ಕಾಲದಲ್ಲಿ ಹಾಗೂ ಪುನರುಜ್ಜೀವನ ಕಾಲದಲ್ಲಿ ಸಮುದ್ರತೀರದ ಒಂದು ಮುಖ್ಯ ಬಲಶಾಲಿಯಾದ ರಾಷ್ಟ್ರವಾಗಿತ್ತು. 13ನೆಯ ಶತಮಾನದಿಂದ 17ನೆಯ ಶತಮಾನದವರೆಗೂ ವೆನಿಸ್ ಧರ್ಮಯುದ್ಧ ಹಾಗೂ ಲೆಪಂಟೊ ಯುದ್ಧದ ವೇದಿಕೆ ಪ್ರದೇಶವಾಗಿತ್ತು, ಅಲ್ಲದೆ ಒಂದು ಮುಖ್ಯ ವಾಣಿಜ್ಯ ಕೇಂದ್ರ (ವಿಶೇಷವಾಗಿ ರೇಷ್ಮೆ, ಧಾನ್ಯ ಹಾಗೂ ಮಸಾಲೆ ವ್ಯಾಪಾರ) ಮತ್ತು ಕಲೆಯ ಕೇಂದ್ರವಾಗಿತ್ತು. ವೆನಿಸ್ ತನ್ನ ಸಂಗೀತದ, ಮುಖ್ಯವಾಗಿ ಗೀತನಾಟಕ ರೂಪದ ಸಂಗೀತ, ಇತಿಹಾಸಕ್ಕೆ ಕೂಡ ಪ್ರಸಿದ್ಧವಾಗಿದೆ ಹಾಗೂ ಈ ಕ್ಷೇತ್ರದಲ್ಲಿ ಅತ್ಯಂತ ಪ್ರಸಿದ್ಧನಾದವನು ಆನ್ಟೊನಿಯೊ ವಿವಾಲ್ಡಿ.