ಸದಸ್ಯ:Goutam. M./sandbox
From Wikipedia, the free encyclopedia
ಪ್ಲಾಸ್ಟಿಕ್ ವಾಸ್ತವು ಕೃತಕ ಜೈವಿಕವನ್ನು ಉಪಯೋಗಿಸಿಕೊಂಡು ಮಾಡಲ್ಪಡುತ್ತದೆ.[1] ಇದನ್ನು ಯಾವುದೇ ಘನ ರೂಉಪದಲ್ಲಿ ತರಬಹುದು. ಪ್ಲಾಸ್ಟಿಕ್ ಸಾಮಾನ್ಯವಾಗಿ ಹೆಚ್ಚಿನ ಅಣ್ಣು ದ್ರವ್ಯರಾಶಿಯೂಳ್ಳ ಜೇವಿಕ ಪಾಲಿರ್ಗಳಿಂದ ಮಾಡಲ್ಪಡುತ್ತವೆ. ಆದರೆ ಅವು ಇತರ ಪದಾರ್ಥಗಳನ್ನೂ ಹೊಂದಿರುತ್ತದೆ. ಸಾಮನ್ಯವಾಗಿ ಕೃತಕವಾಗಿರುವ ಪ್ಲಾಸ್ಟಿಕ್ವನ್ನು ಪೆಟ್ರೋಕೆಮಿಕಲ್ಸಯಿಂದ ಪಡೆಯಲಾಗುತ್ತದೆ. ಆದರೆ ಅನೇಕ ನೈಸರ್ಗಿಕವಾಗುತ್ತದೆ. ಪ್ಲಾಸ್ಟಿಕ್, ಕಡಿಮೆ ದರೆಗೆ ಸಿಗುವ ಕಾರಣ ಇದರ ಬಳಕೆ ಅತಿ ಹೆಚ್ಚು ವ್ಯಾಪಿಸುತ್ತಿದೆ. ಇದನ್ನು ಉತ್ಪಾದಿಸುವುದು ತುಂಬ ಸುಲಭವಾದ್ದರಿಂದ ಒಂದು ಚಿಕ್ಕ ಕಾಗದ ಹಿಡಿಕೆ ಇಂದ ಹಿಡಿದು ದೊಡ್ಡ ಆಕಾಶ ನೌಕೆಯವರೆಗು ಇದರ ಬಳಕೆಯುಂಟು. ಪ್ಲಾಸ್ಟಿಕ್ ಈಗಾಗಲೇ ಅನೇಕ ಸಾಂಪ್ರದಾಯಿಕ ವಸ್ತುಗಳ ಜಾಗವನ್ನು ಪಡೆದುಕೊಂಡಿದೆ, ಈ ರೀತಿ ನಾವು ಮರೆತಿರುವ ಮರ, ಕಲ್ಲು, ಪ್ರಾಣಿಗಳ ಕೊಂಬು, ಮೂಳೆ ಹಾಗೂ ಚರ್ಮ, ಕಾಗದಗಳು, ಗಾಜು ಎಲ್ಲಾವು ಈಗ ಪ್ಲಾಸ್ಟಿಕ್ ಮಯವಾಗಿದೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಮೂರು ಭಾಗ ಎಲ್ಲ ಪ್ಯಾಕೇಜಿಂಗ್ ಮಾಡಲು ಹಾಗೂ ಮನೆಗಳನ್ನು ಕಟ್ಟುವಾಗ ಪೈಪಿಂಗ್ ಮಾಡಲು ಬಳಸುತ್ತಾರೆ, ಪೀಠೋಪಕರಣ, ಆಟಿಕೆಗಳಿಗೆ ಹಾಗೂ ವಾಹನಗಳಲ್ಲಿ (ಸುಮಾರು ೨೦% ರವರೆಗೆ) ಬಳಸಬಾಳಾಗುತ್ತದೆ. ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಛಿದೆ. ಉದಾಹರಣೆಗೆ ಭಾರತದಲ್ಲಿ ಪ್ಯಾಕೇಜಿಂಗ್ ಮಾಡಲು ೪೨% ರಷ್ಟು ಪ್ಲಾಸ್ಟಿಕ್ ಬಳಕೆಯಾಗುತ್ತದೆ. ವೈದ್ಯಕೀಯ ಕ್ಷೇತ್ರದಲಿಯೂ ಪ್ಲಾಸ್ಟಿಕ್ನನ್ನು ಬಹಳಷ್ಟು ಉಪಯೋಗಿಸುತ್ತಾರೆ. ವಿಶ್ವದ ಮೊದಲ ಕೃತಕ ಪ್ಲಾಸ್ಟಿಕ್ ಬೆಕ್ಲೈಟ್.[2] ಇದನ್ನು ೧೯೦೭ರಲ್ಲಿ ನ್ಯುಯಾರ್ಕಿನಲ್ಲಿ ಲಿಯೋ ಬಿಯಾಕ್ಲ್ಯಾಡ್ ಎಂಬುವವರು ಕಂಡು ಹಿಡಿದರು. ಇವರೇ ಈ ಪ್ಲಾಸ್ಟಿಕ್ ಎನ್ನುವ ಹೆಸರು ಹುಟ್ಟು ಹಾಕಿದರು.