ಸಿದ್ಧ ಆಹಾರ (ತ್ವರಿತ ಖಾದ್ಯ)
From Wikipedia, the free encyclopedia
ಸಿದ್ಧ ಆಹಾರ (ಈ ಉದ್ದಿಮೆಯೊಳಗೆ, ಇದನ್ನು ತ್ವರಿತ ಆಹಾರ ಸೇವಾ ಕೇಂದ್ರ ಅಥವಾ ಕ್ಯುಎಸ್ಅರ್ ಎನ್ನಲಾಗಿದೆ) ಅಥವಾ 'ತ್ವರಿತ ಖಾದ್ಯ' ಎಂದರೆ ಅತ್ಯಲ್ಪವಾವಧಿಯಲ್ಲಿ ತಯಾರಿಸಿ, ಬಡಿಸಲಾಗುವ ಆಹಾರ. ಅತ್ಯಲ್ಪ ಸಮಯದಲ್ಲಿ ತಯಾರಿಸಬಹುದಾದ ಯಾವುದೇ ಆಹಾರವನ್ನು 'ತ್ವರಿತ ಖಾದ್ಯ' ಎಂದು ಪರಿಗಣಿಸಬಹುದು. ಆಹಾರ ಕೇಂದ್ರಗಳು ಅಥವಾ ಮಳಿಗೆಗಳಲ್ಲಿ ಮೊದಲೇ ಬಿಸಿ ಮಾಡಲಾದ ಅಥವಾ ತಯಾರಿಸಲಾದ ಖಾದ್ಯಾಂಶಗಳನ್ನು ಸೇರಿಸಿ, ಗ್ರಾಹಕರು ಹೊರಗೆ ತೆಗೆದುಕೊಂಡು ಹೋಗಲೆಂದು ಮಾರಲಾದ ತಿನಿಸುಗಳಿಗೆ ಈ ಉಕ್ತಿಯನ್ನು ವಿಶಿಷ್ಟವಾಗಿ ಉಲ್ಲೇಖಿಸಲಾಗುತ್ತದೆ. ತ್ವರಿತ ಆಹಾರ ಎಂಬ ಇಂಗ್ಲಿಷ್ ಉಕ್ತಿಯನ್ನು ಮೊಟ್ಟಮೊದಲ ಬಾರಿಗೆ 1951ರಲ್ಲಿ ಮೆರಿಯಮ್-ವೆಬ್ಸ್ಟರ್ ನಿಘಂಟಿನಲ್ಲಿ ಮುದ್ರಿಸಿ ಮನ್ನಣೆ ನೀಡಲಾಯಿತು.ಯಾವುದೇ ಪೀಠೋಪಕರಣಗಳಿಲ್ಲದ(ತಾತ್ಕಾಲಿಕ ಮೇಲ್ಛಾವಣಿಯ) ಚಪ್ಪರಗಳು,[1] ಅಥವಾ ತ್ವರಿತ ಖಾದ್ಯ ಕೇಂದ್ರಗಳು ಅಥವಾ ಶೀಘ್ರ ಸೇವಾ ಆಹಾರಕೇಂದ್ರ ಗಳಲ್ಲಿ ಇಂತಹ ತ್ವರಿತ ಖಾದ್ಯಗಳು ಲಭ್ಯ. ಈ ಆಹಾರ ಕೇಂದ್ರ ಸಮೂಹ ಉದ್ದಿಮೆಗಳ ಅಂಗವಾಗಿರುವ ಅಧಿಕೃತ ಗುತ್ತಿಗೆ ಉದ್ದಿಮೆಗಳಿಗೆ ಪ್ರಮಾಣಿತ ಖಾದ್ಯಗಳನ್ನು ಕೇಂದ್ರೀಯ ಸ್ಥಳಗಳಿಂದ ಸಾಗಿಸಲಾಗುತ್ತದೆ.[2] ತ್ವರಿತ ಖಾದ್ಯ ಕೇಂದ್ರವೊಂದನ್ನು ಸ್ಥಾಪಿಸಲು ಅಗತ್ಯವಾದ ಬಂಡವಾಳ ತುಲನಾತ್ಮಕವಾಗಿ ಕಡಿಮೆ. ಅಲ್ಲಿಯೇ ಕುಳಿತು, ಖಾದ್ಯವನ್ನು ತರಿಸಿಕೊಂಡು ತಿನ್ನುವಂತಹ ಸ್ವಲ್ಪಮಟ್ಟಿಗೆ ಸುಸಜ್ಜಿತ ಎನ್ನಲಾದ ಆಹಾರ ಕೇಂದ್ರಗಳಿಗೆ ಅನೌಪಚಾರಿಕ ತ್ವರಿತ ಆಹಾರ ಕೇಂದ್ರ ಎನ್ನಬಹುದು.
The examples and perspective in this article may not represent a worldwide view of the subject. |