ಸ್ಮಾರ್ಟ್ ಫೋನ್
From Wikipedia, the free encyclopedia
ಸ್ಮಾರ್ಟ್ ಫೋನ್ ೧೯೯೯ ರಲ್ಲಿ ಜಪಾನಿನ ಕಂಪನಿ ಎನ್.ಟಿ.ಟಿ ಡೊಕೊಮೋ ಅವರು ಮೊದಲ ಬಾರಿಗೆ ಬಿಡುಗಡೆ ಮಾಡಿದರು. ಸ್ಮಾರ್ಟ್ ಫೋನ್ ಮೊಬೈಲ್ ಬಳಕೆಗೆ ಉಪಯುಕ್ತವಾಗಿದೆ. ಹಾಗು ಇತರ ಲಕ್ಷಣಗಳು ಹೊಂದಿದೆ ಸಾಮಾನ್ಯವಾಗಿ ಒಂದು ಕ್ಯಾಲೆಂಡರ್, ಮೀಡಿಯಾ ಪ್ಲೇಯರ್, ಜಿಪಿಎಸ್ ಸಂಚರಣೆ ಘಟಕ, ಡಿಜಿಟಲ್ ಕ್ಯಾಮೆರಾ ಮತ್ತು ಡಿಜಿಟಲ್ ವೀಡಿಯೊ ಕ್ಯಾಮರಾ ನೇಮಕಾತಿಗಳನ್ನು ಮಾಡುವ ಒಂದು ವೈಯಕ್ತಿಕ ಡಿಜಿಟಲ್ ಸಹಾಯಕ ಪಿಡಿಎ ಸೇರಿವೆ. ಸ್ಮಾರ್ಟ್ ಫೋನ್ ಇಂಟರ್ನೆಟ್ ಪ್ರವೇಶಿಸಲು ತುಂಬ ಸುಲಭ ಮತ್ತು ಅಪ್ಲಿಕೇಶನ್ಗಳು ಹೊಂದಿದೆ.ಮತ್ತು ಪ್ರಪಂಚಾದ್ಯಂತ ಇಂದು ಇರುವ ಕೋಟ್ಯಾನುಕೋಟಿ ಮೊಬೈಲ್ ಗಳನ್ನು ಮುಖ್ಯವಾಗಿ ಎರಡು ವಿದಗಳನ್ನಾಗಿ ವಿಂಗಡಿಸಬಹುದು. ಒಂದು ಸಾದಾರಣ ಫೋನುಗಳು. ಮತ್ತೊಂದು ಸ್ಮಾರ್ಟ್ ಫೋನುಗಳು. ಸಾದಾರಣ ಮೊಬೈಲ್ ಗಳ ಬಗ್ಗೆ ಎಲ್ಲರಿಗೂ ಗೊತ್ತಿವೆ. ಆದರೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೆಚ್ಚಿನ ಜನಸಾಮಾನ್ಯರಿಗೆ ಹೆಚ್ಚು ಮಾಹಿತಿಯಿಲ್ಲವೆಂಬುದು ನನ್ನ ಅನುಭವ. ಸ್ಮಾರ್ಟ್ ಫೋನ್ ಗಳು ಸಾದಾರಣ ಫೋನ್ ಗಳಿಗಿಂತ ಹೇಗೆ ಭಿನ್ನವೆಂದರೆ ಅವು ಚಿಕ್ಕ ಕಂಪ್ಯೂಟರ್ ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಕಂಪ್ಯೂಟರ್ ಗಳಲ್ಲಿ ಇಂತಿಷ್ಟು ಶಕ್ತಿಯ ಪ್ರೊಸೆಸರ್, ಇಂತಿಷ್ಟು ಸ್ಮರಣಶಕ್ತಿಯ ರಾಂ ಇರುವಂತೆ ಈ ಸ್ಮಾರ್ಟ್ ಫೋನ್ ಗಳಲ್ಲೂ ಇರುತ್ತವೆ. ಹೇಗೆ ಕಂಪ್ಯೂಟರ್ ಗಳಲ್ಲಿ ವಿಂಡೋಸ್ ಹೆಚ್ಚಿನ ಜನ ಉಪಯೋಗಿಸುವುದು,ಲಿನೆಕ್ಸ್ ಎಂಬೆಲ್ಲಾ ಕಾರ್ಯತಂತ್ರ ವ್ಯವಸ್ಥೆ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಒಂದು ಕಾರ್ಯತಂತ್ರವ್ಯವಸ್ಥೆಯಿರುತ್ತದೆ.[1]