ಹರಪ್ಪ
ಹರಪ್ಪ ನಗರಿಕತೆ / From Wikipedia, the free encyclopedia
ಹರಪ್ಪ (ಉರ್ದು/ಪಂಜಾಬಿ: ہڑپہ, pronounced [ɦəɽəpːaː]) ಸಾಹಿವಾಲ್ ನ ಪಶ್ಚಿಮಕ್ಕೆ 20 km (12 mi)ದೂರದಲ್ಲಿರುವ, ಪಾಕಿಸ್ತಾನದ ಈಶಾನ್ಯದಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿನ ಒಂದು ಮಹತ್ವದ ಪ್ರಾಚ್ಯವಸ್ತು ಸಂಶೋಧನಾ ಕುತೂಹಲಗಳ ಆಗರವಾದಂತಹ ಸ್ಥಳ. ಹಿಂದೆ ರಾವಿ ನದಿ ಹರಿಯುತ್ತಿದ್ದ ಸ್ಥಳದಲ್ಲಿ ಈಗ ಇರುವಂತಹ ಒಂದು ಆಧುನಿಕ ಹಳ್ಳಿಯ ಹೆಸರಿನಿಂದ ಇದಕ್ಕೂ ಈ ಹೆಸರು ಬಂದಿದ್ದು, ಈ ಹಳ್ಳಿಯು ಸಂಶೋಧನಾ ಸ್ಥಳದ ಆಗ್ನೇಯಕ್ಕೆ ಸುಮಾರು 5 km (3 mi) ದೂರದಲ್ಲಿದೆ. ಈ ಸ್ಥಳದಲ್ಲಿ ಕಂಚಿನ ಯುಗದ ಕೋಟೆಕೊತ್ತಲಗಳುಳ್ಳ ನಗರದ ಅವಶೇಷಗಳಿದ್ದು,ಇದು ಸಿಮೆಟ್ರಿ H ವಿಧಾನದ ಒಂದು ಭಾಗವಾಗಿದೆ ಹಾಗೂ ಸಿಂಧು ಕಣಿವೆ ನಾಗರಿಕತೆಯ ಅವಶೇಷಗಳ ಆಗರವಾಗಿದೆ; ಸಿಂಧ್ ಮತ್ತು ಪಂಜಾಬ್ ಗಳಲ್ಲಿ ಇದು ಕೇಂದ್ರಿತವಾಗಿದೆ.[1] ಈ ನಗರದಲ್ಲಿ ಸುಮಾರು 23,500 ನಿವಾಸಿಗಳಿದ್ದರೆಂದು ನಂಬಲಾಗಿದೆ —ಆಗಿನ ಕಾಲಕ್ಕೆ ಅದು ಬಹಳ ದೊಡ್ಡ ಜನಸಂಖ್ಯೆ. 2005ರಲ್ಲಿ ಒಂದು ವಿವಾದಾತ್ಮಕ ಮೋಜಿನ ಉದ್ಯಾನದ ಯೋಜನೆಯನ್ನು ಈ ಸ್ಥಳದಲ್ಲಿ ಹಮ್ಮಿಕೊಳ್ಳುವುದನ್ನು ಕೈಬಿಡಲಾಯಿತು; ನಿರ್ಮಾಣ ಕಾರ್ಯದ ಪ್ರಪ್ರಥಮ ಹಂತದಲ್ಲೇ ಭೂಮಿಯನ್ನು ಅಗೆಯುತ್ತಿರುವಾಗ ನಿರ್ಮಾಣಗಾರರಿಗೆ ಹಲವಾರು ಪ್ರಾಚೀನ ಕಾಲದ ಮಾನವ ನಿರ್ಮಿತ ವಸ್ತುಗಳು ದೊರಕಲಾರಂಭಿಸಿದುದೇ ಈ ನಿಲುಗಡೆಗೆ ಕಾರಣ. ಪ್ರಮುಖ ಪಾಕಿಸ್ತಾನಿ ಪ್ರಾಚ್ಯವಸ್ತು ಸಂಶೋಧಕರಾದ ಅಹ್ಮದ್ ಹಸನ್ ದಾನಿಯವರು ಸಂಸ್ಕೃತಿ ಸಚಿವಾಲಯಕ್ಕೆ ಕಳುಹಿಸಿದ ಮನವಿಯ ಮೇರೆಗೆ ಈ ಸ್ಥಳವನ್ನು ಯಥಾಸ್ಥಿತಿಯಲ್ಲಿ ಕಾದಿರಿಸಲಾಯಿತು.[2]
ಹರಪ್ಪ | |
---|---|
ದೇಶ | ಪಾಕಿಸ್ತಾನ |
ರಾಜ್ಯ | ಪಂಜಾಬ್ |
ಜಿಲ್ಲೆ | ಸಹಿವಾಲ್ ಜಿಲ್ಲೆ |
Time zone | UTC+5 (Pakistan Standard Time) |