ಆಸ್ಟ್ರೇಲಿಯ
From Wikipedia, the free encyclopedia
ಆಸ್ಟ್ರೇಲಿಯ ದಕ್ಷಿಣ ಭೂಗೋಳಾರ್ಧದಲ್ಲಿರುವ ಒಂದು ದೇಶಹಾಗೂ ಖಂಡ. ಸುತ್ತಲೂ ಸಾಗರಜಲದಿಂದ ಆವೃತವಾಗಿದ್ದು ಇಡೀ ಖಂಡವೇ ಒಂದು ಬೃಹತ್ ದ್ವೀಪದಂತಿದೆ. ಇದರ ಸ್ಥಳ ನಿರ್ದೇಶ ಹೀಗಿದೆ : 113º90-153º390, ಪು.ರೇ; 10º410-43º390, ದ.ಅ. ವಿಸ್ತೀರ್ಣ 76,86,850 ಚ.ಕಿಮೀ. ಜನಸಂಖ್ಯೆ 19,855,288 (2006). ರಾಜಧಾನಿ ಕ್ಯಾನ್ಬೆರ 353,149 (2001). ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಇದೆ. ಅಂದರೆ ಇದರ ವಿಸ್ತಾರ ಅಮೆರಿಕ ಸಂಯುಕ್ತ ಸಂಸ್ಥಾನದಷ್ಟಾಗುತ್ತದೆ. ಸಮುದ್ರತೀರ 19,536 ಕಿಮೀ ಉದ್ದವಾಗಿದೆ. ನಿಸ್ಸಂದೇಹವಾಗಿ ಇದೊಂದು ಅಡಕವಾದ ಭೂಭಾಗ. ಇದರ ಈ ವೈಶಿಷ್ಟ್ಯ, ಮೇಲ್ಮೈಲಕ್ಷಣ ಮತ್ತು ಅಕ್ಷಾಂಶರೀತ್ಯಾ ಇದರ ಸ್ಥಾನ, ಇವೆಲ್ಲ ಇದರ ವಾಯುಗುಣವನ್ನು ನಿಯಂತ್ರಿಸುತ್ತವೆ. ಈ ಖಂಡದ ಭೌಗೋಳಿಕ ಲಕ್ಷಣ ನಿರ್ಣಯವಾಗಿರುವುದು ಈ ಅಂಶಗಳಿಂದ. ಆಸ್ಟ್ರೇಲಿಯ ಎಂಬ ಹೆಸರು `ಆಸ್ಟ್ರಲ’ ಎಂಬ ಲ್ಯಾಟಿನ್ ಶಬ್ದದಿಂದ ಬಂದದ್ದು.
Quick Facts Commonwealth of Australia, Capital ...
Commonwealth of Australia | |
---|---|
Motto: None | |
Anthem: Advance Australia Fair Royal anthem: God Save the Queen | |
Capital | ಕ್ಯಾನ್ಬೆರ |
Largest city | ಸಿಡ್ನಿ |
Official languages | ಆಂಗ್ಲ (de facto 1) |
Government | ಸಾಂವಿಧಾನಿಕ ಸಾರ್ವಭೌಮತ್ವ (ಸಂಘಟಿತ) |
• ಮಹಾರಾಣಿ | ಮಹಾರಾಣಿ ಎರಡನೇ ಎಲಿಜಬೆತ್ |
• Governor-General | ಕ್ವೆಂಟೀನ್ ಬ್ರೈಸ್ |
• ಪ್ರಧಾನ ಮಂತ್ರ | ಜೂಲಿಯಾ ಗಿಲಾರ್ಡ್ |
ಸ್ವಾತಂತ್ರ್ಯ | |
• ಸಂವಿಧಾನ | ಜನವರಿ ೧ ೧೯೦೧ |
• Statute of Westminster | ಡಿಸೆಂಬರ್ ೧೧ ೧೯೩೧ |
• Australia Act | ಮಾರ್ಚ್ ೩ ೧೯೮೬ |
• Water (%) | 1 |
Population | |
• ೨೦೦೬ estimate | 20,555,3002 (53rd) |
• ೨೦೧೧ census | ೨೧,೫೦೭,೭೧೭ |
GDP (PPP) | 2006 estimate |
• Total | $674.9 billion (17th) |
• Per capita | $32,220 (World Bank) (14th) |
HDI (2006) | 0.957 very high · 3rd |
Currency | ಆಸ್ಟ್ರೇಲಿಯ ಡಾಲರ್ (AUD) |
Time zone | UTC+8 to +10 (various3) |
• Summer (DST) | UTC+8 to +11 (various3) |
Calling code | +61 |
Internet TLD | .au |
1 English does not have de jure official status (source) 2 mid-2006 population projection using Series B (medium variant) from 3 There are minor variations from these three time zones, see Time in Australia. |
Close