ನಿಂಬೆ
ಸಸ್ಯದ ನೋಥೋಸ್ಪೀಸೀಸ್ / From Wikipedia, the free encyclopedia
ನಿಂಬೆಯು ಸದಾ ಹಸಿರಾಗಿರುವ ಒಂದು ಚಿಕ್ಕ ಮರ, ರೂಟೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಫಲವೃಕ್ಷ (ಲೈಮ್). ಇದಕ್ಕೆ ನಿಂಬೆಗಿಡ ಎಂದು ಕೂಡ ಕರೆಯಲಾಗುತ್ತದೆ.
Quick Facts ಲಿಂಬೆ, Scientific classification ...
Close
ಬಾಳೆ ಮತ್ತು ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣಿನ ಬೆಳೆಯೇ ನಿಂಬೆ. ತೋಟಗಾರಿಕೆ ಬೆಳೆಯಾಗಿರುವ ಇದು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಇದು ವಿಟಾಮಿನ್ ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದರ ವೈಜ್ಞಾನಿಕ/ಶಾಸ್ತ್ರೀಯ ಹೆಸರು ಸಿಟ್ರಸ್ ಆರಂಟಿಫೋಲಿಯ ( Citrus aurantifolia).