ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು ೧೯ನೇ ಏಪ್ರಿಲ್ ೨೦೨೪ ರಿಂದ ೧ನೇ ಜೂನ್ ೨೦೨೪ರವರೆಗೆ ನಡೆಯಲಿವೆ. ಸದ್ಯ ಇರುವ ೧೮ನೇ ಲೋಕಸಭೆಯ ೫೪೩ ಸ್ಥಾನಗಳಿಗೆ ಹೊಸ ಸದಸ್ಯರನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದ್ದು ಒಟ್ಟು ೪೪ ದಿನಗಳ ಕಾಲ ಚುನಾವಣಾ ಚಟುವಟಿಕೆಗಳು ನಡೆಯಲಿವೆ.[1][2] ೪ನೇ ಜೂನ್ ೨೦೨೪ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ ೧೬ರಂದು ಕೊನೆಗೊಳ್ಳಲಿದೆ. ೯೬ ಕೋಟಿ ಮತದಾರರು ಮತ ಚಲಾಯಿಸಲಿದ್ದು, ೨೦೧೯ರ ಚುನಾವಣೆಗಿಂತಲೂ ೧೫ ಕೋಟಿ ಹೆಚ್ಚುವರಿ ಮತದಾರರಿದ್ದಾರೆ.
Quick Facts ಲೋಕಸಭೆಯ ಎಲ್ಲಾ ಸ್ಥಾನಗಳು ಬಹುಮತಕ್ಕೆ೨೭೨ ಸ್ಥಾನಗಳು ಬೇಕಾಗಿವೆ, ನಾಯಕ ...
Close