ಎಂಜಿನಿಯರಿಂಗ್
From Wikipedia, the free encyclopedia
ಎಂಜಿನಿಯರಿಂಗ್ ಕ್ಷೇತ್ರವು ಇಚ್ಛಿತ ಉದ್ದೇಶ ಅಥವಾ ಸಂಶೋಧನೆಗಳ ಸುರಕ್ಷಿತ ನೆರವೇರಿಕೆಗೆ ಸಾಮಗ್ರಿಗಳು, ರಚನೆಗಳು, ಯಂತ್ರಗಳು, ಉಪಕರಣಗಳು, ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳ ವಿನ್ಯಾಸ ಮತ್ತು ಅನುಷ್ಠಾನಕ್ಕೆ ತಾಂತ್ರಿಕ, ವೈಜ್ಞಾನಿಕ ಮತ್ತು ಗಣಿತದ ಜ್ಞಾನವನ್ನು ಸಂಪಾದಿಸುವ ಮತ್ತು ಅಳವಡಿಸುವ ಶಿಕ್ಷಣ, ಕಲೆ ಮತ್ತು ವೃತ್ತಿಯಾಗಿದೆ. ವೃತ್ತಿಪರ ಅಭಿವೃದ್ಧಿ ಕುರಿತ ಅಮೆರಿಕನ್ ಎಂಜಿನಿಯರ್ಸ್ ಮಂಡಳಿಯು(ECPD, ABETಗಿಂತ ಪೂರ್ವದಲ್ಲಿದ್ದ ಮಂಡಳಿ)ಎಂಜಿನಿಯರಿಂಗ್ ಶಬ್ದವನ್ನು ಕೆಳಗಿನಂತೆ ವ್ಯಾಖ್ಯಾನಿಸಿದೆ:
ರಚನೆಗಳು, ಯಂತ್ರಗಳು,ಉಪಕರಣ ಅಥವಾ ಉತ್ಪಾದನೆ ಕಾರ್ಯವಿಧಾನಗಳು ಅಥವಾ ಕೆಲಸಗಳ ವಿನ್ಯಾಸ ಅಥವಾ ಅಭಿವೃದ್ಧಿಗೆ ವೈಜ್ಞಾನಿಕ ತತ್ವಗಳ ಸೃಜನಾತ್ಮಕ ಅಳವಡಿಕೆಯಿಂದ ಅವುಗಳನ್ನು ಪ್ರತ್ಯೇಕವಾಗಿ ಅಥವಾ ಸಾಮೂಹಿಕವಾಗಿ ಬಳಸಿಕೊಳ್ಳುವುದು. ಅಥವಾ ಅವುಗಳ ವಿನ್ಯಾಸದ ಪೂರ್ಣ ಅರಿವಿನೊಂದಿಗೆ ಅದರ ನಿರ್ಮಾಣ ಅಥವಾ ನಿರ್ವಹಣೆ; ಅಥವಾ ನಿರ್ದಿಷ್ಟ ನಿರ್ವಹಣಾ ಪರಿಸ್ಥಿತಿಗಳ ಅಡಿಯಲ್ಲಿ ಅದರ ನಡವಳಿಕೆಯನ್ನು ಮುಂಗಾಣುವುದು;ಎಲ್ಲವೂ ಇಚ್ಛಿತ ನಿರ್ವಹಣೆ, ಕಾರ್ಯಾಚರಣೆಯ ಆರ್ಥಿಕತೆ ಮತ್ತು ಜೀವ ಮತ್ತು ಆಸ್ತಿಪಾಸ್ತಿಯ ಸುರಕ್ಷತೆಗೆ ಸಂಬಂಧಿಸಿದೆ.[1][2][3]
ಎಂಜಿನಿಯರಿಂಗ್ ಅಭ್ಯಸಿಸುವ ವ್ಯಕ್ತಿಯನ್ನು ಎಂಜಿನಿಯರ್ ಎಂದು ಕರೆಯುತ್ತಾರೆ.ಅದಕ್ಕೆ ಪರವಾನಗಿ ಪಡೆದಿರುವವರು ವೃತ್ತಿಪರ ಎಂಜಿನಿಯರ್,ಚಾರ್ಟರ್ಡ್ ಎಂಜಿನಿಯರ್, ಇನ್ಕಾರ್ಪೋರೇಟೆಡ್ ಎಂಜಿನಿಯರ್ ಅಥವಾ ಯುರೋಪಿಯನ್ ಎಂಜಿನಿಯರ್ ಮುಂತಾದ ಔಪಚಾರಿಕ ಹೆಚ್ಚಿನ ಹುದ್ದೆಗಳನ್ನು ಹೊಂದಿರುತ್ತಾರೆ. ಎಂಜಿನಿಯರಿಂಗ್ ವಿಶಾಲ ವಿಭಾಗವು ಹೆಚ್ಚು ವ್ಯಾಪ್ತಿಯ ವಿಶೇಷ ಉಪವಿಭಾಗಗಳನ್ನು ಒಳಗೊಂಡಿದೆ, ಪ್ರತಿಯೊಂದು ಕೆಲವು ಅಳವಡಿಕೆಯ ಕ್ಷೇತ್ರಗಳಿಗೆ ಮತ್ತು ತಂತ್ರಜ್ಞಾನದ ನಿರ್ದಿಷ್ಟ ಕ್ಷೇತ್ರಗಳಿಗೆ ಹೆಚ್ಚು ಮಹತ್ವ ನೀಡುವುದಾಗಿದೆ.