ಐರ್ಲೆಂಡ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found. 53°N 07°W
Native name: Éire / Ireland | |
---|---|
Geography | |
Location | Northern Europe or Western Europe[1] |
ವಿಸ್ತೀರ್ಣ | ಟೆಂಪ್ಲೇಟು:Km2 to mi2[2] |
Area rank | 20th |
ಕಡಲ ತೀರ | 3,700 km (2,300 mi) |
ಸಮುದ್ರ ಮಟ್ಟದಿಂದ ಎತ್ತರ | 1,041 m (3,415 ft) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | Carrauntoohil |
Country | |
ಐರ್ಲೆಂಡ್ ಗಣರಾಜ್ಯ | |
Largest city | Dublin |
ಯುನೈಟೆಡ್ ಕಿಂಗ್ಡಂ | |
Constituent country | Northern Ireland |
Largest city | Belfast |
Demographics | |
Population | 6,300,000 (as of 2009) |
ಸಾಂದ್ರತೆ | 71 |
Ethnic groups | Irish, Ulster Scots, Irish Travellers |
ಐರ್ಲೆಂಡ್ (pronounced /ˈaɪrlənd/ ( listen), ಟೆಂಪ್ಲೇಟು:IPA2; ಐರಿಷ್:Éire, pronounced [ˈeːɾʲə] ( listen); ಅಲ್ ಸ್ಟರ್ ಸ್ಕಾಟ್ಸ್ ಏರ್ಲಾನ್ ಯುರೋಪನಲ್ಲಿರುವ ಮೂರನೆಯ ಅತಿ ದೊಡ್ಡ ದ್ವೀಪವೆನಿಸಿದೆ.ವಿಶ್ವದಲ್ಲೇ ಇಪ್ಪತ್ತನೆಯ ವಿಶಾಲ ದ್ವೀಪವಾಗಿದೆ. ಇದು ಯುರೋಪ್ ಖಂಡದ ವಾಯುವ್ಯ ಭಾಗದಲ್ಲಿ ವಿಸ್ತರಿಸಿ ತನ್ನ ಸುತ್ತಲೂ ನೂರಾರು ಸಣ್ಣ ಮತ್ತು ಪುಟ್ಟ ದ್ವೀಪಗಳನ್ನು ಒಳಗೊಂಡಿದೆ. ಐರ್ಲೆಂಡಿನ ಪೂರ್ವಭಾಗದಲ್ಲಿ ಐರಿಶ್ ಸಮುದ್ರದಿಂದ ಪ್ರತ್ಯೇಕಗೊಂಡ ಗ್ರೇಟ್ ಬ್ರಿಟನ್ ದ್ವೀಪವಿದೆ. ಒಂದು ಸಾರ್ವಭೌಮ ರಾಜ್ಯವೆನಿಸಿರುವ ಐರ್ಲೆಂಡ್ ಹೆಸರಿನ ಇದು ಇಡೀ ದ್ವೀಪ ಪ್ರದೇಶದ ಆರನೆಯ ಐದು ಭಾಗದ ಪ್ರದೇಶ ಆಕ್ರಮಿಸಿದೆ ಉತ್ತರ ಐರ್ಲೆಂಡ್ ಯುನೈಟೆಡ್ ಕಿಂಗಡಮ್ ನ ಒಂದು ಭಾಗವಾಗಿದ್ದು,ಇನ್ನುಳಿದ ವಾಯುವ್ಯ ಭಾಗವು ಬೃಹತ ದ್ವೀಪಪ್ರದೇಶವನ್ನು ಒಳಗೊಂಡಿದೆ.
ಐರ್ಲೆಂಡಿನ ಜನಸಂಖ್ಯೆಯು ಹೆಚ್ಚು ಕಡಿಮೆ ಆರು ದಶಲಕ್ಷಗಳೆಂದು ಅಂದಾಜಿಸಲಾಗಿದೆ.[3][4] ಸುಮಾರು ೪.೫ ದಶಲಕ್ಷ ಜನರು ಐರ್ಲೆಂಡ್ ಗಣರಾಜ್ಯದಲ್ಲಿ ವಾಸವಾಗಿದ್ದರೆ ಇನ್ನುಳಿದ ೧.೭೫ ದಶಲಕ್ಷ ಜನರು [3][4][5] ಉತ್ತರ ಐರ್ಲೆಂಡಿನಲ್ಲಿದ್ದಾರೆ ಈ ಜನಸಂಖ್ಯೆಯು ಐತಿಹಾಸಿಕ ಏರಿಕೆ ಎಂದೇ ಹೇಳಲಾಗುತ್ತದೆ ಯಾಕೆಂದರೆ ೧೯೬೦ರ ದಶಕದಲ್ಲಿ ಕೇವಲ ೪.೨ ದಶಲಕ್ಷದ ಜನಸಂಖ್ಯೆ ಕಡಿಮೆ ಪ್ರಮಾಣದ ಏರಿಕೆ ಕಂಡಿತ್ತು. ಹೇಗೆ ಆದರೂ ಈಗಿನ ಜನವಸತಿ ಕೂಡಾ ೧೯ನೆಯ ಶತಮಾನದಲ್ಲಿನ ಪೂರ್ವದ ಭೀಕರ ಬರಗಾಲದ ಪರಿಸ್ಥಿತಿಯಲ್ಲೂ ೮ ದಶಲಕ್ಷದಷ್ಟಿದ್ದ ಜನನಿಬಿಡತೆಗೆ ಹೋಲಿಸಿದರೆ ಇದು ಕಡಿಮೆ ಪ್ರಮಾಣದ ಹೆಚ್ಚಳ ಎಂದೇ [6] ಹೇಳಲಾಗುತ್ತದೆ.
ಐರ್ಲೆಂಡಿನಲ್ಲಿ ಮೊದಲ ಜನವಸತಿಗೆ ೮೦೦೦BC ಅಷ್ಟು ಹಳೆಯ ಇತಿಹಾಸಾವಿದೆ.ಅಲ್ಲಿ ಸೆಲ್ಟಿಕ್ ಅಂದರೆ ಇಂಡೋ-ಯುರೋಪಿಯನ್ ಮೂಲದ ಭಾಷೆ ಮಾತನಾಡುವ ಜನಾಂಗ ವಾಸವಾಗಿತ್ತೆಂದು ಹೇಳಲಾಗುತ್ತದೆ.ಇದೇ ಐರ್ಲೆಂಡಿನಲ್ಲಿ ೨೦೦BC ಅವಧಿಗೆ ಈ ಜನಾಂಗದ ಪ್ರಾಬಲ್ಯ ಹೆಚ್ಚಾಯಿತು.ಅದಕ್ಕೆ ಪೂರಕವಾಗಿ ವಿಕಿಂಗ್ಸ್ (ಸ್ಕ್ಯಾಂಡೇನಿಯನ್ ಜನಾಂಗ ಇವರು ಯುರೋಪ್ ಕರಾವಳಿ ಪ್ರದೇಶದ ಮೇಲೆ ದಾಳಿ ನಡೆಸಿದ್ದರು) ಮತ್ತು ನಾರ್ಮನ್ಸ್ ಜನಾಂಗದವರು ಮಧ್ಯಯುಗೀನದ 1600s ರ ದಶಕದ ಹೊತ್ತಿಗೆ ಇಂಗ್ಲೀಷರ ಪ್ರಾಬಲ್ಯಕ್ಕೆ ಕಾರಣರಾದರು. ಬಹು ಸಂಖ್ಯಾತ ಕ್ಯಾಥೊಲಿಕ್ ಸಮಾಜದಲ್ಲಿ ಪ್ರೊಟೆಸ್ಟಂಟ್ ಇಂಗ್ಲೀಷ್ ರ ಆಡಳಿತ ಕ್ಯಾಥೊಲಿಕ್ ರನ್ನು ಹೆಮ್ಮೆಟ್ಟಿಸಿತು.ಅಲ್ ಸ್ಟರ್ ಪ್ಲಾಂಟೇಶನ್ (ಐರ್ಲೆಡಿನ ವಿಭಜಿತ ದ್ವೀಪ ಭಾಗ)ನಲ್ಲಿನ ಪ್ಲಾಂಟೇಶನ್ ಗಳ ಒಡೆತನದಿಂದಾಗಿ ವಾಯುವ್ಯ ಭಾಗದಲ್ಲಿ ಪ್ರೊಟೆಸ್ಟಂಟ್ ರು ಬಹುಸಂಖ್ಯೆಯಲ್ಲಿದ್ದರು.
ಐರ್ಲೆಂಡ್ ೧೮೦೧ರಲ್ಲಿ ಯುನೈಟೆಡ್ ಕಿಂಗಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡಾಗಿ ಮಾರ್ಪಟ್ಟಿತು. ಮಧ್ಯಭಾಗದ ೧೮೦೦ರ ಸುಮಾರಿಗೆಸಂಭವಿಸಿದ ಒಂದು ಭೀಕರ ಬರಗಾಲವು ದೊಡ್ದ ಪ್ರಮಾಣದ ಸಾವು-ನೋವು ಮತ್ತು ವಲಸೆಗೆ ಕಾರಣವಾಯಿತು. ಐರಿಶ್ ಸ್ವಾತಂತ್ರ್ಯ ಸಮರ ೧೯೨೧ರಲ್ಲಿ ಕೊನೆಗೊಂಡ ನಂತರ ಬ್ರಿಟಿಷ್ ಸರ್ಕಾರದೊಂದಿಗೆ ಆಂಗ್ಲೊ-ಐರಿಶ್ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕುವ ಮೂಲಕ ಐರಿಶ್ ಮುಕ್ತ ರಾಜ್ಯ ನಿರ್ಮಾಣಕ್ಕೆ ದಾರಿಯಾಯಿತು. ಇದು ಬ್ರಿಟಿಶ್ ಸಾಮ್ರಾಜ್ಯದ ಸ್ವತಂತ್ರ ಆಂತರಿಕ ಪರಿಣಾಮಕಾರಿ ಆಡಳಿತ ರಾಜ್ಯವೆನಿಸಿದ್ದರೂ ಸಾಂವಿಧಾನಿಕವಾಗಿ ಬ್ರಿಟಿಶ್ ರಾಜ ಪ್ರಭುತ್ವಕ್ಕೆ ಆಧೀನವಾಗಿತ್ತು. ಉತ್ತರ ಐರ್ಲೆಂಡ್ ೩೨ಐರ್ಲೆಂಡ್ ನ ಪುಟ್ಟ ಸ್ವತಂತ್ರ ಸ್ಥಳೀಯ ಐರ್ಲೆಂಡ್ ಸರ್ಕಾರದ ಆಡಳಿತದಲ್ಲಿನ ಆರು ಭಾಗಗಳನ್ನು ಒಳಗೊಂಡಿದೆ.ಇದು 1921ರಲ್ಲಿ ಸ್ಥಾಪಿತ ಶಾಂತಿ ಒಪ್ಪಂದದ ತತ್ ಕ್ಷಣವೇ ಕಾರ್ಯಪ್ರವೃತ್ತವಾಗಿ ಯುನೈಟೆದ್ ಕಿಂಗಡಮ್ ನೊಂದಿಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಫಲವಾಯಿತು ಇಸವಿ ೧೯೩೭ರಲ್ಲಿ ಹೊಸ ಸಂವಿಧಾನವೊಂದು ಐರಿಶ್ ಮುಕ್ತ ರಾಜ್ಯಕ್ಕೆ ವಿದಾಯ ಹೇಳಿ ಸಂಪೂರ್ಣ ಸ್ವತಂತ್ರ ರಾಜ್ಯ ಐರ್ಲೆಂಡಾಗಿ ಹೊರಹೊಮ್ಮಿತು.ನಂತರ ಕಾಮನ್ ವೆಲ್ಥ್ ನಿಂದ ಬೇರ್ಪಟ್ಟು 1949 ರಲ್ಲಿ ಗಣರಾಜ್ಯವಾಗಿ ಐರ್ಲೆಂಡ್ ಆಗಿ ಮಾರ್ಪಟ್ಟಿತು. ಇಸವಿ೧೯೭೩ ರಲ್ಲಿ ಐರ್ಲೆಂಡಿನ ಎರಡೂ ಭಾಗಗಳು ಯುರೋಪಿಯನ್ ಕಮುನಿಟಿಗೆ ಸೇರಿದವು ಉತ್ತರ ಐರ್ಲೆಂಡಿನಲ್ಲಿ ನ ಸಂಘರ್ಷದ ೧೯೬೦ರ ಘಟನೆಗಳು ಸುಮಾರು ೧೯೯೦ರ ತನಕ ಅಶಾಂತಿಯನ್ನು ಉಂಟು ಮಾಡಿದವು.ಆದರೆ ೧೯೯೮ರ ರಾಜಕೀಯ ಒಪ್ಪಂದದ ನಂತರ ಇವು ತಹಬದಿಗೆ ಬಂದವು.
ಐರ್ಲೆಂಡ್ ಎಂಬ ಹೆಸರು (ಆಧುನಿಕ ಕಾಲದಲಿ ಐರಿಶ್ ಈರೆ ) ಸೆಲ್ಟಿಕ್ ದೇವತೆ ಈರೆ ಗೆ ಸಂಬಂಧಿಸಿದ್ದಾಗಿದೆ.ಹೆಚ್ಚಾಗಿ ಜರ್ಮನಿ ಶಬ್ದ ಭೂಪ್ರದೇಶ ಎಂದೂ ಕರೆಯಲಾಗುತ್ತದೆ