![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/65/Mombas_over_Kawarau_bridge_--Queenstown--.jpg/640px-Mombas_over_Kawarau_bridge_--Queenstown--.jpg&w=640&q=50)
ಬಂಗೀ ಜಿಗಿತ
From Wikipedia, the free encyclopedia
ಬಂಗೀ ಜಿಗಿತ ವು (ಇದನ್ನು "ಬಂಗಿ" ಜಿಗಿತ ಎಂದೂ ಉಚ್ಚರಿಸಲಾಗುತ್ತದೆ)[1][2] ಒಂದು ಸಾಹಸ ಚಟುವಟಿಕೆಯಾಗಿದ್ದು, ಸ್ಥಿತಿಸ್ಥಾಪಕ ಗುಣವುಳ್ಳ ಒಂದು ದೊಡ್ಡದಾದ ಹಗ್ಗಕ್ಕೆ ಕಟ್ಟಿಕೊಂಡು ಒಂದು ಎತ್ತರವಾದ ಕಟ್ಟಡ ಅಥವಾ ರಚನೆಯಿಂದ ಜಿಗಿಯುವುದನ್ನು ಇದು ಒಳಗೊಂಡಿರುತ್ತದೆ. ಎತ್ತರವಾದ ರಚನೆಯು ಸಾಮಾನ್ಯವಾಗಿ ಒಂದು ಕಟ್ಟಡ, ಸೇತುವೆ ಅಥವಾ ಕ್ರೇನಿನಂಥ ಒಂದು ನೆಲೆಗೊಳಿಸಿದ ಅಥವಾ ಸ್ಥಾಯಿಯಾಗಿರುವ ವಸ್ತುವಾಗಿರುತ್ತದೆ; ಆದರೆ, ನೆಲದ ಮಟ್ಟದಿಂದ ಮೇಲಕ್ಕೆ ತೂಗಾಡುವ ಸಾಮರ್ಥ್ಯವನ್ನು ಹೊಂದಿರುವ, ಒಂದು ಬಿಸಿ-ಗಾಳಿಯ-ಬಲೂನು ಅಥವಾ ಹೆಲಿಕಾಪ್ಟರ್ನಂಥ ಒಂದು ಚಲಿಸಬಲ್ಲ ವಸ್ತುವಿನಿಂದಲೂ ಜಿಗಿತವನ್ನು ಕೈಗೊಳ್ಳುವುದು ಸಾಧ್ಯವಿದೆ. ಹಿಂಪುಟಿತಗಳಿಂದ ಸಿಗುವಷ್ಟೇ ಪ್ರಮಾಣದಲ್ಲಿ ಮುಕ್ತ-ಜಿಗಿತದಿಂದಲೂ ರೋಮಾಂಚನವು ಸಿಗುತ್ತದೆ.[3] ವ್ಯಕ್ತಿಯೋರ್ವನು ಜಿಗಿದಾಗ, ಹಗ್ಗವು ಹಿಗ್ಗಿಸಲ್ಪಡುತ್ತದೆ ಮತ್ತು ಹಗ್ಗವು ಕ್ಷಿಪ್ರವಾಗಿ ಹಿಂದಕ್ಕೆ ಚಲಿಸಿದಾಗ ಜಿಗಿತಗಾರನು ಮತ್ತೆ ಮೇಲ್ಮುಖವಾಗಿ ಹಾರುತ್ತಾನೆ ಹಾಗೂ ಎಲ್ಲಾ ಶಕ್ತಿಯು ಸಂಪೂರ್ಣವಾಗಿ ಕರಗುವವರೆಗೂ ಮೇಲಕ್ಕೆ ಮತ್ತು ಕೆಳಕ್ಕೆ ಅವನು ತೂಗಾಡುವುದನ್ನು ಮುಂದುವರಿಸುತ್ತಲೇ ಇರುತ್ತಾನೆ.
![Thumb image](http://upload.wikimedia.org/wikipedia/commons/thumb/6/65/Mombas_over_Kawarau_bridge_--Queenstown--.jpg/320px-Mombas_over_Kawarau_bridge_--Queenstown--.jpg)
![Thumb image](http://upload.wikimedia.org/wikipedia/commons/thumb/e/ed/Bungie-Jumping.jpg/320px-Bungie-Jumping.jpg)
![Thumb image](http://upload.wikimedia.org/wikipedia/commons/thumb/0/09/BungyViewCairns.jpg/640px-BungyViewCairns.jpg)